ನಾಡಪ್ರಭು, ಪ್ರ...

ನಾಡಪ್ರಭು, ಪ್ರಜಾವತ್ಸಲ, ಬೆಂಗಳೂರು ನಗರ ನಿರ್ಮಾತೃ ಶ್ರೀ ಕೆಂಪೇಗೌಡರ ಹಾಗೂ ನಮ್ಮ ಹೆಮ್ಮೆಯ ಬೆಂಗಳೂರನ್ನು ಕುರಿತ “ನಾಡಪ್ರಭು- ಇದು ಬೆಂಗ್ಳೂರಿನ ಕಥೆ!” ಸಾಕ್ಷ್ಯಚಿತ್ರ

547
0
SHARE

ಬ್ಯಾಕ್ ಟು ಬೆಂಗಳೂರು ಅಂತರ್ಜಾಲ ಸುದ್ದಿವಾಹಿನಿಯ ಮುಖ್ಯಸ್ಥ, ಜರಗನಹಳ್ಳಿ ಕಾಂತರಾಜು ಆದ ನಾನು, ಈ ಅಂಕಣದ ಮುಖಾಂತರ ಓದುಗರಿಗೆ ತಿಳಿಸಬಯಸುವುದೇನೆಂದರೇ, ನಮ್ಮ ಸಂಸ್ಥೆಯ ವತಿಯಿಂದ ಈಗಾಗಲೇ ಅನೇಕ ಸಾಕ್ಷ್ಯಚಿತ್ರಗಳನ್ನು ಸಿದ್ದಪಡಿಸಿದ್ದು, ಅವುಗಳಲ್ಲಿ ನಾಡಿನ ಮೇರುಕವಿ ಶ್ರೀ ಕೆ.ಪಿ ಪೂರ್ಣಚಂದ್ರ ತೇಜಸ್ವಿರವರ ಬದುಕು ಬರಹವನ್ನು ಕುರಿತ “ಮತ್ತೆ ಮತ್ತೆ ತೇಜಸ್ವಿ”, ಶ್ರೀ ಸಿದ್ದಗಂಗಾ ಮಠದ ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿರವರ ಕುರಿತ “ಲೋಕಜಂಗಮ”, ಪೊಲೀಸ್ ಇಲಾಖೆಗಾಗಿ ಮಾಡಿಕೊಟ್ಟಿರುವ ಅಪರಾಧಗಳನ್ನು ತಡೆಯುವ ಮಾಹಿತಿಯುಳ್ಳ “ಬೀಸೇಫ್”, ಡಾ||ಎಂ.ಎಂ ಕಲಬುರ್ಗಿರವರ ಜೀವನವನ್ನು ಕುರಿತ “ಮಾರ್ಗಕ್ಕೆ ಕೊನೆಯಿಲ್ಲ” ಪ್ರಮುಖವಾದವು. ಇನ್ನು, ಶ್ರೀ ಆದಿಚುಂಚನಗಿರಿಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾದರನಾಥ ಮಹಾಸ್ವಾಮೀಜಿರವರ ಕುರಿತ “ಧರ್ಮಸೂರ್ಯ” ಯೋಜನೆಯು ಸಹ ಮುಂದಿನ ಯೋಜನೆಯಾಗಿ ಬರಲಿದೆ.


ಸದ್ಯ, ನಮ್ಮ ಸಂಸ್ಥೆಯ ಮುಂದಿನ ಯೋಜನೆಯಾಗಿ ಬೆಂಗಳೂರು ನಗರ ನಿರ್ಮಾತೃ, “ನಾಡಪ್ರಭು ಶ್ರೀ ಕೆಂಪೇಗೌಡ”ರ ಜೀವನ ಹಾಗೂ ಸಾಧನೆಗಳ ಕುರಿತಾದ ಸುಮಾರು ೬೦ ರಿಂದ ೯೦ ನಿಮಿಷಗಳ ಅವಧಿಯ ಮಹತ್ವಪೂರ್ಣ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಲಾಗುತ್ತಿದೆ. ಸಾಕ್ಷ್ಯಚಿತ್ರದ

32
Poster2

ಮುಖ್ಯಅಂಶಗಳಾಗಿ, ವಿಜಯನಗರ ಸಾಮ್ರಾಜ್ಯದ ಪರಿಚಯ | ಶ್ರೀ ಹಿರಿಯ ಕೆಂಪೇಗೌಡರ ಆರಂಭಿಕ ಜೀವನ | ಬೆಂದಕಾಳೂರಿನ ಪರಿಕಲ್ಪನೆ ಮತ್ತು ನಿರ್ಮಾಣ | ಸಾಮಾಜಿಕ ಸುಧಾರಣೆ | ಕಲೆ ಮತ್ತು ಸಾಂಸ್ಕೃತಿಕ ಆಸಕ್ತಿ ಮತ್ತು ಕೊಡುಗೆ | ಶ್ರೀ ಕೆಂಪೇಗೌಡರ ಜೀವನ ಮತ್ತು ಸಾಧನೆ | ಒಕ್ಕಲಿಗ ಜನಾಂಗದ ಪರಂಪರೆ | ಒಕ್ಕಲಿಗರ ಸಂಘದ ಸಾಮಾಜಿಕ ಕೊಡುಗೆಗಳು | ಶ್ರೀ ಕೆಂಪೇಗೌಡರ ಆಳ್ವಿಕೆಯ ಕಾಲಮಾನದ ಪರಿಚಯ | ಜನಾಂಗದ ಮತ್ತು ಸಮಾಜದ ಗಣ್ಯ ವ್ಯಕ್ತಿಗಳ ಅಭಿಪ್ರಾಯಗಳು | ಆಧುನಿಕ ಬೆಂಗಳೂರಿನ ಬೆಳವಣಿಗೆ ಮತ್ತು ರಾಜ್ಯದ ರೈತನ ಪ್ರಾಮುಖ್ಯತೆ | ಹೀಗೆ ಅನೇಕ ವಿಚಾರಗಳನ್ನೊಳಗೊಂಡಿದೆ. ಯೋಜನೆಯನ್ನು ರೂಪುಗೊಳಿಸಲು ಸಹಕಾರವನ್ನು ನೀಡಿದವರೆಲ್ಲರಿಗೂ ಅಭಿನಂದನಂದನೆಯನ್ನು ಸಲ್ಲಿಸಲು ಅಭಿನಂದನಾ ಸ್ಮರಣ ಸಂಚಿಕೆಯೊಂದನ್ನು ಸಹ ಸಿದ್ದಪಡಿಸಲಾಗುತ್ತಿದೆ.


ಹೀಗೆ ಸಿದ್ದಪಡಿಸುವ ಈ ಸಾಕ್ಷ್ಯಚಿತ್ರವನ್ನು ಬೆಂಗಳೂರು ನಗರದ ೧೯೮ ವಾರ್ಡ್‌ಗಳಲ್ಲೂ ಸಾರ್ವಜನಿಕ ಪ್ರದರ್ಶನಗಳನ್ನು ಆಯೋಜಿಸಿ, ನಾಡಿನ ಇತಿಹಾಸ, ಪರಂಪರೆ ಹಾಗೂ ಕೋಟ್ಯಾಂತರ ಜನಗಳಿಗೆ ಆಶ್ರಯವನ್ನು ನೀಡುತ್ತಿರುವ ಬೆಂಗಳೂರಿನ ನೆಲದ ಬಗ್ಗೆ ಕ್ರಮೇಣ ಮೈಮರೆತು ಹೋಗುತ್ತಿರುವ ಬೆಂಗಳೂರಿಗರಲ್ಲಿ ಮತ್ತು ವಲಸೆ ಬಂದು ಸೇರಿರುವ ಲಕ್ಷಾಂತರ ಜನಗಳಿಗೆ ನಮ್ಮ ಹೆಮ್ಮೆಯ “ನಾಡಪ್ರಭು ಶ್ರೀ ಕೆಂಪೇಗೌಡರ ಜೀವನ, ಸಾಧನೆ ಮತ್ತು ಕೊಡುಗೆಗಳನ್ನು ಪರಿಚಯಿಸುವ ಮಹದಾಸೆ ನಮ್ಮದಾಗಿರುತ್ತದೆ”. ಈ ಪ್ರದರ್ಶನಗಳಿಗಾಗಿ ವಿಶೇಷ ತಾಂತ್ರಿಕ ಉಪಕರಣಗಳುಳ್ಳ ವಾಹನವೊಂದನ್ನು ಸಿದ್ದಪಡಿಸಲಾಗುತ್ತಿದೆ.


ಯೋಜನೆ ವಿಷಯ ವಿಶ್ಲೇಷಣೆ
ವಿಜಯನಗರ ಸಾಮ್ರಾಜ್ಯದ ಪಾಳೇಗಾರರು, ಯಲಹಂಕ ನಾಡಿನ ಭೂಪಾಲರು, ಬೆಂಗಳೂರು ನಗರದ ನಿಮಾತೃ ಎಂದೇ ಪ್ರಖ್ಯಾತಿ ಪಡೆದಿರುವ ನಾಡಪ್ರಭು ಶ್ರೀ ಹಿರಿಯ ಕೆಂಪೇಗೌಡರ ಜೀವನ ಚರಿತ್ರೆಯನ್ನು ಮತ್ತು ಸುಮರು ಐನೂರು ವರ್ಷಗಳ ಸಮೃಧ್ದ ಇತಿಹಾಸವನ್ನು ತನ್ನೊಡಲಲ್ಲಿ ಅಡಗಿಸಿಕೊಂಡು, ಒಂದು ಕೋಟಿಗೂ ಮೀರಿದ ಜನಸ್ಥೋಮಕ್ಕೆ ತನ್ನ ಮಡಿಲಿನಲ್ಲಿ ಆಶ್ರಯ ನೀಡಿರುವ ನಮ್ಮ ಹೆಮ್ಮೆಯ ಬೆಂಗಳೂರು ನಗರದ ಸಮಗ್ರ ಇತಿಹಾಸವನ್ನು ಸಾರುವ ಸಾಕ್ಷ್ಯಚಿತ್ರವೇ “ನಾಡಪ್ರಭು-ಇದು ಬೆಂಗ್ಳೂರಿನ ಕಥೆ!”. ಆಧುನಿಕತೆ, ತಾಂತ್ರಿಕತೆ ಹಾಗೂ ನಾಗರೀಕತೆಯಲ್ಲಿ ಗಗನದೆತ್ತರಕ್ಕೆ ಬೆಳೆದು ನಿಂತು, ಇಡೀ ವಿಶ್ವವೇ ಕುತೂಹಲದಿಂದ ತನ್ನತ್ತ ನೋಡುವಂತೆ ಮಾಡಿರುವ ಬೃಹತ್ ಬೆಂಗಳೂರು ಮಹಾನಗರವು, ತನ್ನ ಬಳಿಗೆ ಬಂದವರೆಲ್ಲರಿಗೂ ಆಸರೆ-ಅನ್ನವನ್ನು ನೀಡಿದೆ ಮತ್ತು ವ್ಯಕ್ತಿಯು ತಾನು ಸ್ವತಂತ್ರನಾಗಿ ದುಡಿದು ಯಶಸ್ವಿಯಾಗಲು ಬೇಕಾದ ಸರ್ವ-ಸಕಲ ಅವಕಾಶಗಳನ್ನು ಪೂರೈಸುವ ಅಕ್ಷಯಪಾತ್ರೆಯಾಗಿದೆ.


ಹೀಗೆ ಕೋಟಿ ಜನರನ್ನು ಹೊತ್ತು ನಿಂತಿರುವ ನಮ್ಮ ಬೆಂಗಳೂರಿನಲ್ಲಿ ಹೊರಗಿನಿಂದ ಬಂದು ನೆಲೆಸಿರುವ ಜನಸಂಖ್ಯೆಯು ಶೇಕಡಾ ೭೦% ಇದ್ದು, ಮೂಲಕನ್ನಡಿಗರು ಎಂದು ಕರೆಸಿಕೊಳ್ಳುವವರು ಶೇಕಡಾ೩೦% ಜನರು ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ಹೊರಗಿನಿಂದ ಬಂದು ನೆಲೆಸಿ ತಮ್ಮ ಬದುಕು ಕಟ್ಟಿಕೊಂಡಿರುವ ಅನಿವಾಸಿ ಬೆಂಗಳೂರಿಗರಿಗೆ ನಮ್ಮ ಬೃಹತ್ ಬೆಂಗಳೂರಿನ ಇತಿಹಾಸ, ಪರಂಪರೆ ಮತ್ತು ನಗರ ನಿರ್ಮಾಣಗೊಂಡ ಸತ್ಯಕಥೆಯನ್ನು ಸಮಗ್ರವಾಗಿ ತಿಳಿಸಿಕೊಡುವ ಕರ್ತವ್ಯ ನಮ್ಮಗಳದಾಗಿದೆ. ಇನ್ನೂ ಯಾಂತ್ರಿಕ ಬದುಕಿನ ಧಾವಂತದಲ್ಲಿ ಸಂಪೂರ್ಣ ಮುಳುಗಿಹೋಗಿರುವ ನಮ್ಮ ಮೂಲಕನ್ನಡಿಗರಿಗೂ ಸಹ ನಮ್ಮ ನಗರದ ಇತಿಹಾಸವನ್ನು ಮತ್ತು ನಗರ ನಿರ್ಮಿಸಿ ಇಂದಿನ ಎಲ್ಲಾ ಏಳ್ಗೆಗೂ ಕಾರಣಕರ್ತರಾದ ನಾಡಪ್ರಭು ಶ್ರೀಕೆಂಪೇಗೌಡರನ್ನು ಮತ್ತವರ ಜೀವನವನ್ನು ತಿಳಿಸಿಕೊಡುವುದೇ ನಮ್ಮ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.


“ನಾಡಪ್ರಭು-ಇದು ಬೆಂಗ್ಳೂರಿನ ಕಥೆ” ಸಾಕ್ಷ್ಯಚಿತ್ರದಲ್ಲಿ ಕೆಂಪೇಗೌಡರ ಪೂರ್ವಿಕರ ಕಥೆಗಳು, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲ, ಕೆಂಪೇಗೌಡರ ಕುಟುಂಬದ ಪರಿಚಯ, ಯಲಹಂಕ ನಾಡಿನ ಪರಿಚಯ, ಕೆಂಪೇಗೌಡರ ಆಳ್ವಿಕೆಯ ಇತಿಹಾಸ, ಬೆಂದಕಾಳೂರಿನ ಪರಿಕಲ್ಪನೆ, ನಗರ ನಿರ್ಮಾಣದ ವೇಳೆ ಕಟ್ಟಲಾಗಿರುವ ೧೪೦ಕ್ಕೂ ಹೆಚ್ಚು ಕೆರೆಗಳು, ೫೪ ಪೇಟೆಗಳು, ರಸ್ತೆಯ ಬದಿಯ ಗಿಡಮರಗಳು, ಉದ್ಯಾನಗಳು, ತೋಪುಗಳು, ದೇವಾಲಯಗಳು, ಕಟ್ಟೆ-ಕಲ್ಯಾಣಿಗಳು ಕೆಂಪೇಗೌಡರ ಪರಿಚಯವನ್ನು ಮಾಡಿಕೊಡುತ್ತವೆ. ಜಾನಪದ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ಪಡೆದಿರುವ “ಕೋಟೆಕಟ್ಟಲೆಂದು ತನ್ನನ್ನೆ ಅರ್ಪಿಸಿಕೊಂಡ ಸೊಸೆ ಲಕ್ಷ್ಮೀದೇವಿಯ ಬಲಿದಾನ”ವು ಅಂದಿನ ಕಾಲದ ನಿಸ್ವಾರ್ಥತೆಯನ್ನು ಮತ್ತು ತ್ಯಾಗ ಮನೋಭಾವವನ್ನು ಮೆರೆಯುತ್ತದೆ. ಹಲಸೂರಿನ ಶ್ರೀಸೋಮೇಶ್ವರ, ಬಸವನಗುಡಿಯ ಡೊಡ್ಡ ಬಸವಣ್ಣ, ನಗರ ದೇವತೆ ಅಣ್ಣಮ್ಮ, ಗವಿಗಂಗಾಧರೇಶ್ವರ ಗುಹಾಂತರ ದೇವಾಲಯಗಳು ಸೇರಿದಂತೆ ಅನೇಕ ಇತಿಹಾಸ ಪ್ರಸಿದ್ದ ಸ್ಥಳಗಳು ಕೆಂಪೇಗೌಡರ ಸಾಧನೆ ಮತ್ತು ನಾಡಿಗೆ ನೀಡಿರುವ ಬಳುವಳಿಗಳನ್ನು ಪರಿಚಯಿಸುತ್ತವೆ. ಒಟ್ಟಾರೆ ೧೫೧೦ ರಿಂದ ೧೫೭೦ ರವರೆಗೂ ಜೀವಿಸಿದ್ದ ಪುಣ್ಯಪುರುಷ ನಾಡಪ್ರಭು ಶ್ರೀಕೆಂಪೇಗೌಡರ ಸಮಗ್ರ ಜೀವನವನ್ನು ತಿಳಿಸುವ ಮಹತ್ವಪೂರ್ಣ ಸಾಕ್ಷ್ಯಚಿತ್ರ ಇದಾಗಿದೆ.


ಕರ್ನಾಟಕದ ಶಕ್ತಿಕೇಂದ್ರವಾಗಿ, ತಂತ್ರಜ್ಞಾನ ಕ್ಷೇತ್ರದ ಮುಖ್ಯ ಕೇಂದ್ರವಾಗಿ, ಐಷಾರಾಮಿ ಜೀವನದ ಉಲ್ಲಾಸತಾಣವಾಗಿ, ತನ್ನೊಡಲಲ್ಲಿ ಅಡಗಿಸಿಕೊಂಡಿದ್ದ ಎಲ್ಲಾ ಬಗೆಯ ಭೋಗ-ಭಾಗ್ಯಾದಿಗಳನ್ನು ನಮಗೆ ಕರುಣಿಸಿ, ಕೋಟ್ಯಾಂತರ ಜನರ ಬದುಕಿಗೆ ನೆಲೆ ಕಲ್ಪಿಸಿಕೊಟ್ಟಿರುವ ಬೆಂಗಳೂರು ಎಂಬ ಮಹಾನಗರಿಯ ನಿರ್ಮಾತೃ ಶ್ರೀಕೆಂಪೇಗೌಡರ ಜೀವನ ಮತ್ತು ನಾಡಪ್ರಭುಗಳ ವಿಚಾರಗಳನ್ನು ಅರಿಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗೂ ನಾವು ವಾಸಿಸುತ್ತಿರುವ ಈ ಪುಣ್ಯಭೂಮಿಯ ಇತಿಹಾಸವನ್ನು ತಿಳಿದುಕೊಂಡು ನಮ್ಮ ಮುಂದಿನ ಪೀಳಿಗೆಗೂ ಇದನ್ನು ಕೊಂಡೋಯ್ಯುವ ಜವಾಬ್ದಾರಿ ನಮ್ಮದಾಗಿದೆ. ಈ ಮೂಲಕ “ನಾಡಪ್ರಭು-ಇದು ಬೆಂಗ್ಳೂರಿನ ಕಥೆ!”. ಸಾಕ್ಷ್ಯಚಿತ್ರವನ್ನು ತಯಾರಿಸಿ ಬೆಂಗಳೂರು ಮಹಾನಗರದ ಎಲ್ಲ ವಾರ್ಡ್ಗಳಲ್ಲೂ ಪ್ರದರ್ಶನಗೊಳ್ಳುವಂತೆ ಯೋಜನೆಯನ್ನು ರೂಪಿಸಿ, ಮಹಾನಗರದ ನಾಗರೀಕರಿಗೆ ನಾಡಪ್ರಭುವಿನ ಇತಿಹಾಸವನ್ನು ಪರಿಚಯಿಸುವುದು ನಮಗೆ ದೊರೆತಿರುವ ಭಾಗ್ಯವೆಂದೇ ನಾವು ಭಾವಿಸಿದ್ದೇವೆ.


“ನಾಡಪ್ರಭು ಶ್ರೀ ಕೆಂಪೇಗೌಡ” ಸಾಕ್ಷ್ಯಚಿತ್ರದ ಕಾರ್ಯವಿಧಾನ ಈ ಕೆಳಗಿನಂತಿದೆ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರು ಹಾಗೂ ಉಪ ಮಹಾಪೌರರನ್ನು ಸೇರಿದಂತೆ ಒಟ್ಟು ೧೯೮ ಸದಸ್ಯರುಗಳ ಹಾಗೂ ಬೆಂಗಳೂರು ನಗರದ ೨೮ ಶಾಸಕರುಗಳ ಸಂದರ್ಶನ ನಡೆಸುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ನಾಡಪ್ರಭು ಶ್ರೀ

untitled-1
Poster 1

ಕೆಂಪೇಗೌಡ ಸಾಕ್ಷ್ಯಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸುವುದು. ಈ ಎಲ್ಲಾ ಚಟುವಟಿಕೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗುವಂತೆ ನೋಡಿಕೊಳ್ಳುವುದು. ಸಂದರ್ಶನ ನಡೆಸಿದ ಶಾಸಕರ, ಸದಸ್ಯರ ಹಾಗೂ ಸಮಾಜದ ಗಣ್ಯ ವ್ಯಕ್ತಿಗಳ ವೀಡಿಯೋ ತುಣುಕುಗಳನ್ನು ಯೂಟ್ಯೂಬ್, ಫೇಸ್‌ಬುಕ್, ವಾಟ್ಸ್‌ಪ್ ಹಾಗೂ ಸಂಸ್ಥೆಯ ಅಂತರ್ಜಾಲ ತಾಣಗಳಲ್ಲಿ ಬಿತ್ತರಿಸುವುದು. ಪ್ರತಿಯೊಬ್ಬ ಶಾಸಕರ ಹಾಗೂ ಸದಸ್ಯರ ೦೧ ನಿಮಿಷಗಳ ವಿಡಿಯೋ ಸಿದ್ದಮಾಡಲಾಗುವುದು. ಬೆಂಗಳೂರು ನಗರವನ್ನು ಕಟ್ಟಿದವನ ಬದುಕನ್ನು ಸಮಗ್ರವಾಗಿ ದಾಖಲಿಸಿ ಅದನ್ನು ಎಲ್ಲೆಡೆಯೂ, ಎಲ್ಲರಿಗೂ ದೊರೆಯುವಂತೆ ಮಾಡುವ ಬೃಹತ್ ಯೋಜನೆ ಇದಾಗಲಿದೆ. ಅಂದರೆ ಒಟ್ಟು ೦೨ ಗಂಟೆಗಳ, ಕೆಂಪೆಗೌಡರ ಕುರಿತ ದೃಶ್ಯ ದಾಖಲೆ ೦೧ ಡಿವಿಡಿಯಲ್ಲಿ ದೊರೆಯಲಿದೆ! ಇಡೀ ಭಾರತೀಯ ದೃಶ್ಯ ಮಾಧ್ಯಮ ಇತಿಹಾಸದಲ್ಲಿ ಮತ್ತು ಧಾರ್ಮಿಕ, ಸಾಂಸ್ಕೃತಿಕ ಇತಿಹಾಸದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಬಗ್ಗೆ ಇಷ್ಟು ಅಗಾಧವಾದ, ಅಷ್ಟೇ ಸಮಗ್ರವೂ, ಪರಿಣಾಮಕಾರಿಯೂ ಆದ ಸಾಕ್ಷ್ಯಚಿತ್ರ ಇದೂವರೆಗೂ ಬಂದಿರುವ ಉದಾಹರಣೆ ಇಲ್ಲ. ಅಂತಹ ಒಂದು ಸಮಗ್ರವಾದ, ಬೃಹತ್ ಸಾಕ್ಷ್ಯಚಿತ್ರ ಯೋಜನೆಯಾಗಿ ಈ “ನಾಡಪ್ರಭು-ಇದು ಬೆಂಗ್ಳೂರಿನ ಕಥೆ!” ಹೊರ ಬರಲಿದೆ.


“ನಾಡಪ್ರಭು ಶ್ರೀ ಕೆಂಪೇಗೌಡ” ಸಾಕ್ಷ್ಯಚಿತ್ರದ ನಿರ್ಮಾಣ ತಂಡ

ಪರಿಕಲ್ಪನೆ -ಬ್ಯಾಕ್ ಟು ಬೆಂಗಳೂರು.ಕಾಂ
ನಿರ್ಮಾಪಕರು -ಜರಗನಹಳ್ಳಿ ಕಾಂತರಾಜು

¥ÀjPÀ®à£É-¤ªÀiÁðt dgÀUÀ£ÀºÀ½î PÁAvÀgÁdÄ
Poster3

ರಚನೆ-ನಿರ್ದೇಶನ -ಕೆ.ಎಸ್ ಪರಮೇಶ್ವರ
ಛಾಯಾಗ್ರಹಣ -ಕಿಟ್ಟಿ ಕೌಶಿಕ್
ಸಂಕಲನ -ಚಂದನ್.ಪಿ / ಶಶಿಧರ್.ಪಿ
ಸಹನಿರ್ದೇಶನ -ವಸಂತ
ಸಂಶೋದನೆ-ಮಾಹಿತಿ ಸಂಗ್ರಹ -ಸವಿತ ಪರಮೇಶ್ವರ
ಕಾರ್ಯಕಾರಿ ನಿರ್ಮಾಪಕರು -ಶ್ರೀನಿವಾಸ ಕೆ. ಗೌಡ
ಸ್ಟುಡಿಯೋ -ಕಲಾಮಾದ್ಯಮ ಮೀಡಿಯಾ ವರ್ಕ್ಸ್, ಪದ್ಮನಾಭನಗರ
ಮಾಧ್ಯಮ -ಬ್ಯಾಕ್ ಟು ಬೆಂಗಳೂರು.ಕಾಂ
ಮಾರ್ಕೆಟಿಂಗ್ & ಸೇಲ್ಸ್ -ಮೈಂಡ್ ಓವಿಯೇಷನ್, ಬೆಂಗಳೂರು
ತಂತ್ರಜ್ಞಾನ -ಲೀಡ್ ಇನ್ಫೂ ಮೀಡಿಯಾ
ಸಾರ್ವಜನಿಕ ಪ್ರದರ್ಶನ -ಬೆಂಗಳೂರು ಲೀಡ್ಸ್. ಕಾಂ
ಪ್ರಸ್ತುತಿ -ಜೆ.ಕೆ ಮೂವೀಸ್ ಮತ್ತು ಮ್ಯೂಸಿಕ್, ಬೆಂಗಳೂರು


ಬನ್ನಿ ನಮ್ಮೊಂದಿಗೆ ಕೈಜೋಡಿಸಿ… “ನಾಡಪ್ರಭು-ಇದು ಬೆಂಗ್ಳೂರಿನ ಕಥೆ!”, ಸಾಕ್ಷ್ಯಚಿತ್ರಕ್ಕೆ ಪ್ರಾಯೋಜಕತ್ವ ನೀಡುವ ಮುಖಾಂತರ ಸಹಕಾರ ನೀಡಿ, ಭಾಗಿಗಳಾಗಿ, ಈ ಮೂಲಕ ನಾಡಪ್ರಭು ಶ್ರೀಕೆಂಪೇಗೌಡರು ಹಾಗೂ ನಮ್ಮ ಬೆಂಗಳೂರಿಗೊಂದು ನಮನ ಸಲ್ಲಿಸೋಣ.


-ಜರಗನಹಳ್ಳಿ ಕಾಂತರಾಜು

kantharaju-v_frount_final
V-card

ನಿರ್ಮಾಪಕರು
ನಾಡಪ್ರಭು-ಇದು ಬೆಂಗ್ಳೂರಿನ ಕಥೆ!
ಸಾಕ್ಷ್ಯಚಿತ್ರ