ಘಮ ಘಮ ಕಾಫಿಯ ಸ...

ಘಮ ಘಮ ಕಾಫಿಯ ಸ್ವಾದಕ್ಕೆ ಬೆರಗಾಗದವರು ಯಾರಿದ್ದಾರೆ ಹೇಳಿ? Reached 10000 Views

320
1
SHARE

logo4345
ಆರೋಗ್ಯವನ್ನು ವೃದ್ಧಿಸಲು ದಿನಕ್ಕೊಂದು ಕಪ್ ಎಂ.ಡಿ.ಪಿ ಕಾಫಿ ಸಾಕು ಕಣ್ರಿ!!!
ಕಾಫಿಯ ಚರಿತ್ರೆ 09ನೇ ಶತಮಾನದಲ್ಲಿ ಆರಂಭವಾಗುತ್ತದೆ. ಇತಿಯೋಪಿಯದಲ್ಲಿ ಮೊದಲು ಬಳಕೆಗೆ ಬಂದ ಕಾಫಿ, ಈಜಿಪ್ಟ್ ಮತ್ತು ಯುರೋಪಗಳ ಮುಖಾಂತರ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಹಬ್ಬಿತು. “ಕಾಫಿ” ಎಂಬ ಪದ ಇತಿಯೋಪಿಯದ “ಕಾಫ” ಎಂಬ ಪ್ರದೇಶದ ಹೆಸರಿನಿಂದ ಉತ್ಪನ್ನವಾದದ್ದು ಎಂದು ನಂಬಲಗಿದೆ. ಕಾಫಿ 15ನೇ ಶತಮಾನದಲ್ಲಿ ಪರ್ಷಿಯಾ, ಈಜಿಪ್ಟ್, ಉತ್ತರ ಆಫ಼್ರಿಕ ಮತ್ತು ಟರ್ಕಿಗಳನ್ನು ತಲುಪಿತು. 1475 ರಲ್ಲಿ ಈಸ್ತಾನ್ ಬುಲ್ ನಗರದಲ್ಲಿ ಮೊದಲ “ಕಾಫಿ ಹೋಟೆಲ್” ಆರಂಭವಾಯಿತು.

ಕಾಫಿಯ ಉತ್ತೇಜನಕಾರಿ ಗುಣವನ್ನು ಗಮನಿಸಿ 1511 ರಲ್ಲಿ ಮೆಕ್ಕಾದಲ್ಲಿ ಇದರ ಉಪಯೋಗವನ್ನು ನಿμಧಿಸಲಾಯಿತು. 1532 ರಲ್ಲಿ ಕೈರೋ ನಗರದಿಂದಲೂ ಕಾಫಿ ನಿμಧಿತವಾಯಿತು. ಆದರೆ ಕಾಫಿಯ ಜನಪ್ರಿಯತೆಯ ಕಾರಣದಿಂದಾಗಿ ಕೆಲ ವμಗಳ ನಂತರ ಕಾಫಿಯ ಮೇಲಿನ ನಿμಧವನ್ನು ಹಿಂತೆಗೆದುಕೊಳ್ಳಲಾಯಿತು. 17 ಶತಮಾನದ ವೇಳೆಗೆ ಯೂರೋಪಿನಲ್ಲಿ ಜನಪ್ರಿಯವಾದ ಕಾಫಿಯನ್ನು ಮೊದಲ ಬಾರಿಗೆ ಡಚ್ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾರಂಭಿಸಿದರು. ಇಂಗ್ಲೆಂಡಿನ ಕಾಫಿ ಮನೆಗಳು ಜನಪ್ರಿಯ ವ್ಯಾಪಾರ ಕೇಂದ್ರಗಳೂ ಆದವು. ಕಾಫಿ ಗಿಡಗಳಲ್ಲಿ ಎರಡು ಪ್ರಭೇದಗಳಿವೆ. ಅರಾಬಿಕ ಮತ್ತು ರೋಬಸ್ಟ. ಅರಾಬಿಕ ತಳಿ ಇತಿಯೋಪಿಯದಲ್ಲಿ ಉಗಮಗೊಂಡಿದ್ದಾದರೆ, ರೋಬಸ್ಟ ತಳಿ ಇಂದಿನ ಉಗಾಂಡ ದೇಶದಲ್ಲಿ ಉಗಮಗೊಂಡದ್ದು. ರೋಬಸ್ಟ ತಳಿಯ ಕಾಫಿ ಬೀಜಗಳು ಹೆಚ್ಚು ಕೆಫೇನ್ ಅಂಶವನ್ನು ಹೊಂದಿದ್ದು ಹೆಚ್ಚು ಕಹಿಯಾಗಿರುತ್ತವೆ. ಆದರೆ ಇವುಗಳನ್ನು ಹುರಿದಾಗ ಬರುವ ಸ್ವಲ್ಪ ವಾಸನೆಯಿಂದಾಗಿ ಅರಾಬಿಕ ತಳಿಯ ಕಾಫಿ ಹೆಚ್ಚು ಜನಪ್ರಿಯಗೊಂಡಿತು. ಕಾಫಿ ವಿಶ್ವದ ಹೆಚ್ಚು ಜನಪ್ರಿಯ ಪೇಯವಾಗಿದೆ. ಆದರೆ ಬಳಕೆಯ ದೃಷ್ಟಿಯಿಂದ ಗಮನಿಸಿದರೆ ಟೀ ಅತಿ ಹೆಚ್ಚು ಕುಡಿಯಲ್ಪಡುವ ಪೇಯ. ಇದಕ್ಕೆ ಕಾರಣ ಕಾಫಿ ಸೇವನೆ ಆರೋಗ್ಯಕ್ಕೆ ಮಾರಕ ಎಂದು ಹರಡಿಸಿರುವ ತಪ್ಪು ಮಾಹಿತಿ.

ಅತಿಯಾದರೆ ಅಮೃತವೂ ವಿμ ಎಂಬ ಸತ್ಯಕ್ಕೆ ಕಾಫಿಯೂ ಹೊರತಲ್ಲ. ಆದರೆ ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ ಕಾಫಿ ನಿಜಕ್ಕೂ ಆರೋಗ್ಯಕ್ಕೆ ಉತ್ತಮ. ಆರೋಗ್ಯಕರ ಅಂಶವುಳ್ಳ ಕೆಫೇನ್ ಜೊತೆ Caffeic Acid, Ferulic ಮತ್ತು Chlorogenic Acid ಎಂಬ ಪೋμಕಾಂಶಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ನೆರವಾಗುತ್ತವೆ. ಮುಖ್ಯವಾಗಿ ನಮ್ಮ ಕ್ರಿಯಾಶೀಲತೆ ಕುಂಠಿತವಾಗಲು ಕಾರಣವಾದ Adrenal Fatigue ಎಂಬ ಸುಸ್ತನ್ನು ಹೋಗಲಾಡಿಸುವಲ್ಲಿ ಈ ಪೋμಕಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಕಾಫಿ ಕುಡಿದ ಬಳಿಕ ಹಾಯೆನಿಸುವುದು ಇದೇ ಕಾರಣಕ್ಕಾಗಿ.

ಹೃದಯಕ್ಕೆ ಉತ್ತಮ: ಕಾಫಿಯಲ್ಲಿರುವ ಕೆಫೇನ್ ಹೃದಯಕ್ಕೆ ಉತ್ತಮವಾಗಿದೆ. ಹೇಗೆಂದರೆ ರಕ್ತನಾಳಗಳ ಒಳಗೆ ಜಿಡ್ಡುಪದಾರ್ಥಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಅಂಟಿಕೊಂಡು ತಿರುವು ಮತ್ತು ಕವಲುಗಳಿರುವ ಸ್ಥಳಗಳಲ್ಲಿ ಒಳಭಾಗದ ವ್ಯಾಸವನ್ನು ಕಿರಿದುಗೊಳಿಸುತ್ತವೆ. ಇದರ ಮೂಲಕ ರಕ್ತ ಹಾದುಹೋಗಲು ಹೃದಯ ಹೆಚ್ಚಿನ ಒತ್ತಡದಿಂದ ನೂಕಬೇಕಾಗುತ್ತದೆ. ಕಾಫಿಯಲ್ಲಿರುವ ಕೆಫೇನ್ ಈ ಜಿಡ್ಡುಗಳನ್ನು ಸಡಿಲಗೊಳಿಸಿ ಹೃದಯದೊತ್ತಡವನ್ನು ಕಡಿಮೆಗೊಳಿಸುತ್ತದೆ.

ತೂಕ ಇಳಿಸಲು ನೆರವಾಗುತ್ತದೆ: ತೂಕ ಇಳಿಸಲು ವ್ಯಾಯಮದಲ್ಲಿ ಹೆಚ್ಚಳ ಮತ್ತು ಆಹಾರದಲ್ಲಿ ಕಡಿಮೆ ಮಾಡುವುದು ಅನಾರೋಗ್ಯಕರ ವಿಧಾನವಾಗಿದೆ. ಆರೋಗ್ಯಕರವಾದ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ದೇಹದ ಕೊಬ್ಬನ್ನು ಹೆಚ್ಚು ಬಳಸುವ ಆಹಾರಗಳನ್ನು ಸೇವಿಸುವುದು, ವ್ಯಾಯಮವನ್ನು ಹೆಚ್ಚಿಸುವುದು, ಅದಕ್ಕೆ ತಕ್ಕನಾದ ಆಹಾರಗಳನ್ನು ಸೇವಿಸುವುದು ಸಹಾ ಅಗತ್ಯವಾಗಿದೆ. Thermogenisis ಎಂಬ ವಿಧಾನದಲ್ಲಿ ಜೀರ್ಣಗೊಳಿಸಲು ಕಠಿಣವಾಗಿದ್ದು ಹೆಚ್ಚಿನ ಕೊಬ್ಬನ್ನು ಬಳಸುವ ಕಾರಣ ದೇಹ ಶೀಘ್ರವಾಗಿ ಅನಗತ್ಯ ಕೊಬ್ಬನ್ನು ಕಳೆದುಕೊಳ್ಳುತ್ತಾ ಬರುತ್ತದೆ. ದಿನಕ್ಕೊಂದು ಕಪ್ ಕಾಫಿ ಕುಡಿಯುವುದರಿಂದ ಹೆಚ್ಚು ಲವಲವಿಕೆ ಉಂಟಾಗುವುದರ ಜೊತೆಗೇ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ. ಆದರೆ ಈ ಕಾಫಿ ಹಾಲು ಸಕ್ಕರೆ ಇಲ್ಲದ ಕಪ್ಪು ಕಾಫಿಯಾಗಿದ್ದರೆ ಉತ್ತಮ. ದೇಹದ ಆರೋಗ್ಯವನ್ನನುಸರಿಸಿ ದಿನಕ್ಕೆ ಒಂದರಿಂದ ಮೂರು ಕಪ್ ಸೇವಿಸಬಹುದು.

ಯೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ:
ಕಾಫಿಯಲ್ಲಿರುವ ಕೆಫೇನ್ ರಕ್ತದ ಮೂಲಕ ಮೆದುಳನ್ನು ಸೇರಿದ ಬಳಿಕ ಮೆದುಳಿಗೆ Adenosine ಎಂಬ ನಿರಾಶಾದಾಯಕ ಸಂಜ್ಞೆ ತಲುಪದಿರುವಂತೆ ತಡೆಯುತ್ತದೆ. ಪರಿಣಾಮವಾಗಿ ಮೆದುಳು ಸಕಾರಾತ್ಮಕವಾಗಿ ಚಿಂತಿಸಲು ಸಾಧ್ಯವಾಗುತ್ತದೆ. ಕಾರ್ಯಕ್ಷಮಕೆ ಹೆಚ್ಚುತ್ತದೆ ಹಾಗೂ ಕಾಫಿ ಹಲವು ವಿಟಮಿನ್ನುಗಳಿಂದ ಕೂಡಿದೆ.

logo4345
ಕಾಫಿಯಲ್ಲಿ ಈ ಕೆಳಗಿನ ವಿಟಮಿನ್ನುಗಳಿದ್ದು ಆರೋಗ್ಯಕ್ಕೆ ಪೂರಕವಾಗಿವೆ.
ü ರೈಬೋಪ್ಲೇವಿನ್ (ವಿಟಮಿನ್-ಬಿ2): ದಿನಕ್ಕೆ ಅಗತ್ಯವಾದ ಪ್ರಮಾಣ 11%
ü ಪ್ಯಾಂಟೋಥೆನಿಕ್ ಆಮ್ಲ (ವಿಟಮಿನ್-ಬಿ5): ದಿನಕ್ಕೆ ಅಗತ್ಯವಾದ ಪ್ರಮಾಣ 06%
ü ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ: ದಿನಕ್ಕೆ ಅಗತ್ಯವಾದ ಪ್ರಮಾಣ 03%
ü ಮೆಗ್ನೀಶಿಯಂ ಮತ್ತು ನಿಯಾಸಿನ್ (ವಿಟಮಿನ್-ಬಿ3) : ದಿನಕ್ಕೆ ಅಗತ್ಯವಾದ ಪ್ರಮಾಣ 02%

ಕಾಫಿ ಹಲವು ರೋಗಗಳು ಬಾರದಂತೆ ತಡೆಯುತ್ತದೆ: ನಿಯಮಿತವಾದ ಕಾಫಿ ಸೇವನೆಯು ಮಧುಮೇಹ (ಎರಡನೆಯ ವಿಧ), ಸಂಧಿವಾತ, ಪಾರ್ಕಿನ್ಸನ್ ಕಾಯಿಲೆ, ಯಕೃತ್ ರೋಗ, ಕ್ಯಾನ್ಸರ್ ಮೊದಲಾದವುಗಳನ್ನು ಬಾರದಂತೆ ತಡೆಯುವ ಮೂಲಕ ಹಲವು ಖಾಯಿಲೆಗಳ ವಿರುದ್ಧ ರೋಗನಿರೋಧಕದಂತೆ ಕೆಲಸ ಮಾಡುತ್ತದೆ. ಹೃದಯಾಘಾತದ ಸಾಧ್ಯತೆಗಳನ್ನೂ ಕಡಿಮೆಗೊಳಿಸುತ್ತದೆ. ಮಹಿಳೆಯರೆ, ದಿನಕ್ಕೆ ಎμ ಕಪ್ ಕಾಫಿ ಕುಡಿಯುತ್ತೀರಾ?? ಒಂದು ಕಪ್ ಇಲ್ಲದಿದ್ದರೆ ಎರಡು ಕಪ್?? ಇನ್ನು ಮೇಲೆ ದಿನಕ್ಕೆ 04 ಕಪ್ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದೇನಪ್ಪಾ ಇದು ಯಾವುದಾದರೂ ಕಾಫಿ ಪುಡಿಯ ಜಾಹಿರಾತು ಆಗಿರಬಹುದಾ? ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪಾದೀತು.

ಏಕೆಂದರೆ, ಇದು ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದ್ದು ಮಹಿಳೆಯರು ದಿನಕ್ಕೆ 04 ಕಪ್ ಕಾಫಿ ಕುಡಿಯುವುದರಿಂದ ಗರ್ಭ ಕೋಶದ ಕ್ಯಾನ್ಸರ್ ಬರುವುದನ್ನು ತಡೆಯಬಹುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಹಾರ್ವರ್ಡ್ ನಲ್ಲಿರುವ ’ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್’ ನ ಸಂಶೋಧಕರು ಪ್ರತಿ ದಿನ 04 ಕಪ್ ಕಾಫಿ ಕುಡಿಯುವುದರಿಂದ ಗರ್ಭಕೋಶದಲ್ಲಿ ಕ್ಯಾನ್ಸರ್ ಕಾಯಿಲೆ ಬರುವುದನ್ನು ತಡೆಯುತ್ತದೆ ಎಂದು ತಿಳಿಸಿದ್ದಾರೆ. ಆನೇಕ ವμಗಳಿಂದ ಪ್ರತಿ ನಿತ್ಯ 04 ಕಪ್ ಕಾಫಿ ಕುಡಿಯುವ ಅಭ್ಯಾಸವಿರುವ ಮಹಿಳೆಯರನ್ನು, ಕಾಫಿ ಕುಡಿಯದ ಮಹಿಳೆಯರಿಗೆ ಹೋಲಿಸಿದಾಗ ಕಾಫಿ ಕುಡಿಯುವ ಮಹಿಳೆಯರಲ್ಲಿ ಗರ್ಭ ಕೋಶದ ಕ್ಯಾನ್ಸರ್ ಬರುವ ಸಾಧ್ಯತೆ 25% ಕ್ಕಿಂತ ಕಡಿಮೆ ಎಂಬ ಅಂಶ ಬೆಳಕಿಗೆ ಬಂದಿದೆ. ಪ್ರತಿ ನಿತ್ಯ ವ್ಯಾಯಮ ಮಾಡುವುದು, ದೇಹದ ತೂಕವನ್ನು ಸಮತೋಲನದಲ್ಲಿ ಇಡುವುದು ಅದರ ಜೊತೆ ಕಾಫಿಯನ್ನು ಕುಡಿಯುವ ಅಭ್ಯಾಸ ಇವುಗಳು ಕ್ಯಾನ್ಸರ್ ತಡೆಯುವಲ್ಲಿ ತುಂಬ ಪರಿಣಾಮಕಾರಿಯಾಗುವುದು.

ಕಾಫಿಯಲ್ಲಿ antioxidants ಅಂಶ ಇತರ ತರಕಾರಿಗಳಿಗೆ ಹೋಲಿಸಿದರೆ ಹೆಚ್ಚಗಿದ್ದು, ಕಾಫಿಯು ಮಧುಮೇಹದ ವಿರುದ್ಧ ಹೋರಾಟದ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಇμ ಅಲ್ಲ, ಕಾಫಿ ಬಾಂದವ್ಯ ವರ್ಧಕ!! ಹೌದು ಸ್ನೇಹಿತರು, ಸಂಬಂಧಿಗಳು ಸೇರಿದಾಗ ರುಚಿಕರವಾದ ಕಾಫಿ ಇಲ್ಲದಿದ್ದರೆ ಹೇಗೆ? ಒಂದು ಖಚಿತವಾದ ಅಧ್ಯಯನದ ಪ್ರಕಾರ ಸ್ನೇಹಿತರು, ಸಂಬಂಧಿಗಳೊಂದಿಗಿನ ಮೊದಲ ಭೇಟಿಯಲ್ಲಿ ಕಾಫಿ ಜೊತೆಗಿದ್ದರೆ ಆ ಸಂಬಂಧಗಳು ಹೆಚ್ಚು ಬಾಂದವ್ಯಪೂರ್ಣವಾಗಿರುತ್ತವಂತೆ.

ಹಾಗಾಗಿ ಕಾಫಿ ಇಂದು ಕೇವಲ ಒಂದು ಟೈಮ್ ಪಾಸ್ ಪೇಯವಾಗಿ ಉಳಿದಿಲ್ಲ. ಬದಲಿಗೆ ಇದು ಆರೋಗ್ಯವರ್ಧಕ ಹಾಗೂ ಬಾಂದವ್ಯವರ್ಧಕವಾಗಿ ಜಗತ್ತಿನಾದ್ಯಂತ ಸೇವಿಸಲ್ಪಡುತ್ತಿರುವ ಪೇಯವಾಗಿದೆ. ಕಾಫಿಯ ಈ ಉಪಯೋಗಕಾರಿ ಅಂಶಗಳನ್ನು ಮನಗಂಡ ಹಲವು ಕಾರ್ಪೋರೇಟ್ ಸಂಸ್ಥೆಗಳು ಕೇವಲ ಕಾಫಿ ಮಾರಾಟಕ್ಕಾಗಿಯೇ ಹಲವು ಹೆಸರುಗಳಿಂದ ತಮ್ಮ ತಮ್ಮ ಮಾರಾಟ ಕೇಂದ್ರಗಳನ್ನು ತೆರೆದು ಕಾಫಿ ಪ್ರಿಯರಿಗೆ ವಿಧವಿಧವಾದ ಕಾಫಿಯ ರುಚಿಯನ್ನು ಉಣಿಸುತ್ತಿವೆ. ಜಗತ್ತಿನ ನೂರಾರು ವೆರೈಟಿಯ ಕಾಫಿ ನಮ್ಮ ನಮ್ಮ ಊರುಗಳಲ್ಲೂ ಇದೀಗ ದೊರೆಯುವ ವ್ಯವಸ್ಥೆಯನ್ನು ಇಂತಹ ಕಾರ್ಪೋರೇಟ್ ಸಂಸ್ಥೆಗಳು ಮಾಡಿವೆ. ಅವುಗಳಲ್ಲಿ ತುಂಬಾ ವಿಭಿನ್ನವಾಗಿ ತನ್ನ ಗ್ರಾಹಕರ ಕಾಫಿಪ್ರಿಯತೆಯನ್ನು ತಣಿಸುತ್ತಿರುವ ಸಂಸ್ಥೆ ಬೆಂಗಳೂರು ಮೂಲದ ಎಂಡಿಪಿ ಕಾಫಿ ಹೌಸ್. 11064915_799413186836054_7249163940833607916_o

ಈ ಸಂಸ್ಥೆಯು ಪ್ರಮುಖವಾಗಿ ಭಾರತದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರ್ಪೋರೇಟ್ ಸಂಸ್ಥೆಗಳು ಹಾಗು ಅಲ್ಲಿನ ಉದ್ಯೋಗಿಗಳನ್ನು ಗಮನದಲ್ಲಿರಿಸಿಕೊಂಡು ಅತ್ಯಂತ ಕಡಿಮೆ ಹಾಗೂ ಕೈಗೆಟುಕುವ ದರದಲ್ಲಿ ಅತ್ಯುತ್ತಮವಾದ ಕಾಪಿಯನ್ನು ಒದಗಿಸುವ ಉದ್ದೇಶದೊಂದಿಗೆ ಕಾರ್ಪೋರೇಟ್ ಕಂಪನಿಗಳ ಆವರಣದೊಳಗೆ ತನ್ನ ಕಾಫಿ ಮಾರಾಟ ಕೇಂದ್ರಗಳನ್ನು ತೆರೆಯುವ ಹೊಸ ಮಾದರಿಯ ಆಲೋಚನೆಯೊಂದಿಗೆ ೨೦೦೫ರಲ್ಲಿ ಬೆಂಗಳೂರಿನಲ್ಲಿ ತನ್ನ ಕೇಂದ್ರ ಕಛೇರಿಯನ್ನು ಪ್ರಾರಂಭಿಸಿತು.

ಆದರೆ ವಿಶೇμವೆಂದರೆ ಈ ಸಂಸ್ಥೆಯು ಬೆಂಗಳೂರು ಮೂಲದ್ದಾದರೂ ಇದರ ಮೊದಲ ಕಾಫಿ ಮಾರಾಟ ಕೇಂದ್ರ ಪ್ರಾರಂಭವಾದದ್ದು ಮುಂಬೈನಲ್ಲಿ. ಅದು ಕೂಡ ಒಂದು ಬಹು ದೊಡ್ಡ ಸವಾಲಿನೊಂದಿಗೆ. ಆಗ (2005) ಮುಂಬೈಯೆಂಬ ಮಾಯನಗರಿಯು ವರುಣನ ಆರ್ಭಟ, ಅಬ್ಬರದ ಎದುರು ತತ್ತರಿಸುತಿತ್ತು. ಜನರ ಬದುಕು ಮೂರಾಬಟ್ಟೆಯಾಗಿದ್ದಂತಹ ಸಮಯ ಅದು. ಅಂದೇ ಅದೇ ಎಂ.ಡಿ.ಪಿ ಕಾಪಿ ಹೌಸ್ ನ ಮೋದಲ ಶಾಖೆ ಪ್ರತಿಷ್ಠಿತ ಆಕ್ಸೆಂಚರ್ ಎಂಬ ಕಂಪನಿಯಲ್ಲಿ ತೆರೆಯಬೇಕಾಯತು.

ಭಾರತದ ಮೊಟ್ಟ ಮೊದಲ ಅತಿ ಕಡಿಮೆ ಬೆಲೆಯಲ್ಲಿ ಸದಾ ತಾಜಾ ರುಚಿಯಲ್ಲಿ ಕಾಫಿ / ಟೀ ಸಿಗುವ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಅಪ್ಪಟ ಕನ್ನಡಿಗ, ಶ್ರೀ ಮಹದೇವ ಪ್ರಸಾದ್ ರವರು “ಎಂ.ಡಿ.ಪಿ ಕಾಫಿ ಮತ್ತು ಟೀ ಸರ್ವೀಸಸ್” ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಭಾರತದದ್ಯಾಂತ ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಎಲ್ಲಾ ಗ್ರಾಹಕರು ತಮ್ಮ ದಿನನಿತ್ಯ ಕುಡಿಯುವ ಎಲ್ಲಾ ತರಹದ ಪೇಯಗಳನ್ನು ಅತಿ ಕಡಿಮೆ ಸಮಯದಲ್ಲಿ ಪಡೆಯಬಹುದಾಗಿದೆ. d3s_5495dfrtghy
ಅಪ್ಪಟ ಕನ್ನಡಿಗ, ಶ್ರೀ ಮಹದೇವ ಪ್ರಸಾದ್ ರವರು “ಎಂ.ಡಿ.ಪಿ ಕಾಫಿ ಮತ್ತು ಟೀ ಸರ್ವೀಸಸ್”

ಇಂದಿನ ವೇಗದ ಬದುಕಿನಲ್ಲಿ ಸಮಯದ ಕೊರತೆ ಹಾಗೂ ತಾವು ಮಾಡುವ ದೈನಂದಿನ ಕೆಲಸ ಕಾರ್ಯಗಳಲ್ಲಿ ಅನುಭವಿಸುವ ದೈಹಿಕ ಅಸಮತೋಲನ ಹಾಗೂ ಮಾನಸಿಕವಾಗಿ ಕುಗ್ಗುವಿಕೆಯನ್ನು ಸರಿಪಡಿಸಲು ಇದೊಂದು ವರದಾನವಾಗಿದೆ. ಈಗಾಗಲೇ ಭಾರತದ ನವದೆಹಲಿ, ನೊಯಿಡ, ಗುರ್ಗಾವ್ಂ, ಚಂಡಿಗಡ್, ಜೈಪುರ, ಭುವನೇಶ್ವರ್, ಕೊಲ್ಕತ್ತ, ಮುಂಬೈ, ಪುಣೆ, ಹೈದರಾಬಾದ್, ತಿರುವನಂತಪುರಂ, ಮೈಸೂರು ಮತ್ತು ಬೆಂಗಳೂರಿನ ಪ್ರತಿಷ್ಟಿತ ಹಾಗೂ ಸುಪ್ರಸಿದ್ಧ ಐ.ಟಿ-ಬಿ.ಟಿ ಕಂಪನಿಗಳಲ್ಲಿ ಹಲವಾರು ಶಾಖೆಗಳನ್ನು ತೆರೆದು ತನ್ನ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಿದ್ದೆವೆ. ಮುಂದಿನ ದಿನಗಳಲ್ಲಿ ಪ್ರಪಂಚದಾದ್ಯಂತ ವಿಸ್ತರಿಸುವ ಕನಸನ್ನು ಎಂಡಿಪಿ ಕಾಫಿ ಹೌಸ್ ಸಂಸ್ಥೆಯವರು ಹೊಂದಿದ್ದಾರೆ. ಸಂಸ್ಥೆಯ ಈ ಕನಸನ್ನು ಸಾಕಾರಗೊಳಿಸಲು ಯುವ ಉತ್ಸಾಹಿ ಉದ್ಯೋಗಿಗಳ ಉತ್ತಮ ತಂಡ ಸಂಸ್ಥೆಯ ಜೊತೆಗಿದೆ. ಜೊತೆಗೆ ಬದಲಾಗುತ್ತಿರುವ ತಂತ್ರಜ್ಞಾನ, ಬೆಳವಣಿಗೆಗಳನ್ನೂ ಸಹ ಸತತವಾಗಿ ಗಮನಿಸುತ್ತಾ ಬರುತ್ತಿರುವ ಸಂಸ್ಥೆಯು ಆಗುತ್ತಿರುವ ಬದಲಾವಣೆಗಳಗೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನಗಳನ್ನೂ ಅಳವಡಿಸಿಕೊಳ್ಳುತ್ತಾ ಕಾಲದೊಂದಿಗೆ ಹೆಜ್ಜೆ ಹಾಕುತ್ತಿದೆ. ಮುಂಬರುವ ದಿನಗಳಲ್ಲಿ ಎಂಡಿಪಿ ಕಾಫಿ ಹೌಸ್ ಸಂಸ್ಥೆಯು ಜಗತ್ತಿನಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸಿ ತನ್ನ ವಿಶಿμ ಕಾಫಿಯ ರುಚಿಯನ್ನು ವಿಶ್ವವ್ಯಾಪಿಯಾಗಿಸಲಿ ಎಂದು ಆಶಿಸೋಣ.10635917_673592009418173_9138841537871846429_n

background11
Article By:………………………………– ಶ್ರೀನಿವಾಸ ಕೆ.ಗೌಡ
9632264308

background11

NEWS BY:

1 COMMENT

Comments are closed.