“ಸೇವ್ ಎ...

“ಸೇವ್ ಎ ಲೈಫ್ ಅಂಡ್ ಬೀ ಎ ಹೀರೋ” ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಶ್ ಎಲ್.ವೈ ರವರಿಂದ ಉತ್ತಮ ಪ್ರಯತ್ನ. | save a life and be a hero / l.y rajesh / traffic short film

137
0
SHARE

ದೃಶ್ಯ ಮಾಧ್ಯಮಕ್ಕೆ ಇರೋ ತಾಕತ್ತೇ ಇದು! ಮಾತು ಮತ್ತು ಬರವಣಿಗೆಗಿಂತ ಅತ್ಯಂತ ಪ್ರಭಾವಕಾರಿ ಮತ್ತು ಪರಿಣಾಮಕಾರಿ ಈ ದೃಶ್ಯ ಮಾಧ್ಯಮ. ತಾವೇನು ಹೇಳಬೇಕು ಅನ್ನೋದನ್ನ ನೋಡುಗರ ಮನಮುಟ್ಟುವಂತೆ ಹೇಳುವುದರ ಜೊತೆಗೆ ಸಾರ್ವಜನಿಕರ ಪ್ರಾಣದ ಮೇಲೆ ಬಹಳ ಜಾಗೃತಿವಹಿಸುವ ನಿಷ್ಕಲ್ಮಶವಾದ ಮನಸ್ಸು ಮತ್ತು ಕೆಲಸದಲ್ಲಿ ಅತ್ಯಂತ ನಿಷ್ಟೆಯನ್ನು ಹೊಂದಿರುವ ಪೊಲೀಸ್ ಅಧಿಕಾರಿ ಇನ್ಸ್‌ಪೆಕ್ಟರ್ ರಾಜೇಶ್ ಎಲ್.ವೈ ರವರ ಉತ್ತಮ ಪ್ರಯತ್ನವೇ ಸೇವ್ ಎ ಲೈಫ್ ಅಂಡ್ ಬೀ ಎ ಹೀರೋ ಕಿರುಚಿತ್ರ. ಇಲ್ಲಿ ಅಪಘಾತದ ಸಂಧರ್ಭಗಳಲ್ಲಿ, ಗಾಯಗೊಂಡ ಸಂತ್ರಸ್ಥರಿಗೆ ಸ್ಥಳೀಯ ಸಾರ್ವಜನಿಕರು ನೆರವಿಗೆ ಬಂದು ಪರೋಪಕಾರದ ದೃಷ್ಟಿಯಿಂದ ಅವರ ಜೀವದ ರಕ್ಷಣೆಯನ್ನು ಮಾಡಲು ಪ್ರೇರೇಪಿಸುವ ಕಿರುಚಿತ್ರ. “ಸೇವ್ ಎ ಲೈಫ್ ಅಂಡ್ ಬೀ ಎ ಹೀರೋ”. ಈಗಾಗಲೇ ಫೇಸ್‌ಬುಕ್‌ನಲ್ಲಿ ಅತ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಮತ್ತು ಶಹಬ್ಬಾಸ್‌ನ್ನು ಪಡೆದಿದೆ. ಒಬ್ಬ ಚಿತ್ರ ನಿರ್ಮಾಪಕನಾಗಿ ನನಗೂ ಇದು ಅತ್ಯಂತ ಇಷ್ಟದ ಕಿರುಚಿತ್ರ.

ಈ ಹಿಂದೆ ರಾಜೇಶ್ ಎಲ್.ವೈ ರವರು ಮೈಕೋ ಲೇಔಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ರಾಗಿದ್ದಾಲೂ ಸಹ ಠಾಣೆಗೆ ಬರುತ್ತಿದ್ದ ಹೊರ ರಾಜ್ಯಗಳವರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಸಾವಿರಾರು ಕನ್ನಡ ಕಲಿಕಾ ಪುಸ್ತಕಗಳನ್ನು ಉಚಿತವಾಗಿ ಹಂಚಿದ್ದಾರೆ. ಮತ್ತು ಅಂದಿನ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಶ್ರೀ ಹೆಚ್ ವೀರಭಧ್ರೇಗೌಡರು ಬಹಳ ಆಸಕ್ತಿಯಿಟ್ಟು ನಮ್ಮ ಏಕಲವ್ಯ ಪತ್ರಿಕೆಯಿಂದ ತಯಾರು ಮಾಡಿಸಿದ್ದ ಬೀ ಸೇಫ್ ಇದು ಪ್ರತಿಕ್ಷಣದ ಎಚ್ಚರಿಕೆ ಎಂಬ ಅಪರಾದಗಳನ್ನು ತಡೆಯುವ ಕಿರುಚಿತ್ರದಲ್ಲಿಯೂ ಸಂಪೂರ್ಣ ಭಾಗವಹಿಸುವುದರ ಜೊತೆಗೆ ಮೈಕೋಲೌಔಟ್ ಸರಹದ್ದಿನಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಸಾರ್ವಜನಿಕ ಪ್ರದರ್ಶನಗಳನ್ನು ಮಾಡಿಸಿದ್ದಾರೆ.
ನಿಜಕ್ಕೂ ಇಂತಹ ಅಧಿಕಾರಿಗಳು ಇತರರಿಗೆ ಆದರ್ಶಪ್ರಾಯರು ಎಂದರೆ ಅತಿಶಯೋಕ್ತಿಯಲ್ಲ.
10393151_710437929022890_5491577036219885179_n

News Source by: Ekalavya