ಪಾಂಚಜನ್ಯ ಪ್ರತ...

ಪಾಂಚಜನ್ಯ ಪ್ರತಿಷ್ಠಾನದಿಂದ ಗಾಂಧಿ ಜಯಂತಿ ಆಚರಣೆ _ಕಾಕೋಳು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜನೆ

110
0
SHARE

ಆಧ್ಯಾತ್ಮದ ತಳಹದಿಯ ಮೇಲೆ ಆರೋಗ್ಯ ಮತ್ತು ಅಕ್ಷರ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪಾಂಚಜನ್ಯ ಪ್ರತಿಷ್ಠಾನವು ನಗರದ ಹೊರವಲಯದ ಯಲಹಂಕ –ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳು ಸರ್ಕಾರಿ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿತು.
pf1
ಪ್ರತಿಷ್ಠಾನದ ಸಾಮಾಜಿಕ ಚಟುವಟಿಕೆಯ ಅಂಗವಾಗಿ ಹೆಚ್‌ಸಿಎಲ್ ಫೌಂಡೇಷನ್ ಪ್ರಾಯೋಜಿಸಿದ ವಿದ್ಯಾರ್ಥಿಗಳಿಗೆ ಅಗತ್ಯವಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಬೆಂಗಳೂರು ಉತ್ತರ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಶ್ರೀನಿವಾಸ್ ಅನಾವರಣಗೊಳಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಅಗತ್ಯವಾದ ಸೌಕರ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಪಾಲುದಾರರಾದ ಪಾಂಚಜನ್ಯ ಪ್ರತಿಷ್ಠಾನದ ಸೇವಾಚಟುವಟಿಕೆಗಳನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಫ್ರಾಗೋಮೆನ್ ವರ್ಲ್ಡವೈಡ್ ನವರು ಪ್ರಾಯೋಜಿಸಿದ ಕ್ರೀಡಾ ಸಾಮಗ್ರಿಗಳನ್ನು ಮತ್ತು ಶಾಲಾ ಬ್ಯಾಗುಗಳನ್ನು ಸಂಸ್ಥೆಯ ಆಪರೇಷನ್ಸ್ ಮ್ಯಾನೇಜರ್ ಕುರಿಯನ್ ವಿದ್ಯಾರ್ಥಿಗಳಿಗೆ ವಿತರಿಸಿದರು .
13456
ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮಕ್ಕಳು ಮತ್ತು ಪ್ರತಿಷ್ಠಾನದ ಕಾರ್ಯಕರ್ತರಿಂದ ಸ್ವಚ್ಛತಾ ಅಭಿಯಾನ ಅಂಗವಾಗಿ ಶ್ರಮದಾನ ನಡೆಯಿತು . ಸರ್ವಧರ್ಮ ಪ್ರಾರ್ಥನೆ , ಗಾಂಧಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿಲಾಯಿತು. ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಮುರಳಿ ಕಾಕೋಳು ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನು ವಿವರಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ ಓಂಕಾರ ನಾಯಕ್ ರವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕು. ಐಶ್ವರ್ಯ ಸ್ವಾಗತಿಸಿದರು, ಕು. ಅಕ್ಷತಾ ವಂದಿಸಿದರು. ದೀಪಕ್ ಕಶ್ಯಪ್ ನಿರೂಪಿಸಿದರು.

ಚಿತ್ರ: ವಿಕಾಸ್ ಕಾಕೋಳು
ವರದಿ: ಗುರುರಾಜ ಪೋಶೆಟ್ಟಿಹಳ್ಳಿ