ಭಾರತ ರತ್ನ ಪಂ....

ಭಾರತ ರತ್ನ ಪಂ. ಭೀಮಸೇನ ಜೋಷಿಯವರ ೯೫ ನೆಯ ಹುಟ್ಟು ಹಬ್ಬ

80
0
SHARE


ಗದುಗಿನ ಕಲಾ ವಿಕಾಸ ಪರಿಷತ್ ಆಶ್ರಯದಲ್ಲಿ, ಭಾರತ ರತ್ನ ಪಂ. ಭೀಮಸೇನ ಜೋಷಿಯವರ ೯೫ ನೆಯ ಹುಟ್ಟು ಹಬ್ಬದ ಅಂಗವಾಗಿ, ೨ , ೩ ಮತ್ತು ೪ ನೆಯ ಪೆಬ್ರವರಿ ೨೦೧೭ ರಂದು ಮೂರು ದಿನಗಳ ಕಾಲ ನಡೆದು ಬಂದ ಭೀಮಸೇನ ಉತ್ಸವಕ್ಕೆ ದೆಹಲಿಯ ಪಂ. ಮಣಿ ಪ್ರಸಾದರ ಸಮಾರೊಪ ಸಂಗೀತದೊಂದಿಗೆ ಮಹಾಮಂಗಲ ಹಾಡಲಾಯಿತು. ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಹಮ್ಮಿಕೊಡಿರುವ ಬಂದ ಭೀಮಸೇನ ಉತ್ಸವದ ಸಮಾರೋಪ ಸಮಾರಂಭದ ದಿವ್ಯ ಸನ್ನಿಧಾನವನ್ನು ಪರಮ ಪೂಜ್ಯ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು ಶಿವಾನಂದ ಮಠ ಗದಗ ವಹಿಸಿಕೊಂಡು ಆಶಿರ್ವಚನ ನೀಡುತ್ತಾ, ಗದುಗಿನ ಹೆಮ್ಮೆಯ ಕಲಾ ವಿಕಾಸ ಪರಿಷತ್, ಉತ್ತರ ಭಾರತದ ಕಲಾವಿದರನ್ನು ಗದಗ ನಗರಕ್ಕೆ ಕರೆಸಿ ಅವರ ಸಂಗೀತ ಕೇಳುವ ಅವಕಾಶ ಕಲ್ಪಿಸಿಕೊಡುತ್ತಾ ಬಂದಿರುವ ಕಾರ‍್ಯಕ್ಕೆ ಅವಳಿ ನಗರದ ಕಲಾ ಪ್ರೇಮಿಗಳು ತನು ಮನ ಧನದ ಸಹಕಾರ ನೀಡಿ ಪ್ರೋತ್ಸಾಹಿಸ ಬೇಕೆಂದು ಹೇಳಿದರಲ್ಲದೇ ಶ್ರೀಮಠದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರದ ರಾಜಕೀಯ ಧುರೀಣರೊಂದಿಗೆ ಈ ಅದ್ದೂರಿ ಕಾರ‍್ಯದ ನೆರವಿಗಾಗಿ ನಾವೂ ಕಡಾ ಪ್ರಯತ್ನಿಸುತ್ತೆವೆ ಎಂದು ತಮ್ಮ ಆಶಿರ್ವಚನದಲ್ಲಿ ಅಪ್ಪಣೆ ಕೊಡಿಸಿದರು. ಇದೇ ಸಂದರ್ಭದಲ್ಲಿ ಪೂಜ್ಯರ ಲಿಂಗ ಹಸ್ತದಿಂದ ದೆಹಲಿಯ ಕಿರಾಣ ಘರಾಣೆಯ ಗಾಯಕ ಪಂ. ಮಣಿಪ್ರಸಾದ ಮತ್ತು ಡಾ. ಗಂಗೂಬಾಯಿ ಹಾನಗಲ್ಲ ಮ್ಯೂಜಿಕ್ ಫೌಂಡೇಷನ್ ಹುಬ್ಬಳ್ಳಿ ಪರವಾಗಿ ಬಾಬಣ್ಣ ಹಾನಗಲ್ ಇವರುಗಳಿಗೆ ಭೀಮಸೇನ ಸಮ್ಮಾನ ಅಂತರಾಷ್ಟ್ರೀಯ ಗೌರವ ಪ್ರಶಸ್ತಿ ಪ್ರದಾನಿಸಲಾಯಿತು.

ಕಿರಾಣ ಘರಾಣೆಯ ಸಂಗೀತ ದಿಗ್ಗಜ ಪಂಡಿತ ಮಣಿ ಪ್ರಸಾದ ನವದೆಹಲಿ ಇವರ ಉತ್ಸವದ ಸಮಾರೋಪ ಸಂಗೀತಕ್ಕೆ ಹಾರ‍್ಮೋನಿಯಂದಲ್ಲಿ ಪಂ. ದೀಪಕ ಪ್ರಸಾದ ನವದೆಹಲಿ, ತಬಲಾದಲ್ಲಿ ಬಸವರಾಜ ಹಿರೇಮಠ ಧಾರವಾಡ ಸಾಥ ನೀಡಿದರು. ಆರಂಭದಲ್ಲಿ ಮುಂಬೈನ ಮಾಧವಿ ನನಾಲ ಗಾಯನ ಸೇವೆ ಸಲ್ಲಿಸಿದರು ಇವರಿಗೆ ಸಹಕಲಾವಿದರಾಗಿ ಹಾರ‍್ಮೋನಿಯಂದಲ್ಲಿ ಸುಕುರಸಾಬ ಗದಗ, ಪ್ರೊ. ಹಣಮಂತ ಕುಮಾರ ಕೊಡಗಾನೂರ ತಬಲಾ ಸಾಥ ನೀಡಿದರು. ಎರಡೆಯನದಾಗಿ ಋತುರಾಜ ಭೋಸಲೆ ಪಾಟೀಲ ಪರಬಣಿ ಇವರಿಂದ ಪಖವಾಜ ಸೊಲೊ ಪ್ರೇಕ್ಷರನ್ನು ಆಕರ್ಷಸಿಸಿತು. ಇವರಿಗೆ ಪ್ರೊ. ನಾರಾಯಣ ಹಿರೆಕೊಳಚಿ ಲೆಹರಾ ಸಾಥ ನೀಡಿದರು. ಕೊನೆಯಲ್ಲಿ ಡಿ.ಜಿ.ಎಮ್. ಮೆಡಿಕಲ್ ಕಾಲೆಜಿನ ವೈದ್ಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಸಂಗ ಮತ್ತು ಭರತನಾಟ್ಯ ಕಾರ‍್ಯಕ್ರಮ ನಡೆದವು ವೈದ್ಯ ವಿದ್ಯಾರ್ಥಿಗಳಾದ ಶಿವಲೀಲಾ ಮತ್ತು ಶೋಭಾ ಕಾರ‍್ಯಕ್ರಮ ನಡೆಸಿಕೊಟ್ಟರು ಆರಂಭದಲ್ಲಿ ಡಾ. ಜಿ. ಬಿ. ಪಾಟೀಲ ಸರ್ವರಿಗೂ ಸ್ವಾಗತಕೊರಿದರು. ಕಲಾ ವಿಕಾಸ ಪರಿಷತ್ ಕಾರ‍್ಯಾಧ್ಯಕ್ಷ ಸಿ.ಕೆ.ಹೆಚ್.ಶಾಸ್ತ್ರೀ (ಕಡಣಿ) ಪ್ರಾಸ್ತಾವಿಕವಾಗಿ ಮಾತಾಡಿದರು. ಎಪ್. ಎ. ಹಿರೇಮಠ ವಂದಿಸಿದರು.