ಲೋಕ ಜಂಗಮ- ನಡೆ...

ಲೋಕ ಜಂಗಮ- ನಡೆದಾಡುವ ದೇವರ ಸಮಗ್ರ ಸಾಕ್ಷ್ಯಚಿತ್ರ ದರ್ಶನ | ಪ್ರದರ್ಶನ

124
1
SHARE

swamiji-photo_2015_53456789
ಆತ್ಮೀಯ ಬಂದುಗಳೇ,
ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿದ ದಾಸೋಹ ಮೂರ್ತಿ, ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತರಾದ, ನಡೆದಾಡುವ ದೈವ ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳವರ ೧೦೯ನೇ ಹುಟ್ಟು ಹಬ್ಬವು ಬರುವ ಏಪ್ರಿಲ್ ತಿಂಗಳ ೧ನೇ ತಾರೀಖಿನಂದು ಇದೆ. ಕಳೆದ ವರ್ಷ ಅಂದರೆ, ೨೦೧೫ನೇ ಇಸವಿಯಲ್ಲಿ, ಪರಮಪೂಜ್ಯರ ೧೦೮ನೇ ವರ್ಷದ ಹುಟ್ಟು ಹಬ್ಬದ ಸುಸಂಧರ್ಭದಲ್ಲಿ ಶ್ರೀ ಸಿದ್ದಗಂಗಾ ಮಠದ ಸುಮಾರು ೭೦೦ ವರ್ಷಗಳ ಸಮೃದ್ದ ಇತಿಹಾಸವನ್ನು ಸಾರುವ ಮತ್ತು ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ೧೦೮ವರ್ಷಗಳ ಸಾರ್ಥಕ ಬದುಕಿನ ಸಮಗ್ರ ಚಿತ್ರಣವನ್ನು ಸಾರುವ “ಲೋಕ ಜಂಗಮ” ಎಂಬ ಸಾಕ್ಷ್ಯಚಿತ್ರವನ್ನು ಶ್ರೀ ಸಿದ್ದಗಂಗಾ ಮಠದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳವರ ಆಶೀರ್ವಾದದಲ್ಲಿ ಮತ್ತು ಲಿಂಗೈಕ್ಯ ಡಾ|| ಎಂ.ಎಂ ಕಲಬುರ್ಗಿ,kalburgi ಲಿಂಗೈಕ್ಯ ರಾಷ್ಟ್ರಕವಿ ಶ್ರೀ ಜಿ.ಎಸ್ ಶಿವರುದ್ರಪ್ಪ poet_bಹಾಗೂ ಸಿದ್ದಗಂಗಾ ಮಾಸ ಪತ್ರಿಕೆಯ ಸಂಪಾದಕ ಶ್ರೀ ಹೆಚ್. ವೀರಭದ್ರಯ್ಯನವರ ಮಾರ್ಗದರ್ಶನವನ್ನು ಪಡೆದು, ಖ್ಯಾತ ನಿರ್ದೇಶಕ ಶ್ರೀ ಕೆ.ಎಸ್ ಪರಮೇಶ್ವರರವರ ನಿದೇಶನದಲ್ಲಿ ತಯಾರು ಮಾಡಿರುತ್ತೇವೆ. ಹೀಗೆ ತಯಾರಾದ ಈ ಸಾಕ್ಷ್ಯಚಿತ್ರವನ್ನು ಪರಮಪೂಜ್ಯರ ಅನುಮತಿಯ ಮೇರೆಗೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳೂ ಸೇರಿದಂತೆ, ಹೊರರಾಜ್ಯವಾದ ತಮಿಳುನಾಡಿನ ನೀಲಗಿರಿ ಜಿಲ್ಲೆಯೂ ಸೇರಿ ಒಟ್ಟು ೧೦೮ಕ್ಕೂ ಮೇಲ್ಪಟ್ಟು ಸಾರ್ವಜನಿಕ ಪ್ರದರ್ಶನಗಳನ್ನು ನಾವು ಹಮ್ಮಿಕೊಂಡಿದ್ದು ಅದನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಈ ಎಲ್ಲಾ ೧೦೮ ಪ್ರದರ್ಶನಗಳು ಅಥವಾ ಕಾರ್ಯಕ್ರಮಗಳನ್ನು ಪರಮಪೂಜ್ಯರ ೧೦೮ನೇ ಹುಟ್ಟುಹಬ್ಬದ ಕಿರುಕಾಣಿಕೆಯಾಗಿ ಸಮರ್ಪಿಸಿದ್ದೇವೆ.

ಇದೇ ರೀತಿ ಈ ವರ್ಷವೂ ಸಹ, ಮುಂಬರುವ ಏಪ್ರಿಲ್ ತಿಂಗಳಿನಿಂದ ಮೊದಲುಗೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ೧೯೮ ವಾರ್ಡಗಳಲ್ಲಿ “ಲೋಕ ಜಂಗಮ” ನಡೆದಾಡುವ ದೇವರ ಸಮಗ್ರ ಸಾಕ್ಷ್ಯಚಿತ್ರದ ಸಾರ್ವಜನಿಕ ಪ್ರದರ್ಶನಗಳನ್ನು ನಾವು ಏರ್ಪಡಿಸಿದ್ದೇವೆ. ಪರಮಪೂಜ್ಯರ ಅಸಂಖ್ಯಾತ ಭಕ್ತ ಮಹಾಜನರು ತಮ್ಮ ತಮ್ಮ ಬಡಾವಣೆ, ಶಾಲಾ-ಕಾಲೇಜು, ಕಛೇರಿ ಆವರಣ, ಸಂಘ-ಸಂಸ್ಥೆಗಳಲ್ಲಿ ಆಶ್ರಯದಲ್ಲಿ ಈ ಪ್ರದರ್ಶನವನ್ನು ಮಾಡಲು ವ್ಯವಸ್ಥಿತವಾದ ಅಂತರ್ಜಾಲ ತಾಣವೊಂದನ್ನು ಸಿದ್ದಪಡಿಸಲಾಗಿದೆ. ಮತ್ತು ದೂರವಾಣಿಯ ಮುಖಾಂತರವೂ ಸಹ ಪ್ರದರ್ಶನವನ್ನು ಕಾಯ್ದಿರಿಸಬಹುದಾಗಿದೆ. ಈ ಕೆಳಕಂಡ ಅಂತರ್ಜಾಲ ತಾಣವನ್ನು ಬಳಸಿಕೊಂಡು ತಮ್ಮ ಪ್ರದರ್ಶನಗಳನ್ನು ತಮ್ಮ ಅನುಕೂಲಕರ ದಿನಾಂಕದಂದು ಕಾಯ್ದಿರಿಸಬಹುದು ಅಥವಾ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಪ್ರದರ್ಶನವನ್ನು ಬುಕ್ ಮಾಡಬಹುದಾಗಿ ಈ ಮೂಲಕ ತಮ್ಮೆಲ್ಲರಲ್ಲಿ ಮನವಿ ಮಾಡುತ್ತೇವೆ. ಮತ್ತು ಯಾವುದೇ ತರಹದ ಹೆಚ್ಚಿನ ಮಾಹಿತಿಗಾಗಿಯೂ ಸಹ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.

ಜರಗನಹಳ್ಳಿ ಕಾಂತರಾಜು
ನಿರ್ಮಾಪಕರು
94 83 43 93 43

1 COMMENT

Comments are closed.