ತಾರಸಿ ಮತ್ತು ಕ...

ತಾರಸಿ ಮತ್ತು ಕೈತೋಟ_ KITCHEN AND TERRACE GARDENING

218
0
SHARE

ತಾರಸಿ ಮತ್ತು ಕೈತೋಟ
ಹಲವು ದಶಕಗಳ ಹಿಂದೆ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಬಹಳಷ್ಟು ಕುಟುಂಬಗಳು ತಮ್ಮ ಕುಟುಂಬದ ಬಹುತೇಕ ಹಣ್ಣು ಮತ್ತು ತರಕಾರಿಗಳು ಅವಶ್ಯಕತೆಯನ್ನು ಕೈತೋಟಗಳ ಮೂಲಕವೇ ಪೂರೈಸಿಕೊಳ್ಳುತ್ತಿದ್ದವು. ಕಾಲಕ್ರಮೇಣ, ನಗರೀಕರಣ ಮತ್ತು ಆಧುನಿಕ ಜೀವನ ಶೈಲಿಯ ಪರಿಣಾಮವಾಗಿ ಕೈತೋಟಗಳು ಕಡಿಮೆಯಾಗಿ ಬಹುತೇಕ ಕುಟುಂಬಗಳು ಹಣ್ಣು –ತರಕಾರಿಗಳನ್ನು ಸಂತೆ ಮತ್ತು ಮಾರುಕಟ್ಟೆಗಳ ಮೂಲಕ ಪೂರೈಸಿಕೊಳ್ಳುತ್ತಿವೆ.
ಸಮತೋಲನ ಆಹಾರವನ್ನು ದಿನ ನಿತ್ಯ ಸುಲಭವಾಗಿ ಸೇವಿಸುವುದಲ್ಲದೆ, ಕಡಿಮೆ ಸ್ಥಳಗಳಲ್ಲಿ, ತ್ಯಾಜ್ಯ ವಸ್ತುಗಳ ಬಳಕೆ , ನೀರಿನ ಪುನರ್ ಬಳಕೆ ಮತ್ತು ಕಡಿಮೆ ಖರ್ಚು ಒಳಗೊಂಡ ತಾರಸಿ ಮತ್ತು ಕೈತೋಟದಲ್ಲಿ ಹಣ್ಣು-ತರಕಾರಿಗಳನ್ನು ಬೆಳೆದು ಪೌಷ್ಠಿಕ, ಅಮತೋಲನ ಮತ್ತು ಆಹಾರ ಭದ್ರತೆಯನ್ನು ಮನೆ ಮಟ್ಟಿಗೆ ಒದಗಿಸಿಕೊಳ್ಳುವುದೇ ತಾರಸಿ ಮತ್ತು ಕೈತೋಟದ ಉದ್ದೇಶ. ಅಲ್ಲದೆ ಮನಸ್ಸಿಗೆ ಉಲ್ಲಾಸ ಮತ್ತು ಮಕ್ಕಳಲ್ಲಿ ಪರಿಸರ ಸಂಸ್ಕೃತಿ ಬೆಳೆಸಬಹುದಾಗಿದೆ.

ಉದ್ದೇಶಗಳು :
1. ನಗರ ಮತ್ತು ಪಟ್ಟಣ ಪ್ರದೇಶದ ನಾಗರೀಕರಿಗೆ ಸಮತೋಲನ ಆಹಾರ ಒದಗಿಸಲು ಹಣ್ಣು ಮತ್ತು ತರಕಾರಿಗಳನ್ನು ತಾರಸಿ ಮತ್ತು ಕೈತೋಟದಲ್ಲಿ ಸ್ವತಃಬೆಳಸುವುದು.
2. ಸಾವಯವ ತ್ಯಾಜ್ಯಗಳನ್ನು ಬಳಸಿಕೊಂಡು ಎರೆಹುಳು ಗೊಬ್ಬರ, ಕಾಂಪೋಸ್ಟ್ ಇತ್ಯಾದಿಗಳನ್ನು ತಯಾರಿಸಿಕೊಂಡು ಮರುಬಳಕೆ , ಮಳೆ ನೀರು ಕೊಯ್ಲು ಹಾಗೂ ಅಡಿಗೆ ಮನೆಯಲ್ಲಿ ಬಳಕೆಯಾದ ನೀರನ್ನು ಮರುಬಳಕೆ ಮಾಡಿಕೊಂಡು ತಾಜಾ ತರಕಾರಿಗಳನ್ನು ಬೆಳೆಸುವುದು
3. ಕುಟುಂಬದ ಸದಸ್ಯರು ಅದರಲ್ಲೂ ಮಹಿಳೆಯರು ಮತ್ತು ಮಕ್ಕಳಲ್ಲಿ ತಾರಸಿ ಮತ್ತು ಕೈತೋಟಗಳಲ್ಲಿ ಆಸಕ್ತಿ ಮೂಡಿಸಿ, ದೈಹಿಕ/ ಮಾನಸಿಕ ಆರೋಗ್ಯದ ಕಾಳಜಿವಹಿಸುವುದು.
4. ಹೊಸ ಅವಿಷ್ಕಾರಗಳಾದ Hydroponics, Aeroponics, Soilless culture ಮತ್ತು ಬಯೋಡೈಜೆಸ್ಟರ್/ಜೀವಾಮೃತ ಇತ್ಯಾದಿಗಳನ್ನು ತರಕಾರಿ ಉತ್ಪಾದನೆಯಲ್ಲಿ ಅಳವಡಿಸಿಕೊಳ್ಳುವುದು.

ಈ ನಿಟ್ಟಿನಲ್ಲಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನ ಕಾರ್ಯಕ್ರಮವನ್ನು ರಾಜ್ಯದ ಕೆಲವು ಜಿಲ್ಲೆಗಳಲ್ಲಿ (ಬೆಂಗಳೂರು ನಗರ ,ಮೈಸೂರು, ದಕ್ಷಿಣ ಕನ್ನಡ,ಚಿಕ್ಕಮಗಳೂರು,ತುಮಕೂರು,ಹಾಸನ, ಶಿವಮೊಗ್ಗ, ದಾವಣಗೆರೆ,ಧಾರವಾಡ, ಗುಲ್ಬರ್ಗಾ, ಬಾಗಲಕೋಟೆ, ಬೀದರ್ ಮತ್ತು ಬೆಳಗಾಂ) ಹಮ್ಮಿಕೊಳ್ಳಲಾಗಿದೆ. ಸಂಬಂದಿಸಿದಂತೆ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಕೈತೋಟ/ತಾರಸಿ ತೋಟಗಳ ಪ್ರಾತ್ಯಕ್ಷತೆ ಕೈಗೊಂಡು , ಸಾರ್ವಜನಿಕರಲ್ಲಿ ಅರಿವು , ಆಸಕ್ತಿ ಮತ್ತು ಉತ್ತೇಜನ ಮೂಡಿಸುವ ಉದ್ದೇಶವಾಗಿರುತ್ತದೆ.
1. ಕೈತೋಟ: ಕೈತೋಟ ಒಂದು ಕಲೆ. ಹೊರಗಿನಿಂದ ಏನನ್ನು ಕೊಂಡು ತರದೆ ಅಡಿಗೆ ಮನೆಯ ತ್ಯಾಜ್ಯ, ಕಸಕಡ್ಡಿ, ಸಗಣಿ, ಗಂಜಲ ಇತ್ಯಾದಿಗಳನ್ನು ಉಪಯೋಗಿಸಿ ಅಂದವಾದ ಕೈತೋಟದಲ್ಲಿ ಹಣ್ಣು ತರಕಾರಿ ಬೆಳೆಸಬಹುದು ಕೈತೋಟ ಮಾಡುವುದು ಖುಷಿ ಕೊಡುವ ಹವ್ಯಾಸ ಮತ್ತು ಮನೆ ಮಂದಿಗೆ ತಾಜಾ ತರಕಾರಿ ಹಣ್ಣುಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಒದಗಿಸುವ ವಿಧಾನ. ಋತುಮಾನಕ್ಕನುಗುಣವಾಗಿ ಬೆಳೆಯ ಆಯ್ಕೆ ಬೆಳೆ ಪರಿವರ್ತನೆ, ಏರು ಮಡಿಗಳ ನಿರ್ವಹಣೆ ಸರಿಯಾಗಿ ಮಾಡುವುದರ ಮೂಲಕ ಕೈತೋಟ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ.

2. ತಾರಸಿ ತೋಟ: ಕೈತೋಟ ಮಾಡಲು ಸ್ಥಳ ಇಲ್ಲದೆ ಇರುವ ಪಕ್ಷದಲ್ಲಿ ಮನೆಯ ತಾರಸಿ ಮೇಲೆ ಕುಂಡಗಳಲ್ಲಿ ಸುಲಭವಾಗಿ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಯಬಹುದು. ತಾರಸಿ ತೋಟದಲ್ಲಿ ಸಾವಯವ ಗೊಬ್ಬರ ಉಪಯೋಗಿಸಿ ತರಕಾರಿ ಬೆಳೆಯವು ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.ವಿವಿಧ ಮಾದರಿ ಮತ್ತು ವಸ್ತುಗಳಿಂದ ಮಾಡಿದ ಕುಂಡಗಳನ್ನು ತರಕಾರಿ ಬೆಳೆ ಬೆಳೆಸಲು ಉಪಯೋಗಿಸಬಹುದು ಹಾಗೂ ಹೀಗೆ ಬೆಳೆಸಿದ ತರಕಾರಿಗಳು ಶುಚಿಯಾಗಿಯೂ, ರುಚಿಯಾಗಿಯೂ ಇರುತ್ತದೆ.

3. ಜೈವಿಕ ತ್ಯಾಜ್ಯ ನಿರ್ವಹಣೆ: ತಾರಸಿ/ ಕೈತೋಟಗಳಲ್ಲಿನ ಸಸಿಗಿಡಗಳ ತ್ಯಾಜ್ಯ/ಅಡಿಗೆ ಮನೆ ತ್ಯಾಜ್ಯಗಳನ್ನು ಸದ್ಬಳಕೆ ಮಾಡುವುದು. ಅಂದರೆ ಎರೆಹುಳು ಗೊಬ್ಬರ/ ಜೀವಾಮೃತ ಬಯೋಡೈಜೆಸ್ಟರ್ ರೂಪದಲ್ಲಿ ಪುನರ್ ಬಳಕೆ ಮಾಡಿಕೊಂಡು ತ್ಯಾಜ್ಯ ವಸ್ತುಗಳಿಂದಾಗುವ ಮಾಲಿನ್ಯ ತಡೆದು, ತಾಜಾ ಹಣ್ಣು ಮತ್ತು ತರಕಾರಿಗಳನ್ನು ಬೆಳೆಸಲು ಗೊಬ್ಬರವಾಗಿ ಬಳಸುವುದು.

4. ನೀರಿನ ಸದ್ಬಳಕೆ ನಿರ್ವಹಣೆ: ಹೆಚ್ಚುತ್ತಿರುವ ಜನಸಂಖ್ಯೆಗೆ ಅಥವಾ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ, ನೀರು ಪೋಲಾಗುವುದನ್ನು ತಡೆದು, ಸದ್ಬಳಕೆ ಮಾಡುವುದು ಎಲ್ಲರ ಬಹು ಮುಖ್ಯ ಕರ್ತವ್ಯ. ಈ ನಿಟ್ಟಿನಲ್ಲಿ, ಅಡುಗೆ ಮನೆಯಲ್ಲಿ ಬಳಕೆಯಾದ ನೀರನ್ನು ಪನರ್ ಬಳಕೆ ಮಾಡುವ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಹಾಗೂ ತಾರಸಿ ಮೇಲೆ ಬಿದ್ದ ಮಳೆ ನೀರನ್ನು ಕೊಯ್ಲುಮಾಡಿ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಸಲು ಈ ನೀರನ್ನು ಬಳಸುವುದು ಹಾಗೂ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು.

ಹೈಡ್ರೋಪೋನಿಕ್ಸ್: ಮಣ್ಣಿಲ್ಲದೆ ಹಣ್ಣು ಮತ್ತು ತರಕಾರಿಗಳನ್ನು ಪೋಷಕಾಂಶವುಳ್ಳ ನೀರಿನಲ್ಲಿ ಬೆಳೆಸುವುದು. ಕೆಲವೊಮ್ಮೆ ಮರಳು/ ಜಲ್ಲಿ ಕಲ್ಲುಗಳ ಆಧಾರದಲ್ಲೂ ಬೆಳೆಸಬಹುದು. ಇಲ್ಲಿ ಪೋಷಕಾಂಶಗಳ ದ್ರಾವಣವನ್ನು ಕ್ರಮೇಣವಾಗಿ ಪಂಪ್ ವ್ಯವಸ್ಥೆಯಿಂದ ಗಿಡಗಳಿಗೆ ಸರಬರಾಜು ಮಾಡಿ ಬೆಳೆಸುವುದು. ಗಿಡಗಳು ಬೆಳೆದಂತೆ concentration of solution ಮತ್ತು frequency of pumping ಗಳನ್ನು ಹೆಚ್ಚಿಸಿಕೊಳ್ಳುವುದು. ಈ ವಿಧಾನದಲ್ಲಿ ಎಲೆಜಾತಿ ತರಕಾರಿಗಳನ್ನು ಉತ್ಕ್ರಷ್ಟವಾಗಿ ಬೆಳೆಸಬಹುದಾಗಿದ್ದು, ಈ ಫಸಲು, ಭೂಮಿಯಲ್ಲಿ ಬೆಳೆದ ಬೆಳೆಗೆ ಸಮವಾಗಿರುತ್ತದೆ. ಆದರೆ ಯಂತ್ರೋಪಕರಣ ವ್ಯವಸ್ಥೆಗೆ ಹೆಚ್ಚಿನ ಹಣ ಹೂಡಿಕೆ ಅಗತ್ಯವಿರುತ್ತದೆ. ಈ ಪದ್ದತಿಯನ್ನು ನುರಿತ ವಿಜ್ಞಾನಿಗಳಿಂದ ತರಬೇತಿ ಅಥವಾ ಅನುಭವವುಳ್ಳ ವಿಷಯತಜ್ಞರನ್ನು ಬಳಸಿಕೊಂಡು ಅನುಷ್ಠಾನಗೊಳಿಸುವುದು.

ಏರೋಪೋನಿಕ್ಸ್: ಗಿಡಗಳನ್ನು ಗಾಳಿ ಮತ್ತು ತೇವಾಂಶ ವಾತಾವರಣದಲ್ಲಿ ಮಣ್ಣಿಲ್ಲದೆ ಬೆಳೆಸುವ ಪದ್ಧತಿ. ಗಿಡಗಳನ್ನು ಮಣ್ಣಿಲ್ಲದೆ ಕೇವಲ ಪೋಷಕಾಂಶಗಳನ್ನು ಬೇರುಗಳಿಗೆ ಸಿಂಪರಣೆ ಮಾಡಿ ಬೆಳೆಸಬಹುದು. ಈ ಚಟುವಟಿಕೆಯನ್ನು ಒಂದು ಸೀಮಿತ ಒಳಾಂಗಣ (ಏರೋಪೋನಿಕ್ಸ್ ಬಾಕ್ಸ್) ಕಾಂಡ ಮತ್ತು ಬೇರುಗಳಿಗೆ ಪೋಷಕಾಂಶ ಸಿಂಪರಣೆ ಮಾಡಿ ಬೇರುಗಳಿಗೆ ಯತೇಚ್ಛವಾದ ಆಮ್ಲಜನಕ ಒದಗಿಸಿ ಗಿಡಗಳನ್ನು ಬೆಳೆಸುವುದು. ಇಲ್ಲಿ ನಿಯಂತ್ರಿತ ವಾತಾವರಣ ನಿರ್ವಹಣೆ ಮುಖ್ಯವಾಗಿದ್ದು, ಒಳ್ಳೆಯ ಗಿಡ ಬೆಳವಣಿಗೆಗೆ (ಕೀಟ/ರೋಗರಹಿತ) ಸಹಾಯಕವಾಗಿರುತ್ತದೆ.

ಸಾಯಿಲ್ ಲೆಸ್ ಕಲ್ಚರ್ : ಈ ತಾಂತ್ರಿಕತೆಯೂ ಸಹ ಮಣ್ಣಿಲ್ಲದೆ ಕೃತಕವಾದ Substrate /ತಲಾಧಾರದಲ್ಲಿ ಪೋಷಕಾಂಶಗಳನ್ನು ಒದಗಿಸಿ ಗಿಡಗಳನ್ನು ಬೆಳೆಸುವ ವಿದಾನ. ಇತ್ತೀಚೆಗೆ ಈ ತಾಂತ್ರಿಕತೆಯಲ್ಲಿ ಕೊಕೋಪೀಟ್, ಸ್ಪಾಘನಮ್ ಪೀಟ್, ವೆರ್ಮಿಕ್ಯುಲೈಟ್, ಬಾರ್ಕ್ ಚಿಪ್ಸ್,ರೈಸ್ ಹಲ್ಸ್, ಬಗಾಸ್ಸೆ, ಸೆಡ್ಜ ಪೀಟ್ ಮತ್ತು ಸಾಡಸ್ಟ್ಗಳನ್ನು ಬಳಸಿಕೊಂಡು ಗಿಡಗಳನ್ನು ಬೆಳೆಸಲಾಗುತ್ತಿದೆ. ಹಣ್ಣು ಮತ್ತು ತರಕಾರಿಗಳನ್ನು ಬೆಳೆಸಲು ಸೂಕ್ತವಾದ ವಿಧಾನವಾಗಿರುತ್ತದೆ.

ಜನರ ಜೀವನ ಶೈಲಿಯ ಬದಲಾವಣೆ ಪರಿಣಾಮವಾಗಿ, ನಗರವಾಸಿಗಳು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದ್ದು, ಸಕ್ಕರೆ ಕಾಯಿಲೆ , ಹೃದಯ ಸಂಬಂಧಿ ಅಸಮತೋಲನಗಳು ಮತ್ತು ರಕ್ತ ಒತ್ತಡ ಸಮಸ್ಯೆಗಳು ಉಲ್ಬಣಗೊಂಡಿವೆ. ತಾರಸಿ ಮತ್ತು ಕೈತೋಟಗಳ ಅಭಿವೃದ್ದಿ ಚಟುವಟಿಕೆಗಳ ಉತ್ತೇಜನದಿಂದಾಗಿ, ನಾಗರೀಕರು ಉತ್ತಮ ಗುಣಮಟ್ಟ ಹಣ್ಣು ಮತ್ತು ತರಕಾರಿಗಳನ್ನು ಉತ್ಪಾದಿಸುವುದರ ಜೊತೆಗೆ, ತೋಟದ ಸಾಗುವಳಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

-Article by: Jaraganahalli Kantharaju
Editor
+ 91 9483439343


Source By: GOVERNMENT OF KARNATAKA
DEPARTMENT OF HORTICULTURE

Mr. H.M Krishnamurthy
Senior Assistant Director of Horticulture
(Co-ordinator), Biocentre,
Hulimavu, Bangalore.


Kitchen and Terrace gardening
Gardening provides a diversity of fresh food that improves the quantity and quality of nutrients available to the family. The efforts of a few individuals to grow plants in post and containers on the roof tops and balconies has set in motion the traditions of urban gardening. The following objectives can be achieved through urban gardening.
1. To achive sustainable living and to have access to fresh and safe food.
2. To inculcate the sense of responsibility among urbanites to segregate bio waste and use it effectively.
3. To inculcate the bonding between the nature and children during the stages of life.
4. To preserve the environment, increase green cover, reduce carbon print and protect health of public by spreading social awareness on organic farming/gardening.
5. To produce low cost, nutritive and organic fruits and vegetables by using kitchen waste, plant remnants and efficient usage of water.
In this direction, the Department of Horticulture, under the scheme Rastriya Krishi Vikasa (RKVY) has brought out a project on Promotion of Kitchen and terrace gardening in selected districts viz., Bangalore urban, Tumakur, Chikamagalore, shimoga, Davanagare, Gulbarga, Hasan, Dharwada, Dakshina Kannada, Bidar , Mysore , Bagalkote, Belgaum and Mandya in Such a way to inspire the citizens to raise their own vegetable and fruit plants in available spaces in the backyards and on terraces .

Thrust Area :The objectives envisaged in development of intrinsic economic and nutritional merit to get balanced and safety food by growing vegetables and fruits with limited utilization of space, water, effort and money to have attachment with nature.
The suggested types of gardening are kitchen and terrace gardening, Hydroponics/Aeroponics/soilless culture, Bio waste management (Vermicompost/bio digester)and efficient usage of kitchen water Management.
Kitchen Gardening : kitchen gardening is an art and hobby to plan and grow vegetables in a smaller area without much dependence on outside inputs by which a beautiful garden is created for continuous supply of fresh fruits and vegetables to the family .By selecting the seasonal varieties of vegetables, one can get fresh vegetables through out the year .
Terrace gardening : terrace gardening is a continuation of the ground garden .It is also a substitute for ground garden, wherein due to limitation of space, the cultivation of plants is taken up in containers or post on rooftops, balconies, verandahs and pavements.
Bio waste Management : Efficient usage of plant waste /kitchen waste can be effectively in kitchen and terrace gardening for fruits and vegetables. The different types of organic composting are vermicompost/Biodigester /Jeevamrutha etc,. This recycling of Bio waste will give us pollution free environment and also manure to grow pest free fruits and vegetables .
Efficient water Management :To meet the requirement of increasing population and to protect water for our next generation , it is our prime responsibility to preserve, recycle and avoid wastage of water of in this direction, used kitchen water can be recycled for growing fruits and vegetables. The rain water harvesting and drip irrigation systems are to be best utilized for gardening purpose.

Hydroponics : Hydroponics is the method of growing fruits and vegetable in nutrient solution without soil. Some times sand /stone pebbles can be used as support material, Here the plants are grown by the supply of nutrient solution through pumping system. As plant grows , the concentration of solution and frequency of pumping will be increased . In this method , leafy vegetables can be grown easily and the yield of which will be similar to the vegetable grown in soil. But initial cost of equipment installation will be high and needs the guidance of resource person /scientist.
Aeroponics: Aeroponics is the process of growing plants in air or mist environment without the use of soil or an aggregate medium . Aeroponic growing is to grow plants suspended in a closed or semi-closed environment by sprayer the dangling roots and lower stem of plants with an atomized or sprayed nutrient –rich water solution. Controlled environment of this type advances the plant growth, development, flowering and fruiting for any given species and cultivars.

Soilless culture : In this technology, instead of soil cocopeat, spaghnum peat , vermiculite, bark chips , ricehulls , bagasse, sedge peat and sawdust are used constituents in soilless culture for improved growth of plants . It may be used for growing vegetables as either solid or liquid medium system .
Kitchen and Terrace gardening allows one to grow vegetables and fruits in small open spaces such as backyard , terrace , even balconies and kitchen windows. With all above advantages of the kitchen and terrace gardening , being it as hobby. To get mental and physical fitness through gardening ,increase green cover and also get nutritive and safety food .

-Jaraganahalli Kantharaju
Editor
+ 91 9483439343


Mr. H.M Krishnamurthy
Senior Assistant Director of Horticulture
(Co-ordinator), Biocentre,
Hulimavu, Bangalore.

Source By: GOVERNMENT OF KARNATAKA
DEPARTMENT OF HORTICULTURE