ವಿದುಷಿ ಶ್ರೀಮತ...

ವಿದುಷಿ ಶ್ರೀಮತಿ ಹೇಮ ಪಂಚಮುಖಿಯವರ ಶಿಷ್ಯೆ ಕು|ನಮ್ರತಾ ತೇಜಕಿರಣ್ ಯವರ ಭರತನಾಟ್ಯ ರಂಗ ಪ್ರವೇಶ

104
1
SHARE

ಶ್ರೀ ಸುಕೃತಿ ನಾಟ್ಯಾಲಯದ ವತಿಯಿಂದ ಡಿಸೆಂಬರ್ ೧೬ ರಂದು ವಿದುಷಿ ಶ್ರೀಮತಿ ಹೇಮ ಪಂಚಮುಖಿಯವರ ಶಿಷ್ಯೆ ಕು|ನಮ್ರತಾ ತೇಜಕಿರಣ್ ಯವರ ಭರತನಾಟ್ಯ ರಂಗ ಪ್ರವೇಶವು ನಗರದ ಎಡಿಎ ರಂಗಮಂದಿರದಲ್ಲಿ ಸಂಜೆ ೬.೩೦ಕ್ಕೆ ನಡೆಯಲಿದೆ. ಈ ಸಮಾರಂಭಕ್ಕೆ ಖ್ಯಾತ ಚಲನಚಿತ್ರ ನಟಿ ಶ್ರೀಮತಿ ವಿನಯಾ ಪ್ರಸಾದ್, ಶ್ರೀಯುತ. ಎ.ಅಶೋಕ ಕುಮಾರ ನಿರ್ದೇಶಕ ನಾಟ್ಯಾಂಜಲಿ, ಕರ್ನಾಟಕ ನೃತ್ಯ ಹಾಗೂ ಸಂಗೀತ ಅಕಾಡಮಿ ಸದಸ್ಯರು, ವಿದ್ವಾನ್ ಶ್ರೀ. ಎನ್. ವೆಂಕಟೇಶ್ ಸ್ಥಾಪಕರು ಸ್ವರಸೌರಭ ಸಂಗೀತ ಶಾಲೆ. ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


ಶಿಕ್ಷಣ ಹಾಗೂ ಶಿಕ್ಷಣೇತರ ಕ್ಷೇತ್ರದಲ್ಲಿ ಆಪಾರ ಆಸಕ್ತಿ ಹೊಂದಿರುವ ಕು|ನಮ್ರತಾ ಅವರು ಪ್ರಸುತ್ತ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ. ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಸಂಗೀತ ಹಾಗೂ ನೃತ್ಯದಲ್ಲಿ ಆಪಾರ ಆಸಕ್ತಿ ಹೊಂದಿರುವ ಇವರು ಪ್ರಸ್ತುತ ಭರತನಾಟ್ಯವನ್ನು ವಿದುಷಿ ಶ್ರೀಮತಿ ಹೇಮ ಪಂಚಮುಖಿ ಅವರಲ್ಲಿ ಅಭ್ಯಾಸ ಮಾಡುತ್ತಿದ್ದು, ಹಲವಾರು ನೃತ್ಯ ಸ್ಫರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾರೆ ಹಾಗೂ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿರುತ್ತಾರೆ.

ವಿಳಾಸ :
ಎಡಿಎ ರಂಗಮಂದಿರ
ನಂ ೧೦೯, ಜೆ.ಸಿ. ರಸ್ತೆ,
ಬೆಂಗಳೂರು – ೫೬೦೦೨೨

ಸಮಯ : ೬.೩೦ ಸಂಜೆ
ಫೋನ್ ನಂ: ೯೮೮೬೪೬೨೩೮೩

ಡಿಸೆಂಬರ್ ೧೬.೧೨.೨೦೧೬
-ಜರಗನಹಳ್ಳಿ ಕಾಂತರಾಜು

1 COMMENT

  1. Wonderful blog! I found it while browsing on Yahoo News.

    Do you have any tips on how to get listed in Yahoo News?
    I’ve been trying for a while but I never seem to get there!
    Cheers

Comments are closed.