ಪಾಂಚಜನ್ಯ ಪ್ರತ...

ಪಾಂಚಜನ್ಯ ಪ್ರತಿಷ್ಠಾನದಿಂದ ವಿದ್ಯಾರ್ಥಿನಿಯರ ಸ್ವಾಸ್ಥ್ಯ – ಸಲಹೆ – ಸಂವಾದ

64
0
SHARE

ಹದಿಹರೆಯದಲ್ಲಿ ಸಾಮಾನ್ಯವಾಗಿ ಎದುರಾಗುವ ಪ್ರಶ್ನೆಗಳಿಗೆ ಮೌನವೇ ಉತ್ತರವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗಿ ಮೂಲ ಪ್ರತಿಭೆಯ ಅನಾವರಣಕ್ಕೆ ಅಡ್ಡಿಯನ್ನುಂಟುಮಾಡುತ್ತದೆ.

ಈ ದಿಸೆಯಲ್ಲಿ ಆಧ್ಯಾತ್ಮಿಕ ತಳಹದಿಯ ಮೇಲೆ ಅಕ್ಷರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನವು ತನ್ನ ಆರೋಗ್ಯ ಉಪಕ್ರಮವಾಗಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ಹೊರವಲಯದ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಪ್ರತಿಷ್ಠಾನದ ಮಹಿಳಾ ಸ್ವಯಂಸೇವಕರ ನೇತೃತ್ವದಲ್ಲಿ ವಿದ್ಯಾರ್ಥಿನಿಯರಿಗೆ ವೃತ್ತಿಪರ ತಜ್ಞರಿಂದ ಸಲಹೆ ಮಾರ್ಗದರ್ಶನ ಮಾಡುವ ಅವಲೋಕನ – ಅರಿತು ಪೂರೈಸಿರುವ ಡಾ ರಕ್ಷಾ ಆನಂದ್ ರವರು ನಡೆಸಿಕೊಟ್ಟರು. ಯುವ ವೈದ್ಯ ಡಾ ಕಾರ್ತೀಕ್ ವಿ ಬಾದರಾಯಣ್ ಸಾಮಾನ್ಯ ಆರೋಗ್ಯ ವಿಷಯವಾಗಿ ಮಾತನಾಡಿದರು.ಶಾಲಾ ವಿದ್ಯಾರ್ಥಿನಿಯರಿಗೆ ಅಗತ್ಯವಾದ ಶೌಚಾಲಯ ಕಿಟ್ ಅನ್ನು ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಓಂಕಾರ್ ನಾಯ್ಕರವರು ಉಪಸ್ಥಿತರಿದ್ದರು.

ವಿವರಗಳಿಗೆ : 9845075250