ಪಾಂಚಜನ್ಯ ಪ್ರತ...

ಪಾಂಚಜನ್ಯ ಪ್ರತಿಷ್ಠಾನದ ವತಿಯಿಂದ ಗ್ರಾಮೀಣ ಪ್ರದೇಶದ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ತರಬೇತಿ ಕಾರ್ಯಾಗಾರ

65
0
SHARE
?????????????????????

ಬೆಂಗಳೂರು ಹೊರವಲಯದ ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳಿನ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಗ್ರಾಮೀಣ ಪ್ರದೇಶದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪಾಂಚಜನ್ಯ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ಪರಿಣತ ಶಿಕ್ಷಕ ವೃಂದದಿಂದ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರವನ್ನು ಜನವರಿ ೨೯,೨೦೧೭ ಭಾನುವಾರ ಬೆಳಿಗ್ಗೆ ಏರ್ಪಡಿಸಲಾಗಿತ್ತು.

?????????????????????

ವಿದ್ಯಾರ್ಥಿಗಳ ಜೀವನದ ಪ್ರಮುಖ ಮೈಲಿಗಲ್ಲಾದ ೧೦ನೇ ತರಗತಿ ಪರೀಕ್ಷೆ -ಭವ್ಯ ಭವಿಷ್ಯದ ಪ್ರಥಮ ಸೋಪಾನ, ಗ್ರಾಮೀಣ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಆಧ್ಯಾತ್ಮಿಕತೆಯನ್ನಾಧರಿಸಿ ಅಕ್ಷರ ,ಆರೋಗ್ಯ ಕ್ಷೇತ್ರದಲ್ಲಿ ಸದ್ದಿಲ್ಲದೆ ಕ್ರಾಂತಿ ಮಾಡುತ್ತಿರುವ ಸಮಾಜಮುಖಿಸೇವಾ ಸಂಸ್ಥೆ ಪಾಂಚಜನ್ಯ ಪ್ರತಿಷ್ಠಾನದ ಶೈಕ್ಷಣಿಕ ಉಪಕ್ರಮದ ಫಲವಾಗಿ ನಡೆಯುತ್ತಿರುವ ಈ ಪರೀಕ್ಷಾಪೂರ್ವ ಕಾರ್ಯಾಗಾರದಿಂದಾಗಿ ಕಳೆದು ಹಲವು ವರ್ಷಗಳಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆಯಲು ಸಹಕಾರಿಯಾಗಿದೆ ಎಂದು ಆಯೋಜಕರಾದ ಪ್ರತಿಷ್ಠಾನದ ಸಂಸ್ಥಾಪಕ ಗೌರವ ಕಾರ್ಯದರ್ಶಿ ಮುರಳಿ ಎಸ್.ಕಾಕೋಳು ತಿಳಿಸಿರುತ್ತಾರೆ.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ, ಬೆಂ.ಉತ್ತರ ವಲಯದ ಕಾರ್ಯದರ್ಶಿ ಶ್ರೀ ನರೇಂದ್ರ ಎಂ.ರವರು ಚಾಲನೆ ನೀಡಿ ವಿದ್ಯಾರ್ಥಿಗಳು ಕೇವಲ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಮಾತ್ರ ಸಜ್ಜಾಗದೆ ಜೀವನವೆಂಬ ಮಹಾಪರೀಕ್ಷೆಗೆ ಸನ್ನದ್ಧರಾಗಲು ವಿದ್ಯಾರ್ಥಿಗಳಿಗೆ ಉಪದೇಶಿಸಿದರು. ಈ ಕಾರ್ಯಾಗಾರದಲ್ಲಿ ನಗರದ ಹಿರಿಯ ಶಿಕ್ಷಣ ತಜ್ಞ ಮತ್ತು ವಿಜಯ ಟೀಚರ‍್ಸ್ ಕಾಲೇಜು ಎನ್‌ಎಸ್‌ವಿಕೆ ನಿವೃತ್ತ ಮುಖ್ಯೋಪಾಧ್ಯರಾದ ಎಲ್ ಎಸ್ ರಾವ್ , ಬಸವನಗುಡಿ ನ್ಯಾಷನಲ್ ಪ್ರೌಢ ಶಾಲೆಯ ಪದ್ಮಾವತಿ, ಬೆಂಗಳೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜೆ ಕೆ ಗಂಗಾಧರ ರಾವ್ , ವಿಜಯ ಪ್ರೌಢಶಾಲೆಯ ಗುರುಪ್ರಸಾದ್ , ವಿಜಯ ಕಾಳೇಜಿನ ಅಂಭೃಣಿ, ಆರ್ ವಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಪದ್ಮಿನಿ ಮೊದಲಾದರವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಜ್ಜಾಗಲು ಪರೀಕ್ಷಾಪೂರ್ವ ತರಬೇತಿಯಲ್ಲಿ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸುವ ವಿಧಾನ ಮತ್ತು ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಮೂಡಿಸುವ ಕುರಿತು ಮಾರ್ಗದರ್ಶನ ಮಾಡುವರು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಓಂಕಾರ ನಾಯಕ್ ರವರು ಅಧ್ಯಕ್ಷತೆಯನ್ನು ವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಮಾಧ್ಯಮ ಸಮನ್ವಯಾಧಿಕಾರಿ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು. ಫೆಬ್ರವರಿ ತಿಂಗಳ ಮೂರು ಭಾನುವಾರ ಈ ತರಗತಿಗಳು ನಡೆಯಲಿದ್ದು ಆಸಕ್ತ ವಿದ್ಯಾರ್ಥಿ / ಪೋಷಕರು ಇದರ ಸದುಪಯೋಗವನ್ನು ಪಡೆಯಬಹುದು. ವಿವರಗಳಿಗೆ 9845075250 www.panchajanya.org

Report by: Jaraganhalli Kantharaju
9483439343