ವಿಶ್ವರಂಗ ಭೂಮಿ...

ವಿಶ್ವರಂಗ ಭೂಮಿ ದಿನ ಮತ್ತು ಇಂದಿನ ರಂಗಭೂಮಿ_ಡಾ .ಎ.ಆರ್.ಗೋವಿಂದಸ್ವಾಮಿ

94
0
SHARE

ಇಂದಿನ ಜಾಗತೀಕರಣ ಸಂದರ್ಭದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿತೋರುತ್ತಿಲ್ಲ. ಜನತಂತ್ರವೇತಪ್ಪುದಾರಿಗೆ ಸಾಗುತ್ತಿದೆ.ಈ ಸಂದರ್ಭದಲ್ಲಿ‘ರಂಗ ಭೂಮಿ’ಜವಾಬ್ದಾರಿ ಹೆಚ್ಚಾಗಿದೆ.ನಿರಂತರಕಲಿಯುವಿಕೆಯನ್ನುಒತ್ತಾಯಿಸುವ ಕಲಾ ಪ್ರಕಾರಇದಾಗಿದೆ,ಅಲ್ಲದೆಒಂದುಸ್ಪಸ್ಥಸಮಾಜ, ಸ್ಪಸ್ಥ ಪರಿಸರವನ್ನು ಹಾಗೂ ಸ್ಪಸ್ಥಮನಸ್ಸು ನಿರ್ಮಾಣದಲ್ಲಿರಂಗ ಭೂಮಿಯ ಪಾತ್ರ ಮಹತ್ವದ್ದಾಗಿದೆ.

ನಾಟಕದಉದ್ದೇಶ ಮನೋರಂಜನೆಯಾಗಿದ್ದರೂ, ಈ ಮಾಧ್ಯಮಗಂಭೀರ ವಿಚಾರಗಳತ್ತ ಪ್ರೇಕ್ಷಕರ ಗಮನ ಸೆಳೆದು ಅವರನ್ನು ಚಿಂತನಾಶೀಲರನ್ನಾಗಿ ಮಾಡಿ, ಅರಿವು ನೀಡಿ, ಸಂಪೂರ್ಣ ವ್ಯಕ್ತಿತ್ವ ವಿಕಾಸ ಮಾಡುವ ಕಲಾ ಪ್ರಕಾರ.ಅಲ್ಲದೆ ನಾವು ಓದು ಬರಹದ ಮೂಲಕ ಪಡೆದಜ್ಞಾನಕ್ಕೆ ಒಂದು ಉದ್ದೇಶವನ್ನು ಗುರುತಿಸಿ ಅದನ್ನುಚಟುವಟಿಕೆಯಾಗಿ ಪರಿವರ್ತಿಸುತ್ತದೆ.ಪ್ರತಿಯೊಂದುಕ್ಷೇತ್ರದಲ್ಲೂಇಂದುರಂಗ ಭೂಮಿಯಅಗತ್ಯಕಂಡುಬರುತ್ತಿದೆ. ಶಿಕ್ಷಣ ಕ್ಷೇತ್ರ, ಮಾನವ ಸಂಪನ್ಮೂಲಅಭಿವೃದ್ಧಿಯಲ್ಲಿ, ವಿಜ್ಞಾನಕ್ಷೇತ್ರ,ಆರೋಗ್ಯ, ನೈರ್ಮಲ್ಯ, ಸಹಬಾಳ್ವೆ, ಕೋಮುಸೌಹಾರ್ಧತೆ, ಕುಟುಂಬ ಯೋಜನೆ, ಹದಿಹರೆಯದ ಸಮಸ್ಯೆ, ಸಾಕ್ಷರತೆ, ವಯಸ್ಕರ ಶಿಕ್ಷಣ ಹೀಗೆ ಪಟ್ಟಿ ಬೆಳೆಯುತ್ತದೆ.

ಮಾಹಿತಿಜ್ಞಾನ ಶಿಕ್ಷಣದ ಒಂದುಅಂಶವಾಗಿದ್ದರೂ ಸಹ ಅದೇಎಲ್ಲವುಅಲ್ಲ, ಒಂದು ಮಗುವಿನ ಜನ್ಮಜನ್ಯವಾದಎಲ್ಲ ಶಕ್ತಿ ಸಾಮರ್ಥ್ಯಗಳು ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ಇರಬಹುದಾದ ಹಿಂಜರಿಕೆ, ಕೀಳರಿಮೆ, ಸಂಕೋಚ, ಭಯದಂತಹ ದೌರ್ಬಲ್ಯಗಳನ್ನು ನಿವಾರಿಸಿ, ಏಕಾಗ್ರತೆ, ಶಿಸ್ತು, ಕ್ರಿಯಾತ್ಮಕತೆ, ಮೌಲಿಕಗುಣ, ಆದರ್ಶವ್ಯಕ್ತಿತ್ವ, ರಚನಾತ್ಮಕತೆ, ಕಲ್ಪನಾಶೀಲತೆ, ಕೌಶಲ್ಯವೃದ್ಧಿಗೆ, ಉಚ್ಚಾರ ಸ್ಪಷ್ಟತೆಗೆಆತ್ಮ ಸ್ಥೈರ್ಯ ಹೆಚ್ಚಲು, ಮನೋ ಆನಂದ ಪಡೆಯಲು ರಂಗಭೂಮಿ ಅಗತ್ಯಕೆಲಸ ಮಾಡುತ್ತಿದೆ.

ಆದರೆ‘ವಿಶ್ವರಂಗ ಭೂವಿ’ ದಿನದ ಈ ಸಂದರ್ಭದಲ್ಲಿಇಂತಹರಂಗ ಭೂಮಿ ವಲಯಎತ್ತ ಸಾಗುತ್ತಿದೆ ಎಂಬ ಅರಿವು ಹಾಗೂ ಚಿಂತನೆಅಗತ್ಯ. ರಂಗ ಭೂಮಿ ಮೂಲತ: ನಟರ ಮಾಧ್ಯಮ, ಇಲ್ಲಿ ನಟ-ಕಲಾವಿದರೆ ಮುಖ್ಯ ಎನ್ನುತ್ತೆವೆ.ಚಲಿತಕರ್ನಾಟಕರಂಗ ಭೂಮಿಕ್ಷೇತ್ರವನ್ನು ಗಮನಿಸಿದಾಗ, ರಂಗ ಭೂಮಿಯ ಮೂಲ ಆಶಯಗಳಿಗೆ ಎಲ್ಲೆಡೆ ಪೆಟ್ಟಾಗುತ್ತಿದೆ. ಹೀಗಾಗಿ ರಂಗ ಚಳವಳಿ ಕುಂಟಿತವಾಗುತ್ತಿದೆಯೇನೋ ಅನಿಸುತ್ತಿದೆ.ಕಾರಣಇಲ್ಲಿ ಹೊಂದಾಣಿಕೆಕೊರತೆಇದೆ, ಸಹೃದಯತೆಕ್ಷೀಣಿಸಿ, ವ್ಯಕ್ತಿಗತ ವಿಜೃಂಭಣೆ ಹೆಚ್ಚಾಗುವ ಲಕ್ಷಣಎಲ್ಲಡೆಕಾಣುತ್ತಿದ್ದೇವೆ.ಗುಂಪನ್ನೇ ಆಶ್ರಯಿಸುವ ರಂಗಭೂಮಿಗೆ ರಂಗ ವಿರೋಧಿಯಾಗಿ‘’ಏಕ ವ್ಯಕ್ತಿರಂಗ ಪ್ರಯೋಗ’’ಗಳು ಹೆಚ್ಚಾಗುತ್ತಿವೆ. ಟೀಮ್‌ವರ್ಕ್‌ನಲ್ಲೂ ಸಹಕಾರದಕೊರತೆ, ತಾಲೀಮಿಗೆಕಲಾವಿದರು ಶಿಸ್ತಿನಿಂದ ಬರುತ್ತಿಲ್ಲಆದರಲ್ಲೂರಂಗ ವಿಮರ್ಶೆಇನ್ನು ಶೈಕ್ಷಣಿಕ ಪಠ್ಯವಾಗಿದೊರಕುತ್ತಿಲ್ಲ,ರಂU ಭೂಮಿಯ ಪ್ರಕಾರಗಳು ಗಟ್ಟಿಗೋಳ್ಳುತ್ತಿಲ್ಲ. ರಂಗಭಾಷೆ, ರಂಗ ಸೌಂದರ್ಯದ ನಿಟ್ಟಿನಲ್ಲಿ ಕೆಲಸಗಳು ಆಗದಿರುವುದುದುರಾದೃಷ್ಟಕರ.

ನಾಟಕ ಸದಾ ಚಲನಶೀಲವಾದುದು ನಾಟಕವೇ ಒಂದು ಅನುಭವವಾಗಿದೆ. ಹಾಗಾಗಿಯೇ ಭರತತನ್ನ ನಾಟ್ಯ ಶಾಸ್ತ್ರದಲ್ಲಿ‘ಜೀವನವೇ ನಾಟP’ಎಂದಿದ್ದಾನೆ. ಒಂದು ನಾಟಕದ ಜೀವಾಳ ನಟ-ನಟಿಯರು ಇವರ ಅಭಿನಯ, ಸಂಭಾಷಣೆ, ಚಲನವಲನ ಮತ್ತು ಆಂಗಿಕಗಳು ಇವೆಲ್ಲವುಔಚಿತ್ಯ ಪೂರ್ಣವಾಗಿರಬೇಕು. ಎಲ್ಲರೂತಮ್ಮ ಪಾತ್ರಗಳನ್ನು ಅರ್ಥ ಮಾಡಿಕೊಂಡು, ಕತೆಯನ್ನು, ನಾಟಕದಲ್ಲಿನ ಸನ್ನಿವೇಶವನ್ನು, ಪಾತ್ರಗಳ ನಡುವೆಪರಸ್ಪರ ನಡೆಯುವ ವೃತ್ತಿ ವ್ಯಪಾರವನ್ನುಅರಿತು ನಟಿಸಬೇಕಾದ್ದು ಪ್ರತಿಯೋಬ್ಬ ನಟನ ಸವಾಲು, ಪಾತ್ರಗಳ ಪರಸ್ಪರಒಡನಾಟಕ್ಕೆ, ಪಾತ್ರಧಾರಿಗಳಲ್ಲಿ ಪರಸ್ಪರ ಹೊಂದಾಣಿಕೆಯುಅಗತ್ಯ,ಇದುಇಂದುಅಪರೂಪವಾಗುತ್ತಿದೆ.ಒಬ್ಬರನೊಬ್ಬರು ನಟರಾಗಿ, ಪಾತ್ರಗಳಾಗಿ ಅಷ್ಟೇ ಅಲ್ಲದೆ ನಾಟಕದ ಹೊರಗೂ ಸಾಮಾಜಿಕಜೀವನದಲ್ಲೂ ಸ್ನೇಹಿತರಾಗಿ, ಬಂಧುಗಳಾಗಿ ಅರ್ಥಮಾಡಿಕೊಂಡು ಬದುಕುವ ಹೃದಯವಂತಿಕೆಅಗತ್ಯ, ಸಹನಟರೊಂದಿಗೂ ಸಂವಹನೆ, ಸ್ಪಂಧನೆಅಗತ್ಯ.ಹೀಗಾದಾಗಲೇರಂಗ ಭೂಮಿ ಗಟ್ಟಿಗೊಳ್ಳಲು ಸಾಧ್ಯ.ಒಂದು ನಾಟಕ ಪ್ರಯೋಗವಾಗುವಾಗ, ನಿರ್ದೇಶಕನು ೩ನೇ ಬೆಲ್ಲಾಗುತ್ತಿದ್ದಂತೆ ಹಿನ್ನಲೆಗೆ ಸರಿಯುತ್ತಾನೆ. ಹಾಗೆಕೃತಿಗೆಕಾರಣನಾದ ನಾಟಕಕಾರ ಬಹು ಮುಖ್ಯನಾದರೂ ಅವನೂ ಸಹ ಪ್ರದರ್ಶನದ ವೇಳೆ ಹಿನ್ನೆಲೆಗೆ ಸರಿಯುತ್ತಾನೆ.ನಾಟಕ ಪ್ರಯೋಗ (ರಂಗಕೃತಿ) ಮುಗಿದಂತೆ ನಾಟಕಕಾರನ ಅಸ್ತಿತ್ವವೇ ಹೋಗಿ ಅವನ ನಾಟಕಕೃತಿ ಮಾತ್ರ ಉಳಿಯುವುದು.ಕೃತಿಯಲ್ಲಿ ನಟರ ಮೂಲಕ ಹೊರ ಹೊಮ್ಮುವ ಆಶಯಗಳಿಗೆ, ಅರ್ಥಗಳಿಗೆ ವೈಚಾರಿಕತೆಗೆ,ಧೋರಣೆU, ಶೈಲಿಗೆ ಹೊಂದಿಕೊಳ್ಳಬೇಕು ಆದರೆದೃರಾದೃಷ್ಟ ನಟ ಪ್ರಧಾನವಾಗಬೇಕಾದರಂಗ ಭೂಮಿಯಲ್ಲಿ,ಇಂದು ನಿರ್ದೇಶಕ, ನಾಟಕಕಾರ ಪ್ರಧಾನವಾಗುತ್ತಿದ್ದಾನೆ. ಈ ಧೋರಣೆ ಬದಲಾಗಬೇಕು.

ಇನ್ನು ಸಾಹಿತ್ಯವನ್ನೂ ಒಳಗೊಂಡಂತೆ ಎಲ್ಲ ಸೌಂದರ್ಯ ಶಾಸ್ತ್ರಗಳಮೀಮಾಂಸೆಯ ಪರಿಕಲ್ಪನೆಗಳನ್ನು ನೀಡಿದ್ದು ನಾಟ್ಯಶಾಸ್ತ್ರವೇ, ಸಾಹಿತ್ಯವನ್ನು ನಾಟ್ಯ ಶಾಸ್ತ್ರದರಸಧ್ವನಿ ಮುಂತಾದ ಮೀಮಾಂಸೆಯಲ್ಲಿ ನೋಡಲಾಗುತ್ತಿದೆ. ಆದರೆ ರಂಗ ಭೂಮಿಯಲ್ಲಿಇನ್ನು ಸೌಂದರ್ಯ ಮೀಮಾಂಸೆ (Esthtics ) ಬೆಳೆಯಬೇಕಾಗಿದೆ.

‘ರಂಗವಿಮರ್ಶೆ’ ಗಮನಿಸಿದಾಗ, ಸಾಹಿತ್ಯವಲಯದಲ್ಲಿ ಸಾಹಿತಿಗಳು ವಿಮರ್ಶೆಯಿಂದ ಜನಮಾನಸದಲ್ಲಿ ನಿಲ್ಲುವಂತೆ ಒಬ್ಬ ಪ್ರಭುದ್ದಕಲಾವಿದ ನಿಲ್ಲಲಾಗುತ್ತಿಲ್ಲ, ಸಾಹಿತ್ಯಕ್ಕೆ ಅಕ್ಷರರೂಪಕಟ್ಟಿಕೊಡಬಹುದು, ರಂಗ ಭೂಮಿಯಲ್ಲಿ ಅನುಭವವೇ ಆಧಾರ ಒಬ್ಬ ನಟನ ಪ್ರತಿಭೆಯನ್ನು ನೋಡಿಅನುಭವಿಸುವ ತಾಜಾತನ ಬರವಣಿಗೆಯಲ್ಲಿ ಮೂಡಿಸುವುದು ಬಹುತೇಕ ಕಷ್ಟವಾಗುತ್ತಿದೆ. ಹೀಗಾಗಿಯೇ ನಮ್ಮ ನಡುವೆ ಬದುಕಿದ್ದ ಮೇರುನಟರಾದಗುರುಮೂರ್ತಪ್ಪ, ಕಂದಗಲ್ ಹನುಮಂತರಾಯ, ವರದಾಚಾರ್ಯ, ಗುಬ್ಬಿವೀರಣ್ಣ, ನಾಗೇಶರಾಯ, ಮಹಮದ್ ಪೀರ್, ಹಿರಣ್ಣಯ್ಯಅವರಂತಹ ನಟನಾ ಪ್ರತಿಭೆಗಳನ್ನು ದಾಖಲಿಸುವಲ್ಲಿಯು ಅಕ್ಷರರೂಪಎಡವುತ್ತಿದೆ. ರಂಗ ಭೂಮಿಯ ಪ್ರತಿಯೊಂದು ಪ್ರಕಾರದಲ್ಲೂ ಕೌಶಲ್ಯಗಳಿಸಿದಂತವರು‘’ವಿಮರ್ಶೆ’’ ಮಾಡುವಂತಾಗಬೇಕು. ಅಲದೆ ರಂಗ ವಿಮರ್ಶೆಯು ಒಂದು ಶೈಕ್ಷಣಿಕಪಠ್ಯವಾಗಬೇಕು. ಶಿಕ್ಷಣದಲ್ಲಿ ರಂಗಭೂಮಿ ಪಠ್ಯಸಹ ಜಾರಿಗೆ ಬರಬೇಕುಎಂದು ಈ ವಿಶ್ವರಂಗ ಭೂಮಿ ದಿನದಂದು ಜವಾಬ್ಚಾರಿ ಇರುವ ರಂಗ ಮನಸುಗಳು ಈ ಬಗ್ಗೆ ಚಿಂತಿಸಬೇಕಾಗಿದೆ ಮತ್ತು ಒತ್ತಾಯಿಸಬೇಕಾಗಿದೆ.

(ಡಾ .ಎ.ಆರ್.ಗೋವಿಂದಸ್ವಾಮಿ)
ನಟ,ರಂಗತಜ್ಞ
9448462620
dr.govindaswamy@gmail.com