ದೇಹಕ್ಕೆ ಚೈತನ್...

ದೇಹಕ್ಕೆ ಚೈತನ್ಯ – ಬುದ್ದಿಗೆ ಚುರುಕು @ ಬ್ರ್ಯೂಮಾಸ್ಟರ‍್ಸ್ ಟೀ

119
0
SHARE

ಚಹಾ ಎಂದ ಕೂಡಲೇ ಎಲ್ಲರಿಗೂ ಒಂದು ಹಿತವಾದ ಅನುಭವದ ನೆನಪಾಗುತ್ತದೆ. ಎಲ್ಲರ ಜೀವನದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮದೇ ಆದ ಚಹಾ ಸವಿದ ಅನೇಕ ಅನುಭವಗಳಿರುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ಹೆಚ್ಚಿನವರಿಗೆ ಚಹಾ ಇಲ್ಲದಿದ್ದರೇ ಅಂದಿನ ದೈನಂದಿನ ಕೆಲಸಗಳೇ ಆಗುವುದಿಲ್ಲವೆಂಬಂತಾಗಿ ಇತ್ತೀಚಿನ ದಿನಗಳಲ್ಲಿ ಚಹಾ ತನ್ನದೇ ಆದ ಪ್ರಾತಿನಿದ್ಯವನ್ನು ಹೊಂದುತ್ತಿದೆ. ಹಿಂದಿನ ಕಾಲದಲ್ಲಿ ವಿಶೇಷ ಸಂಧರ್ಭಗಳಲ್ಲಿ ಅಥವಾ ವಿಶೇಷ ಅತಿಥಿಗಳು ಆಗಮಿಸಿದಲ್ಲಿ ಮಾತ್ರ ಚಹಾವನ್ನು ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದೊಂದು ದೈನಂದಿನ ಆರೋಗ್ಯಕರ ಪಾನೀಯವಾಗಿ ಮಾರ್ಪಟ್ಟಿದೆ. ಹಾಗೂ ಒಂದು ಬೃಹತ್ ಉದ್ಯಮವಾಗಿಯೂ ಸಹ ಬೆಳೆದಿದೆ ಮತ್ತು ಬೆಳೆಯುತ್ತಿದೆ. ಈಗಂತೂ ಚಹಾ ಸಿಗದ ಪ್ರದೇಶವೇ ನಿಮಗೆ ಕಾಣಸಿಗುವುದಿಲ್ಲ. ಮನೆಯಿಂದ ಹೊರಗೆ ಬಂದು ಒಂದು ಸುತ್ತು ಹಾಕಿದರೆ ಸಾಕು ಅನೇಕ ರುಚಿರುಚಿಯಾದ ವಿವಿಧ ವೈವಿಧ್ಯದ ಚಹಾ ನೀಡುವ ಅಂಗಡಿಗಳನ್ನು ನೀವು ಕಾಣಬಹುದು. ಅದರಲ್ಲೂ ಹೆಚ್ಚು ರುಚಿಯಾದ ಮತ್ತು ವೈವಿದ್ಯತೆಯ ಚಹಾ ಸಿಗುವ ಜಾಗದಲ್ಲಂತೂ ನೀವು ಚಹಾ ಸವಿಯಲು ಸಾಲಿನಲ್ಲಿ ನಿಂತು ಕಾಯಬೇಕಾಗುತ್ತದೆ. ಹೀಗೆ ದಿನಗಳೆದಂತೆ ಚಹಾದ ಬೇಡಿಕೆಯೂ ಹೆಚ್ಚುತ್ತಿದೆ.
8908003948034
ಈ ಎಲ್ಲಾ ಅಂಶಗಳನ್ನು ಮನಗಂಡು, ಈಗಂತೂ ಬೆಂಗಳೂರಿನಲ್ಲಿ ಶರವೇಗದಲ್ಲಿ ಹೊಸದಾಗಿ ಆರಂಭವಾಗುತ್ತಿರುವ ಚಹಾ ಅಂಗಡಿಗಳಿಗೊಮ್ಮೆ ಬೇಟಿನೀಡಬೇಕೆನ್ನುವ ಮತ್ತು ವಿವಿಧ ಚಹಾಗಳನ್ನು ಸವಿಯಬೇಕೆನ್ನುವ ಕುತೂಹಲದಿಂದ ಇಂಟರ್‌ನೆಟ್ ಮುಂದೆ ಕುಳಿತು ಬೆಂಗಳೂರಿನ ವಿವಿಧ ಬಗೆಯ ಚಹಾ ಪಾಯಿಂಟ್‌ಗಳ ಮಾಹಿತಿಯನ್ನು ಕಲೆಹಾಕಿಕೊಂಡು ಅದರ ವೈವಿಧ್ಯತೆಯನ್ನು ನೇರವಾಗಿ ಅನುಭವಿಸುವ ನಿಟ್ಟಿನಲ್ಲಿ ಕ್ಯಾಮೆರಾ ಸಮೇತ ಹೊರಟೆ. ಸುಮಾರು ನೂರಕ್ಕೂ ಹೆಚ್ಚು ವಿವಿಧ ಬಗೆಯ ಚಹಾ ಅಂಗಡಿಗಳಲ್ಲಿ ಚಹಾ ಸವಿದೆ. ಬೀದಿಯಲ್ಲಿ ಸೈಕಲ್ ಮೇಲೆ ಚಹಾ ಮಾರುವವರಿಂದ ಹಿಡಿದು, ಹವಾನಿಯಂತ್ರಿತ ಭವ್ಯ ಕಟ್ಟಡದಲ್ಲಿಯೂ ಕುಳಿತು ಚಹಾ ಹೀರಿದೆ. ಇಲ್ಲಿ ರೂ.ಐದರಿಂದ ಹಿಡಿದು ಬರೋಬ್ಬರಿ ರೂ.ಐನೂರರ ತನಕ ಬೆಂಗಳೂರಿನಲ್ಲಿ ಒಂದು ಚಹಾಗೆ ಬೆಲೆ ಇದೆ. ಅದರಲ್ಲೂ ಕೆಲ ಚಹಾ ಅಂಗಡಿಗಳ ಮುಂದೆ ನಿಂತು ಸಿಂಪಲ್ ಆಗಿ ಚಹಾ ಆರ್ಡರ್ ಮಾಡೋಣ ಎಂದು ಒಳಹೋದರೆ, ಚಹಾಗಾಗಿ ಕಾದು ನಿಂತ ಗ್ರಾಹಕರ ದೊಡ್ಡ ಸಾಲೇ ಅಲ್ಲಿ ಇರುತ್ತಿತ್ತು. ಇದನ್ನು ನೋಡಿದ ಮೇಲಂತೂ ಇಲ್ಲಿ ಚಹಾ ಸವಿಯಲೇಬೇಕೆಂದು ನಿರ್ಧರಿಸಿ, ಸಾಲಿನಲ್ಲಿ ನಿಂತು ಚಹಾ ಸವಿದಿದ್ದೇನೆ. ಅಬ್ಬಾ ನಿಜಕ್ಕೂ ಅದು ಅದ್ಬುತವಾದ ಅನುಭವ. ಕಾರಣ ಕೇವಲ ಚಹಾ ಎಂದು ನಿರ್ಲಕ್ಷಿಸದೇ ಸೂಕ್ಷ್ಮವಾಗಿ ಇದನ್ನು ಗಮನಿಸಿದರೇ, ಮಾನವನ ಜೀವನದಲ್ಲಿ ಚಹಾ ಒಂದು ಅವಿಭಾಜ್ಯ ಅಂಗವೇ ಆಗಿದೆ ಎಂದರೇ ಅತಿಶಯೋಕ್ತಿಯಲ್ಲ. (ವೈಯುಕ್ತಿಕವಾಗಿಯೂ ಹಾಗೂ ವ್ಯಾವಹಾರಿಕವಾಗಿಯೂ)
27719d3

ನೀವು ನಿಜವಾಗಿಯೂ ಚಹಾ ಪ್ರಿಯರೇ? ಹಾಗಿದ್ದಲ್ಲಿ ನಿಮಗೆ ಚಹಾ ಬಗ್ಗೆ ತಿಳಿಯದ ಅನೇಕ ಸಂಗತಿಗಳನ್ನು ನಿಮಗೆ ಈ ಲೇಖನದ ಮುಖಾಂತರ ತಿಳಿಸುತ್ತಿದ್ದೇನೆ. ಮುಂದೆ ಓದಿ……
ಇತ್ತೇಚೆಗೆ ಭಾರತದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು “ಚಾಯ್ ಪೇ ಚರ್ಚಾ” (ಕನ್ನಡದಲ್ಲಿ_ಚಹಾ ಸವಿಯುತ ಸಂವಾದ) ಎಂಬ ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು, ದೇಶಾದ್ಯಂತ ಭಾರೀ ಪ್ರಶಂಸೆಗೆ ಒಳಗಾಗಿದೆ. ಇಲ್ಲಿಯೂ ಸಹ ಚಹಾವನ್ನು ಸಂವಾದಕ್ಕೆ ಅಥವಾ ಯೋಜನೆಗೆ ಆಯ್ಕೆ ಮಾಡಿರುವುದು ನಿಜಕ್ಕೂ ಭಾರತದಲ್ಲಿ ಚಹಾದ ಪ್ರಾಮುಖ್ಯತೆಯನ್ನು ಸಾರುತ್ತದೆ ಎಂಬುದು ಗಮನಾರ್ಹ ಸಂಗತಿ. ಅಷ್ಟಕ್ಕೂ, ಚಹಾದ ಬಗ್ಗೆ ಇಷ್ಟೋಂದು ಸಂಗತಿಗಳನ್ನು ನಿಮಗೇಕೆ ನೀಡುತ್ತಿದ್ದೇನೆ ಎಂದು ಆಲೋಚಿಸುತ್ತಿದ್ದೀರಾ? ಹೌದು. ಕಳೆದ ಒಂದು ತಿಂಗಳಿನಿಂದ ಚಹಾದ ಬಗ್ಗೆ ಮಾಹಿಗಳನ್ನು ಸಂಗ್ರಹಿಸಿ, ಚಹಾದ ಉದ್ಯಮದ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ನಡೆಸಿ ಈ ಉದ್ಯಮದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯುವ ನಿಟ್ಟಿನಲ್ಲಿ, ಚಹಾವನ್ನು ತನ್ನ ಉದ್ಯಮವನ್ನಾಗಿ ಆರಿಸಿಕೊಂಡು, ಚಹಾ ತಯಾರಿಕೆಗೆ ಬೇಕಾದ ಹಲವಾರು ಬಗೆಯ ಚಹಾ ಪುಡಿಗಳು ಮತ್ತು ಚಹಾ ಬ್ಯಾಗ್‌ಗಳನ್ನು ತಯಾರಿಸುವ ಘಟಕವನ್ನು ದೂರದ ತಮಿಳುನಾಡಿನಲ್ಲಿ ಸ್ಥಾಪಿಸಿ, ಬೆಂಗಳೂರನ್ನು ತನ್ನ ಮಾರುಕಟ್ಟೆಯ ಕೇಂದ್ರವನ್ನಾಗಿಸಿಕೊಂಡು, ಹತ್ತಾರು ನಿರುದ್ಯೋಗಿಗಳಿಗೆ ಉದ್ಯೋಗವನ್ನು ಸಹ ನೀಡಿ ಅಂತರಾಷ್ಟ್ರೀಯ ಗುಣಮಟ್ಟದ ಚಹಾ ಕಂಪನಿಯಾದ “ಬ್ರೂಮಾಸ್ಟರ್ ಇಂಡಿಯಾ” ವಿವಿಧ ಬಗೆಯ ಚಹಾ ಪುಡಿಗಳ ಕಂಪನಿಯ ಸ್ಥಾಪಕರಾದ ಶ್ರೀ ಸುನೀಲ್ ಭೂಪಯ್ಯರವರ ಸಂದರ್ಶನ ನಡೆಸಿ, ಅವರನ್ನು ತಮಗೆ ಪರಿಚಯಿಸುವುದರ ಜೊತೆಗೆ, ನಮ್ಮ-ನಿಮ್ಮೆಲ್ಲರ ಪ್ರತಿನಿತ್ಯದ ಗೆಳೆಯನಾದ “ಚಹಾ”ದ ಬಗ್ಗೆ ಅವರಿಂದ ಪಡೆದ ಸೂಕ್ತ ಮಾಹಿತಿಗಳನ್ನು ತಿಳಿಸುವುದೇ ಇಲ್ಲಿ ನನ್ನ ಮುಖ್ಯ ಉದ್ದೇಶ.
green-tea1-1
ತುಂಬಾ ಟೀ ಕುಡಿಯುವ ಅಭ್ಯಾಸವನ್ನು ಚಟ ಎಂದು ಬಿಡುತ್ತೇವೆ. ಆದರೆ ಗ್ರೀನ್ ಟೀಯನ್ನು ಆ ಚಟದ ಗುಂಪಿಗೆ ಸೇರಿಸಲು ಬರುವುದಿಲ್ಲ. ಅದಕ್ಕೆ ಕಾರಣ ಅದರಲ್ಲಿರುವ ಔಷಧೀಯ ಗುಣ. ಗ್ರೀನ್ ಟೀ ಕುಡಿಯುವುದರಿಂದ ತ್ವಚೆ ಕಾಂತಿ ಹೆಚ್ಚುತ್ತದೆ. ಇದು ಕೇವಲ ಸೌಂದರ್ಯವಷ್ಟೇ ಅಲ್ಲ ಆರೋಗ್ಯವನ್ನು ಹೆಚ್ಚಿಸುವುದರಲ್ಲಿ ಪರಿಣಾಮಕಾರಿಯಾಗಿದೆ. ಗ್ರೀನ್ ಟೀ ಕುಡಿದರೆ ದೇಹಕ್ಕೆ ಚೈತನ್ಯ ದೊರೆಯುವುದರಿಂದ ಚಡುವಟಿಕೆಯಿಂದ ಕಾರ್ಯನಿರ್ವಹಿಸಬಹುದು. ಗ್ರೀನ್ ಟೀನಲ್ಲಿರುವ ಇಉಅಅ ಎಂಬ ಂಟಿಣioxiಜಚಿಟಿಣ ಇರುವುದರಿಂದ ರೋಗಾಣುಗಳ ವಿರುದ್ದ ಹೋರಾಡುವ ಸಾಮಥ್ಯ ಹೊಂದಿದೆ. ಗ್ರೀನ್ ಟೀ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ. ಅಲ್ಲದೇ ಕ್ಯಾನ್ಸರ್‌ನಂತಹ ಮಾರಕ ರೋಗವನ್ನು ತಡೆಗಟ್ಟುವ ಔಷದೀಯ ಗುಣವನ್ನು ಹೊಂದಿದೆ. ಇದರಲ್ಲಿರುವ ವಿಟಮಿನ್ ಕೆ ಯಿಂದ ರಕ್ತ ಹೆಪ್ಪುಗಟ್ಟುವ ಸಮಸ್ಯೆ ನಿವಾರಣೆಯಾಗುತ್ತದೆ. ಗ್ರೀನ್ ಟೀ ನಿಮ್ಮ ಇತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ವಿಷಕಾರಕಗಳನ್ನು ಸಂಹರಿಸುವ ಶಕ್ತಿಯನ್ನು ಸಹ ಹೊಂದಿದೆ.
– ಶ್ರೀ ಸುನೀಲ್ ಭೂಪಯ್ಯ
ಸಿ.ಇ.ಓ, “ಬ್ರೂಮಾಸ್ಟರ್ ಇಂಡಿಯಾ”

brewmasters-green-twings-leaf
ಟೀ ಕುಡಿಯುವುದಕ್ಕೂ ನೀತಿ-ನಿಯಮವಿದೆ, ಅಚ್ಚರಿಯಾಯಿತೇ?
ಬೆಳಿಗ್ಗೆ ಎದ್ದ ತಕ್ಷಣ ಬಿಸಿ-ಬಿಸಿಯಾದ ಟೀ ಕುಡಿಯುವ ಮೂಲಕ ದೇಹ ಮತ್ತು ಮನಸ್ಸಿಗೆ ಬೇಕಾದ ಆಹ್ಲಾದ ದಿವಿಡೀ ಉಲ್ಲಾಸದಿಂದಿರಲು ನೆರವಾಗುತ್ತದೆ. ಆದರೆ ಇದರ ದುಷ್ಪರಿಣಾಮವೇನು ಗೊತ್ತೆ? ಬಿಸಿ ಟೀ ಹೊಟ್ಟೆಗೆ ತಲುಪಿದ ಬಳಿಕ ಜೀರ್ಣಾಂಗಗಳಲ್ಲಿ ಆಮ್ಲೀಯತೆ ಹೆಚ್ಚಿಸುವುದು. ಇದರಿಂದ ಹಲವು ತೊಂದರೆಗಳು, ತಕ್ಷಣವೇ ಅಲ್ಲದಿದ್ದರೂ ಕೆಲಕಾಲದ ಬಳಿಕ ಪ್ರಾರಂಭವಾಗುತ್ತದೆ. ಹೊಟ್ಟೆಯಲ್ಲಿ ಉರಿ, ಹುಳಿತೇಗು, ಅಜೀರ್ಣ, ಕರುಳಿನ ಹುಣ್ಣು, ಹೊಟ್ಟೆ ಉಬ್ಬರಿಕೆ ಮೊದಲಾದವು ಕೆಲಕಾಲದ ನಂತರ ಬಾದಿಸಬಹುದು. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಬೇಡ ಎಂದು ತಜ್ಞರು ಸಲಹೆ ನೀಡುತ್ತಾರೆ. ಇದೇ ರೀತಿ ಟೀ ಸೇವನೆ ಹಲವು ಸಂಧರ್ಭಗಳಲ್ಲಿ ಉತ್ತಮವಲ್ಲ. ಬೆಳಿಗ್ಗೆ ಹಾಸಿಗೆಯಲ್ಲಿ ಕುಡಿಯುವ ಟೀ ತಮ್ಮ ಪ್ರತಿಷ್ಠೆಯನ್ನು ಮೆರೆಯಲು ಬ್ರಿಟೀಷರು ತಂದ ಈ ಪದ್ದತಿಯನ್ನು ಈಗಲೂ ಕೆಲವೆಡೆ ಅನುಸರಿಸುತ್ತಾರೆ. ಅದೆಂದರೆ ಬೆಳಿಗ್ಗೆ ನಿದ್ರೆಯಿಂದ ಎಚ್ಚರಾದ ಕೂಡಲೇ, ಹಾಸಿಗೆ ಬಿಟ್ಟೇಳುವ ಮುನ್ನವೇ ಒಂದು ಕಪ್ ಟೀ ಕುಡಿಯುವುದು. ಆದರೆ ಈ ಕ್ರಮ ಅತಿ ಅನಾರೋಗ್ಯಕರವಾಗಿದ್ದು, ವಿಶೇಷವಾಗಿ ಬಾಯಿಯ ಓಳಗೆ ವಿಷಕಾರಿ ಅಂಶವನ್ನು ಹೆಚ್ಚಿಸುವ ಮೂಲಕ ಬಾಯಿ, ಒಸಡು, ಹಲ್ಲು, ನಾಲಿಗೆಮ ಗಂಟಲಸೋಂಕು ಮೊದಲಾದ ತೊಂದರೆಗಳು ಪ್ರಾರಂಭವಾಗುತ್ತವೆ. ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚುತ್ತದೆ. ಊಟದ ಬಳಿಕ ಟೀ ಸೇವಿಸುವುದರಿಂದ ಟೀನಲ್ಲಿರುವ ಫಿನಾಲಿಕ್ ಕಣಗಳು ಆಹಾರದಿಂದ ಪ್ರೋಟೀನುಗಳು ಕರುಳುಗಳಿಗೆ ಹೀರಲ್ಪಡುವುದನ್ನು ತಡೆಯುತ್ತದೆ. ಅಂದರೆ ಊಟ ಮಾಡುವ ಮುಖ್ಯ ಉದ್ದೇಶವನ್ನೇ ಹಾಳುಗೆಡವುತ್ತದೆ. ಅಲ್ಲದೇ ಕ್ಯಾಟೆಚಿನ್ ಎಂಬ ಆಂಟಿ ಆಕ್ಸಿಡೆಂಟುಗಳನ್ನು ನಿಷ್ಕ್ರೀಯಗೊಳಿಸುತ್ತದೆ. ಒಂದು ವೇಳೆ ರಕ್ತದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿದ್ದು ರಕ್ತಹೀನತೆಯಿಂದ ಬಳಲುತ್ತಿದ್ದರೆ ಈ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಕೆಲವರಿಗೆ ರಾತ್ರಿ ಮಲಗುವ ಮುನ್ನ ಕುಡಿಯುವ ಟೀ ಕುಡಿದು ಮಲಗುವ ಅಭ್ಯಾಸವಿರುತ್ತದೆ. ಆದರೆ ರಾತ್ರಿಯೂಟದ ಬಳಿಕ ಟೀ ಕುಡಿಯುವುದೇ ದೊಡ್ಡ ತಪ್ಪು. ಏಕೆಂದರೇ ಟೀಯಲ್ಲಿರುವ ಕೆಫಿನ್ ಒಂದು ಉತ್ತೇಜಕ ಪೋಷಕಾಂಶವಾಗಿದ್ದು ನಿದ್ದೆ ಬರುವುದನ್ನು ತಡೆಯುತ್ತದೆ. ಪರಿಣಾಮವಾಗಿ ನಿದ್ರಾಹೀನತೆ ಅಥವಾ ಅಸಮರ್ಪಕ ನಿದ್ದೆಯಾಗುವ ಸಂಭವ ಎದುರಾಗುತ್ತದೆ. ಒಂದು ವೇಳೆ ವೈದ್ಯರು ನಿಮ್ಮ ಆರೋಗ್ಯದಲ್ಲಿ ಯಾವುದಾದರೊಂದು ಕೊರತೆ ಕಂಡುಕೊಂಡು ಇದಕ್ಕೆ ಪೂರಕವಾದ ಔಷದಿಗಳನ್ನು ಅಥವಾ ಆಹಾರಗಳನ್ನು ಸಲಹೆ ಮಾಡಿದ್ದರೆ ಈ ಔಷದಿಗಳೊಂದಿಗೆ ಟೀ ಸೇವನೆ ಸಲ್ಲದು. ಏಕೆಂದರೇ ಟೀ ನಲ್ಲಿರುವ ಪೋಷಕಾಂಶಗಳು ಈ ಔಷದಿಗಳ ಮೇಲೆ ಪರಿಣಾಮ ಬೀರಿ ಅಗತ್ಯವಾದ ಪರಿಣಾಮಗಳನ್ನು ನೀಡದೇ ಅನಗತ್ಯವಾದ ದುಷ್ಪರಿಣಾಮಗಳನ್ನು ನೀಡಬಹುದು. ವಿಶೇಷವಾಗಿ ಕಬ್ಬಿಣಾಂಶದ ಕೊರತೆಗೆ ನೀಡಲಾಗುವ ಔಷದಿಗಳ ಮೇಲೆ ಟೀ ಪರಿಣಾಮ ಬೀರುತ್ತದೆ. ಟೀ ಬದಲಿಗೆ ಕಿತ್ತಳೆ ರಸವನ್ನು ಸೇವಿಸುವುದು ಉತ್ತಮ. ನಿಮ್ಮ ಟೀಯಲ್ಲಿ ನೊಣ ಅಥವಾ ಇನ್ನಾವುದಾದರೂ ವಸ್ತು ಬಿದ್ದಿದ್ದಾಗ ಈ ಟೀಯನ್ನು ಎಸೆದುಬಿಡಿ, ಜಿಪುಣರಾಗಬೇಡಿ. ಬೇರೆ ಟೀ ತಯಾರಿಸಿ ಕುಡಿಯಿರಿ. ಏಕೆಂದರೇ ಟೀಯ ಬಿಸಿಗೆ ಸಾಯುವ ನೊಣಗಳಿಂದ ತಕ್ಷಣವೇ ವಿಷಕಾರಿ ದ್ರವಗಳು ಮತ್ತು ಕಾಯಿಲೆ ಹರಡುವ ಬ್ಯಾಕ್ಟೀರಿಯಾಗಳು ಟೀಗೆ ಸೇರಿಬಿಡುತ್ತವೆ. ಇದನ್ನು ಕುಡಿದರೆ ಹೊಟ್ಟೆಯಲ್ಲಿ ಸೋಂಕು ಸಹಿತ ಹಲವು ತೊಂದರೆಗಳು ಖಂಡಿತವಾಗಿಯೂ ಎದುರಾಗುತ್ತದೆ.
81-0ae4d84l-_sx425_

download
-ವೈದ್ಯರ ಸಲಹೆಗಳು
ತ್ವರಿತದ ತೂಕ ಇಳಿಕೆಗೆ ಬ್ರ್ಯೂ ಮಾಸ್ಟರ್ ಹಸಿರು ಚಹಾವನ್ನು ಒಮ್ಮೆ ಪ್ರಯತ್ನಿಸಿ:
ಹಸಿರು ಚಹಾ(ಗ್ರೀನ್ ಟೀ) ಮಾರುಕಟ್ಟೆಗಳಲ್ಲಿ ಇತರ ಚಹಾಗಳಿಗಿಂತ ಜನಪ್ರಿಯವಾದದ್ದು. ಹಲವಾರು ಕಾರಣಗಳಿಗಾಗಿ ವಿಶ್ವದ ಹೆಚ್ಚಿನ ಜನರು ಈ ಚಹಾವನ್ನು ದಿನವೂ ಸೇವಿಸುತ್ತಾರೆ. ಬ್ಲ್ಯಾಕ್ ಚಹಾ ಮತ್ತು ಹಾಲಿನ ಚಹಾ ಕೂಡ ಈ ಗ್ರೀನ್ ಟೀ ಅಬ್ಬರಕ್ಕೆ ಮೂಲೆ ಗುಂಪಾಗುತ್ತಿದೆ ಎಂಬುದು ನಂಬಲೇಬೇಕಾದ ವಿಷಯ. ಅಷ್ಟು ಜನಪ್ರಿಯತೆ ಮೆಚ್ಚುಗೆ ಈ ಗ್ರೀನ್ ಟೀಗೆ ಇದೆ. ನಿತ್ಯವೂ ಹಸಿರು ಚಹಾವನ್ನು ಸೇವಿಸುವವರು ಇತರರಿಗಿಂತ ಆರೋಗ್ಯವಂತರು ಮತ್ತು ಉತ್ಸಾಹಿಗಳಾಗಿರುತ್ತಾರೆ. ಸಂಶೋದನೆಯ ಪ್ರಕಾರ ಹಸಿರು ಚಹಾ ನಿಮ್ಮ ದೇಹದ ತೂಕವನ್ನು ಇಳಿಸುವಲ್ಲಿ ಸಹಕಾರಿ, ಕ್ಯಾನ್ಸರ್ ರೋಗವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ದೇಹದ ನರೋದಕ ವ್ಯವಸ್ಥೆಯನ್ನು ಸುದೃಡಗೊಳಿಸುತ್ತದೆ ಎಂಬುದು ಸಾಬೀತಾಗಿದೆ. ನೀವು ತ್ವರಿತವಾಗಿ ತೂಕವನ್ನು ಇಳಿಸಬೇಕೆಂಬ ಯೋಜನೆಯಲ್ಲಿದ್ದರೆ, ಇಂದೇ ಹಸಿರು ಚಹಾವನ್ನು ನೀವು ಅಪ್ಪಿಕೊಳ್ಳಬೇಕು. ನಿಮ್ಮ ಅತಿಯಾದ ತೂಕವನ್ನು ಇಳಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಚಹಾಗಳಲ್ಲಿ ಒಂದಾದ ಬ್ರ್ಯೂ ಮಾಸ್ಟರ್ ಹಸಿರು ಚಹಾವನ್ನು ಬಳಸಿ ನಂತರ ಇದರ ಚಮತ್ಕಾರವನ್ನು ನೋಡಬಹುದಾಗಿದೆ. ನಿಮ್ಮನ್ನು ಆರೋಗ್ಯವಂತರನ್ನಾಗಿರಿಸಿ ಫಿಟ್ ಮಾಡಲಿ ಈ ಹಸಿರು ಚಹಾ ಸಹಾಯಕ. ನಿಮ್ಮ ತೂಕವನ್ನು ಇಳಿಸಲು ಸಹಾಯಕವಾಗಿರುವ ಹಸಿರು ಚಹಾ ಒಂದು ಸರಳವಾದ ಸಲಹೆಯಾಗಿದೆ. ಅತಿಯಾದ ತೂಕವನ್ನು ನಿಯಂತ್ರಣಕ್ಕೆ ತರಲು ಸಹಕಾರಿ ಕಡಿಮೆ ಕ್ಯಾಲೋರಿಯ ಆಹಾರವನ್ನು ಸೇವಿಸುವುದಾಗಿದೆ. ಬ್ರ್ಯೂ ಮಾಸ್ಟರ್ ಹಸಿರು ಚಹಾ ನಿಮ್ಮ ಚಯಾಪಚಯ ಕ್ರಯೆಯನ್ನು ಚುರುಕುಗೊಳಿಸುತ್ತದೆ. ನೀವು ಗ್ರೀನ್ ಟೀಯನ್ನು ಸೇವಿಸಿದ ಮೂವತ್ತು ನಲವತ್ತು ನಿಮಿಷಗಳವರೆಗೂ ನಿಮಗೆ ಹಸಿವು ಉಂಟಾಗುವುದಿಲ್ಲ. ನಿಮ್ಮ ದೇಹಕ್ಕೆ ತಿನ್ನುವ ಚಪಲ ಉಂಟಾಗದೇ ಇದ್ದಲ್ಲಿ ಸಾಮಾನ್ಯವಾಗಿ ನಿಮ್ಮ ತೂಕ ನಿಯಂತ್ರಣಕ್ಕೆ ಬರುತ್ತದೆ.
brewmasters-green-twigs-green-tea-ginger1
ಹೀಗೆ ಟೀ ಬಗೆಯ ಹಲವು ಬಗೆಯ ವಿವರಣೆಗಳನ್ನು ತಿಳಿದುಕೊಂಡ ನಂತರ, ನಿಮ್ಮ ಹತ್ತಿರದ ಸೂಪರ್ ಮಾರ್ಕೆಟ್‌ಗಳಲ್ಲಿ ಅಥವಾ ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಮಾರಾಟಕ್ಕೆ ದೊರೆಯುವ ಬ್ರ್ಯೂ ಮಾಸ್ಟರ್ ಚಹಾ ವನ್ನು ಖರೀದಿಸಿ ಉಪಯೋಗಿಸಿ. ಕರ್ನಾಟಕದ ಕೊಡಗು ಮೂಲದವರಾದ ನಮ್ಮ ಶ್ರೀ ಸುನೀಲ್ ಭೂಪಯ್ಯನವರ ಬ್ರ್ಯೂ ಮಾಸ್ಟರ್ ಎಂಬ ಕನ್ನಡದ ಸ್ಥಳೀಯ ಸಂಸ್ಥೆಯನ್ನು ಉಳಿಸಿ ಬೆಳೆಸೋಣ. ವಿದೇಶಿ ವಸ್ತುಗಳ ವ್ಯಾಮೋಹವನ್ನು ತ್ಯಜಿಸಿ, ದೇಶಿಯ ತಯಾರಿಕೆಗಳನ್ನು ಬಳಸೋಣ.