ಬೆಂಗಳೂರಿನಲ್ಲಿ...

ಬೆಂಗಳೂರಿನಲ್ಲಿದೆ 62 ವರ್ಷಗಳ ಹಳೆಯದಾದ ಫೋಟೋ ಫ್ರೇಮ್ ಮಳಿಗೆ @ಶ್ರೀ ಸಿದ್ದೇಶ್ವರ ಆರ್ಟ್ಸ್ ಅಂಡ್ ಫ್ರೇಮ್ಸ್

95
0
SHARE

ಇಂದಿನ ದಿನಗಳಲ್ಲಿ ಯುವಜನತೆ ಅತ್ಯಂತ ಉತ್ಸುಕತೆಯಿಂದ ಪ್ರತಿನಿತ್ಯ ನೂರಾರು ಹೊಸ-ಹೊಸ ಬಗೆಯ ವ್ಯಾಪಾರಗಳು, ಮಳಿಗೆಗಳನ್ನು ಆರಂಭಮಾಡುತ್ತಾರೆ. ವ್ಯವಹಾರಗಳನ್ನು ಆರಂಭಿಸುವಾಗ ಇರುವ ಆಸಕ್ತಿ ಮತ್ತು ಶ್ರಧ್ದೆಗಳು ಯಾಕೋ ವರ್ಷ ತುಂಬುವ ಹೊತ್ತಿಗೆ ಇಲ್ಲದಂತಾಗಿ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮುಚ್ಚಿಹೋಗುತ್ತಾರೆ. ಇದರಿಂದ ಹಣ ಮತ್ತು ಸಮಯದ ವ್ಯರ್ಥವೇ ವಿನಃ, ಬೇರ‍್ಯಾವ ಪ್ರಯೋಜನಗಳು ಇಲ್ಲ. ಇಂತಹ ಯಾವುದೇ ವ್ಯಾಪಾರ-ವಹಿವಾಟುಗಳನ್ನು ಆರಂಭಿಸುವವರ ನೋಡಿದರೆ ಬಹುತೇಕ ಜನಗಳಲ್ಲಿ ಸ್ಥಿರತೆಯ ಕೊರತೆ ಎದ್ದು ಕಾಣುತ್ತದೆ. ಎಲ್ಲರಲ್ಲೂ ಒಂದೇ ದಿನದಲ್ಲಿ ಹಣಗಳಿಸಿಬಿಡಬೇಕು ಎನ್ನುವ ತವಕ, ರಾತ್ರೋ-ರಾತ್ರಿ ಸಾಹುಕಾರರಾಗಿ ಬಿಡುತ್ತೇವೆ ಎನ್ನುವ ಭ್ರಮೆ. ಇಂತಹ ಅನೇಕಾನೇಕ ವಿಫಲ ವ್ಯವಹಾರಸ್ಥರಿಗೆ ಸೂಕ್ತ ಮಾದರಿ ಎನ್ನುವಂತಿದೆ ಈ ಅದ್ಬುತ ವ್ಯಕ್ತಿಯ ೬೨ವರ್ಷಗಳ ಯಶಸ್ವಿ ಯಶೋಗಾಥೆ. ಇವರೇ, ಬೆಂಗಳೂರಿನ ಜಯನಗರ ೪ನೇ ಬಡಾವಣೆಯಲ್ಲಿರುವ ಶ್ರೀ ಸಿದ್ದೇಶ್ವರ ಆರ್ಡ್ಸ್ ಅಂಡ್ ಫ್ರೇಮ್ಸ್‌ನ ಮಾಲೀಕರಾದ ಶ್ರೀ ಎಸ್. ಭಾಸ್ಕರ್‌ರವರು.
new3

೧೯೫೪ರಲ್ಲಿ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ಶ್ರೀ ಭಾಸ್ಕರ್ ರವರ ಪೂಜ್ಯ ತಂದೆಯವರಾದ ಶ್ರೀ ಬಿ.ಸಿದ್ದೇಶ್ವರಪ್ಪನವರು ಆರಂಭಿಸಿದ ಶ್ರೀ ಸಿದ್ದೇಶ್ವರ ಪೋಟೋ ಪ್ರೇಮ್ಸ್ ಎನ್ನುವ ಫೋಟೊಗಳಿಗೆ ಫ್ರೇಮ್ ಹಾಕಿಕೊಡುವ ಮಳಿಗೆಯನ್ನು, ೧೯೭೫ರಲ್ಲಿ ಜಯನಗರದ ೪ನೇ ಬಡಾವಣೆಗೆ ತಂದು ಅಂದಿನಿಂದ ಇಲ್ಲಿಯ ತನಕ ಲಕ್ಷಾಂತರ ಫೋಟೋಗಳಿಗೆ ಫ್ರೇಮ್ಸ್ ಹಾಕಿ ಕೊಡುವುದರೊಂದಿಗೆ, ಇತಿಹಾಸ ಪ್ರಸಿದ್ದ ತಂಜಾವೂರು ಚಿತ್ರಕಲೆಯಿಂದ ಹಿಡಿದು ಜಗತ್ತಿನ ಯಾವುದೇ ತರಹದ ಫೋಟೋಗಳಿಗೆ ಫ್ರೇಮ್‌ಗಳನ್ನು ಜೋಡಿಸಿಕೊಡುವ ತನಕ ಇವರ ಪಯಣ ಸಾಗಿಬಂದು ಸಾವಿರಾರು ಸಂತುಷ್ಟ ಗ್ರಾಹಕರ ಪ್ರಶಂಸೆಗೆ ಪಾತ್ರರಾಗುವುದರ ಜೊತೆಗೆ ಬೆಂಗಳೂರಿನ ನಂಬರ್ ಒನ್ ಫೋಟೋ ಫ್ರೇಮ್ಸ್ ಎಂದು ಹೆಸರಾಗಿದ್ದಾರೆ. ಇಷ್ಟಾದರೂ ಅತ್ಯಂತ ಸರಳತನದ ಜೀವನ ಮತ್ತು ಒಂದಿಷ್ಟು ಬಿಂಕವಿಲ್ಲದ ಇವರ ವ್ಯಕ್ತಿತ್ವ ಎಲ್ಲರಿಗೂ ಆಕರ್ಷಣೀಯ ಮತ್ತು ಆದರ್ಶಪ್ರಾಯವಾದದ್ದು.
new4

ಅದು ಎಪ್ಪತ್ತರ ದಶಕ. ಇವತ್ತಿನ ಯಾವುದೇ ತರಹದ ಕಂಪ್ಯೂಟರ್‌ಗಳಾಗಲೀ ಅಥವಾ ತಂತ್ರಜ್ಞಾನವಾಗಲೀ ಕಾಣುವುದಿರಲಿ, ಕೇಳಿಯು ಇರದಿದ್ದ ಕಾಲ. ಅಂತಹ ಕಾಲಘಟ್ಟದಲ್ಲಿ ಕೇವಲ ದೇವರ ಫೋಟೋಗಳಿಗೆ ಫ್ರೇಮ್ಸ್‌ಗಳನ್ನು ಹಾಕಿ ಕೊಡುತ್ತಾ ತಮ್ಮ ಜೀವನ ನಿರ್ವಹಣೆಗೆಂದು ಆರಿಸಿಕೊಂಡ ವೃತ್ತಿ, ಇವರ ಸ್ಥಿರತೆ ಹಾಗೂ ಸಮರ್ಪಣಾ ಮನೋಭಾವದ ಫಲವಾಗಿ ಹಂತ ಹಂತವಾಗಿ ಬೆಳೆದು ಬಂದು ಇಂದಿನ ಆಧುನಿಕತೆಯ ಆಯಿಲ್ ಪೇಯಿಂಟಿಂಗ್, ಕಸ್ಟಮೈಸ್ಡ್ ಪೇಯಿಂಟಿಂಗ್, ಫೈಬರ್ ಮ್ಯೂರಲ್ಸ್, ಪಿಕ್ಚರ್ ಫ್ರೇಮಿಂಗ್ ಮತ್ತು ಇತಿಹಾಸವುಳ್ಳ ತಂಜಾವೂರು ಚಿತ್ರಕಲೆಯ ತನಕ ಬೆಳೆದು ಬಂದಿದೆ. ತಮ್ಮ ಮನೆಗಳಿಗೆ ಸುಂದರವಾಗಿ ಕಾಣುವಂತಹ, ನೂರಾರು ಬಗೆಯ ಬಣ್ಣ-ಬಣ್ಣದ ಫೋಟೋ ಫ್ರೇಮ್ಸ್‌ಗಳು ಇವರ ಮಳಿಗೆಯಲ್ಲಿ ಮಾರಾಟಕ್ಕೆ ದೊರೆಯುತ್ತದೆ. ಕೇವಲ ಮುನ್ನೂರು ರುಪಾಯಿಗಳಿಂದ ಪ್ರಾರಂಭವಾಗುವ ಫೋಟೋ ಫ್ರೇಮ್ಸ್‌ಗಳ ಸಾವಿರಾರು ಬಗೆಯ ಮಾದರಿಗಳು ಆರು ಲಕ್ಷಗಳವರೆಗೂ ಒಂದೇ ಸೂರಿನಡಿ ಲಭ್ಯವಿದೆ.
ಮನೆಯ ಅಲಂಕಾರಕ್ಕೆ ಸುಂದರವಾದ ಫ್ರೇಮ್ಸ್‌ಗಳು:
ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಫ್ರೇಮ್ಸ್‌ಗಳ ಪಾತ್ರ ಅತಿ ಮುಖ್ಯವಾದದ್ದು. ಹಾಗಂತ ಹೇಳಿ ಯಾವ್ಯಾವುದೋ ಫ್ರೇಮ್ಸ್‌ಗಳನ್ನು ಹಾಕೊದ್ರಿಂದ ಕೂಡ ಅಲಂಕಾರವಾಗಿ ಕಾಣೋದಿಲ್ಲ. ಇದಕ್ಕಾಗಿ ಒಂದೊಳ್ಳೆ ಅಭಿರುಚಿ ಬೇಕಾಗುತ್ತದೆ. ಇಂತಹ ಅಲಂಕಾರಿಕೆಯ ವಿಚಾರದಲ್ಲಿ ಉತ್ತಮ ಅಭಿರುಚಿ ಹೊಂದಿರುವವರಿಗೆ ಸೂಕ್ತ ಮತ್ತು ಯತೇಛ್ಚವಾದ ಸಂಗ್ರಹ ಮತ್ತು ನಿಮ್ಮ ಮನೆಯ ಸುಂದರವಾದ ಅಲಂಕಾರಕ್ಕಾಗಿ ಒಮ್ಮೆ ಬೇಟಿ ನೀಡಲೇಬೇಕಾದ ಸೂಕ್ತ ಮಳಿಗೆ ಶ್ರೀ ಸಿದ್ದೇಶ್ವರ ಆರ್ಟ್ಸ್ ಅಂಡ್ ಫ್ರೇಮ್ಸ್.
new5

ಶ್ರೀ ಭಾಸ್ಕರ್‌ರವರ ಕುಟುಂಬದ ಪರಿಚಯ:
ತಂದೆ: ಶ್ರೀ ಬಿ.ಸಿದ್ದೇಶ್ವರಪ್ಪ
ತಾಯಿ: ಶ್ರೀಮತಿ ಡಿ.ಬಿ ನಂಜಮ್ಮ
ಮಡದಿ: ಶ್ರೀಮತಿ ಡಿ. ವಿನುತ
ಮಕ್ಕಳು: ಕು||ಸುಪ್ರಿತಾ ಮತ್ತು ಕು||ಪೂಜಿತಾ
ಬೆಂಗಳೂರಿನ ನಗರ್ತಪೇಟೆಯಲ್ಲಿ ದಿನಾಂಕ ೨೦.೧೧.೧೯೬೧ ರಂದು ಜನನ.

ಸಾಮಾಜಿಕ ಚಟುವಟಿಕೆ: ದೇವನಹಳ್ಳಿಯ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯದ ಕಾರ್ಯದರ್ಶಿಯಾಗಿ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಿದ್ದಗಂಗೆಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜೀರವರ ಬಗ್ಗೆ ಅಪಾರ ಭಕ್ತಿ ಗೌರವಗಳನ್ನು ಹೊಂದಿದ್ದಾರೆ. ಅನೇಕ ಬಗೆಯ ಸಾಮಾಜಿಕ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ಸಹಕಾರ ನೀಡುತ್ತಾ ಬಂದಿದ್ದಾರೆ.

ಎಷ್ಟೇ ಸುಂದವಾದ ಚಿತ್ರವಾದರೂ ಫ್ರೇಮ್‌ನಲ್ಲಿ ಜೋಡಿಸಿದಾಲೇ ಅದರ ನಿಜ ಸೌಂದರ್ಯ ಕಾಣುವುದು.
– ಶ್ರೀ ಭಾಸ್ಕರ್, ಮಾಲೀಕರು, ಶ್ರೀ ಸಿದ್ದೇಶ್ವರ ಆರ್ಟ್ಸ್ ಅಂಡ್ ಫ್ರೇಮ್ಸ್

new1