ಎಂ.ಆರ್ ವೆಂಕಟೇ...

ಎಂ.ಆರ್ ವೆಂಕಟೇಶ್ _ರಾಜ್ಯ ಸಂಚಾಲಕರು@ ಹಾಲು ಉತ್ಪಾದಕರ ಪ್ರಕೋಷ್ಠ _ಭಾರತೀಯ ಜನತಾ ಪಕ್ಷ_ಕರ್ನಾಟಕ ರಾಜ್ಯ

435
1
SHARE
 1. ಆತ್ಮೀಯ ರಾಜ್ಯದ ಜನತೆಗೆ ನಿಮ್ಮ ಮನೆ ಮಗ ಎಂ.ಆರ್ ವೆಂಕಟೇಶನ ನಮಸ್ಕಾರಗಳು,
  ಸಾರ್ವಜನಿಕ ವಲಯ ಬಲು ನಂಬುಗೆಯ ಕ್ಷೇತ್ರ. ಜನ ಸಾಮಾನ್ಯರ ಪ್ರೀತಿ-ವಿಶ್ವಾಸದ ಮೇಲೆ ಈ ಕ್ಷೇತ್ರದ ಕಾರ್ಯ ನಿರ್ವಹಣೆ ಅವಲಂಬಿತ. ಸಾರ್ವಜನಿಕ ಜೀವನ ಅಪ್ಪಟ ತಂತಿಯ ಮೇಲಿನ ನಡಿಗೆ. ಅರೆಕ್ಷಣ ಮೈಮರೆತರೂ ಭೂ ಸ್ಪರ್ಷ ಖಚಿತ. ಶ್ರೀಸಾಮಾನ್ಯನ ಒಲುಮೆಯ ಸಂಪಾದನೆ, ಸೇವಾ ತತ್ಪತರೆ ನಿಜಕ್ಕೂ ಕಬ್ಬಿಣದ ಕಡಲೆಯೇ. ಅಸೀಮ ಮನೋಭಾವ, ಸಾಮಾಜಿಕ ಕಾಳಜಿ, ಕ್ರಿಯಾಶೀಲತೆ ಅತ್ಯವಶ್ಯ. ಎಲ್ಲಕ್ಕಿಂತ ಮಿಗಿಲಾಗಿ ಬದ್ದತೆ ಬಲು ಮುಖ್ಯ. ಈ ಅಷ್ಟಗುಣ ಸಂಪನ್ನರು ಮಾತ್ರ ಸಾರ್ವಜನಿಕ ರಂಗದಲ್ಲಿ ಧೀರ್ಘಕಾಲ ಬಾಳಬಲ್ಲರು.


  ಈ ಅಷ್ಟಗುಣ ವೈಶಿಷ್ಟ್ಯ ಮತ್ತು ಸೇವಾನಿಷ್ಟೆ ಒಟ್ಟೊಟ್ಟಿಗೆ ಮೇಳೈಸುವುದು ಬಲು ಅಪರೂಪ. ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಎಂ.ಆರ್ ವೆಂಕಟೇಶ್ ಎಲ್ಲರಂತಲ್ಲ. ಸಾಮಾನ್ಯರಲ್ಲಿ ಸಾಮಾನ್ಯವಾಗಿ ಜನತೆಯಲ್ಲಿ ಜನಾರ್ಧನನನ್ನು ಕಾಣುವ ಜನಸೇವಕ. ಹಮ್ಮು-ಬಿಮ್ಮು, ರಾಗ-ದ್ವೇಷಗಳಿಲ್ಲದ ಮನುಷ್ಯ. ಸರಳ-ಸಜ್ಜನಿಕೆಯ ಸ್ನೇಹಜೀವಿ. ಎಲ್ಲರೊಳಗೊಂದಾಗುವ ತಮ್ಮ ಸಮಷ್ಟಿ ಮನೋಭಾವದಿಂದ ಸಮಾಜದ ಹಿತ ಬಯಸುವ ಸಮಾಜಮುಖಿ. ಸದಾ ಒಂದಿಲ್ಲೊಂದು ಜನಪರ ಕಾ
  ರ್ಯಗಳಲ್ಲಿ ತೊಡಗುವ ಕಾಯಕಮಯಿ.


  ಸಾಮಾನ್ಯ ಕುಟುಂಬದ ಎಂ.ಆರ್ ವೆಂಕಟೇಶ್ ಅವರಿಗೆ ಇಂತಹದೊಂದು ವ್ಯಕ್ತಿತ್ವ ಅನಾಯಾಸವಾಗಿ ಬಂದಿದ್ದಲ್ಲ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಾಗಸ್ಪರ್ಶಕ್ಕೆ ಕಲ್ಲನ್ನೂ ಶಿಲೆಯಾಗಿಸಬಲ್ಲ ಮಾಂತ್ರಿಕ ಶಕ್ತಿಯುಂಟು. ಆ ಮೂರರ ಸಾಹಚರ್ಯ, ಸತತ ಪರಿಶ್ರಮ, ಸಜ್ಜನರ ಸಂಸರ್ಗ ಮತ್ತು ಸನ್ಮಾರ್ಗದ ನಡೆಯಲ್ಲಿ ರೂಪುಗೊಂಡ ವ್ಯಕ್ತಿತ್ವ ಅವರದ್ದು ಹಾಗಾಗಿ ಸಾಹಿತ್ಯ ಪರಿಚಾರಿಕೆ, ಸಂಸ್ಕೃತಿ ರಕ್ಷಣೆ, ಜನಸೇವೆ, ಹೋರಾಟ ಮತ್ತು ಸಂಘಟನೆ ಎಂ.ಆರ್ ವೆಂಕಟೇಶ್ ವ್ಯಕ್ತಿತ್ವದ ಬಹುಮುಖ್ಯ ಪ್ರಭೆಗಳು. ಆ ಬೆಳಕು ಜನ ಪ್ರೀತಿಗೆ ರಹದಾರಿ, ಸಾಮಾಜಿಕ ಗೌರವ ಮನ್ನಣೆಗೆ ರಾಜಮಾರ್ಗವು ಸಹ.


  ಅಕ್ಷರದ ಹೊಂಬೆಳಕು:
  ಸಮಾಜದ ಹಿತ ರಕ್ಷಣೆ, ಉದ್ದಾರ ಶ್ರೀಸಾಮಾನ್ಯನಿಂದಲೇ ಸಾಧ್ಯವೆಂಬ ರಾಷ್ಟ್ರಕವಿ ಕುವೆಂಪು ನಲ್ನುಡಿಯ ಪ್ರತಿರೂಪ ಶ್ರೀ ಎಂ.ಆರ್ ವೆಂಕಟೇಶ್. ಬೆಂಗಳೂರು ಗ್ರಾಮಾಂತರ ಜಿಲ್ಲೆಯವರು. ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯದ ಲೇ|| ಶ್ರೀ ಎಂ.ರಾಮಯ್ಯ ಮತ್ತು ಶ್ರೀಮತಿ ಸಿ. ನಂಜಮ್ಮ ದಂಪತಿಯ ಸುಪುತ್ರ.

  ಮಧ್ಯಮ ವರ್ಗದ ಕುಟುಂಬದ ಈ ಕುಡಿ ಅರಳಿ ಬೆಳೆದದ್ದೆಲ್ಲಾ ರಾಜಧಾimg-20150918-wa0023ನಿಯ ಮಗ್ಗುಲಲ್ಲೇ ಇರುವ ಸಾರಕ್ಕಿ ಗ್ರಾಮ ಮತ್ತು ವಾಜರಹಳ್ಳಿಯಲ್ಲಿ. ಪ್ರಾಥಮಿಕ-ಫ್ರೌಡಶಿಕ್ಷಣ ಎಲ್ಲವೂ ಸಾರಕ್ಕಿ ಗ್ರಾಮದ ಸರ್ಕಾರಿ ಕನ್ನಡದ ಮಾಧ್ಯಮದ ಶಾಲೆಯಲ್ಲೇ. ಕನ್ನಡದ ಬಗೆಗಿನ ನಿರ್ವಾಜ್ಯ ಪ್ರೇಮ ಸ್ಪುರಿಸುವಿಕೆಗೆ ಅದುವೇ ಭದ್ರ ಭುನಾಧಿ. ಮನಸ್ಸು ದೇಹ ಮಾಗಿದಂಗೆಲ್ಲಾ ಕನ್ನಡ ಪೃಮವೂ ಹೆಮ್ಮೆರವಾಗಿ ಅರಳಿದ್ದು ಸಹಜ ಕ್ರಿಯೆ. ಪದವಿಯೊಂದಿಗೆ ಡಿಪ್ಲೋಮಾ ಶಿಕ್ಷಣ ಮುಗಿಸುತ್ತಿದ್ದಂತೆ ಬಹುಮುಖ ಆಸಕ್ತಿ ಆರಂಭವಾಗಿದ್ದು ವಿಶೇಷ. ಬೆಂಗಳೂರು ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಸಂಪಾದನೆಯೊಂದಿಗೆ ವ್ಯಾಸಂಗದಲ್ಲಿ ಗುರು ಮುಟ್ಟಿದ ಸಾರ್ಥಕತೆ. ಸಂಸ್ಕಾರ, ಸಾಮಾಜಿಕ ತಿಳುವಳಿಕೆ, ವಿನಯಶೀಲ ನಡವಳಿಕೆ, ಸುಶಿಕ್ಷಣ ತಂದ ಸೌಭಾಗ್ಯ, ವಿಧ್ಯಾವಂತಿಕೆಯ ಸನ್ನಡತೆ-ಉತ್ತಮ ನಾಗರೀಕತೆಯ ಕೋಡು.


  ಸ್ವವಿವರಗಳು:
  ಹೆಸರು: ಡಾ|| ಎಂ.ಆರ್ ವೆಂಕಟೇಶ್
  ತಂದೆ: ಲೇ|| ಶ್ರೀ ಎಂ. ರಾಮಯ್ಯ ನವರು
  ತಾಯಿ: ಶ್ರೀಮತಿ ನಂಜಮ್ಮನವರು
  ಮಡದಿ: ಶ್ರೀಮತಿ ಕೆ.ವಿ ಗಾಯತ್ರಿ ರವರು
  ಮಕ್ಕಳು: ಕು|| ವಿ.ಬಿಂದು, ಮಾ|| ವಿ. ಮನೀಶ್
  ವಿದ್ಯಾಭ್ಯಾಸ: ಎಂ.ಎ, ಡಿ.ಎಂ.ಎಂ
  ಗೌರವ ಪದವಿ: ಗೌರವ ಡಾಕ್ಟರೇಟ್
  ವೃತ್ತಿ: ವ್ಯಾಪಾರ
  ಧರ್ಮ: ಹಿಂದು, ಒಕ್ಕಲಿಗ


  ಸಮುದಾಯದ ಏಳ್ಗೆ:
  ಜನಸೇವೆ, ಕನ್ನಡ ಸೇವೆಯ ಹಾದಿಯಲ್ಲೇ ಸುಧೀರ್ಘ ಹೆಜ್ಜೆಗಳನ್ನಿಟ್ಟ ಎಂ.ಆರ್ ವೆಂಕಟೇಶ್ ಒಕ್ಕಲಿಗ ಜನಾಂಗದ ಏಳ್ಗೆಗೆ ಬೆವರರಿಸುತ್ತಲೇ ಬೆಳೆದದ್ದು ಗಮನಾರ್ಹ. ಒಗ್ಗಟ್ಟಿನಲ್ಲಿ ಬಲ, ಸಂಘಟನೆಯಲ್ಲಿ0003-001 ಶಕ್ತಿಯಿದೆ ಎಂಬ ನಾಣ್ಣುಡಿಯ ಮರ್ಮ ಬಲ್ಲ ಎಂ.ಆರ್ ವೆಂಕಟೇಶ್‌ರದ್ದು ಸದಾ ಜನಾಂಗದ ಹಿತರಕ್ಷಣೆಗೆ ಮಿಡಿಯುವ ಜೀವ. ಒಕ್ಕಲಿಗರು-ಒಕ್ಕಲುತನಕ್ಕೆ ಸಣ್ಣ ಅಪಮಾನವಾದರೂ ಸಿಡಿದೇಳುವ ಗುಣ ಅಂತರ್ಗತ. ಸಾರ್ವಜನಿಕ ಬದುಕು ದಯಪಾಲಿಸಿದ ಸಂಘಟನಾ ಚಾತುರ್ಯ, ಬುದ್ದಿವಂತಿಕೆ, ಕ್ರಿಯಾಶೀಲತರಯನ್ನು ಜನಾಂಗೀಯರ ಒಗ್ಗೂಡಿಸುವಿಕೆಗೆ ಧಾರೆಯೆರೆದದ್ದು ಮಾದರಿ ನಡೆ. ಸಮಷ್ಟಿ ಪ್ರಜ್ಞೆಯಲ್ಲೂ ಜನಾಂಗದ ಮೇಲ್ಮೆಗೆ ದುಡಿದ ಜಾಣ್ಮೆ. ಸಮುದಾಯದ ವಿಷಯದಲ್ಲಿ ಎಂ.ಆರ್ ವೆಂಕಟೇಶ್ ಅವರದ್ದು ಪಕ್ಷಾತೀತ ಹೋರಾಟ. ನಿಷ್ಠುರ ನಡೆ, ಕಟೋರ ಪ್ರತಿಭಟನೆ.

  ಇಡೀ ರಾಜ್ಯದಲ್ಲೇ ಅತ್ಯಧಿಕ ಬಲಾಡ್ಯ ರಾಜಕೀಯೇತರ ಜನಾಂಗೀಯ ಸಂಘಟನೆಯಾಗಿ “ರಾಜ್ಯ ಒಕ್ಕಲಿಗರ ಒಕ್ಕೂಟ” ರೂಪಿಸಿದ್ದು ಸಮುದಾಯಕ್ಕೆ ಎಂ.ಆರ್ ವೆಂಕಟೇಶ್ ರವರ ಅಪೂರ್ವ ಕೊಡುಗೆ. ಈ ಸಾಧನೆಗೆ ಜನಾಂಗದ ಪ್ರಜ್ಞಾವಂತರು, ಒಕ್ಕೂಟದ ರಾಜ್ಯ-ಜಿಲ್ಲಾ ಪದಾಧಿಕಾರಿಗಳು ಮತ್ತು ಗೆಳೆಯರು ಕೊಟ್ಟ ಸಾಥ್ ಬಹುಮುಖ್ಯವಾದದ್ದು. ಹಳೇ ಮೈಸೂರು ಭಾಗದಲ್ಲಿ ಸಾವಿರಾರು ಕಾರ್ಯಕರ್ತರ ಪಡೆ ನಿರ್ಮಾಣ, ಅಲ್ಪಾವಧಿಯಲ್ಲಿ ಸಾಕಾರಗೊಂಡ ಈ ಸಾಧನೆಗಾಗಿ ಎಂ.ಆರ್ ವೆಂಕಟೇಶ್ ರ ಬೆನ್ನು ತಟ್ಟಿದ ಜನಾಂಗದ ಗಣ್ಯರು ಅಪಾರ ಒಕ್ಕಲಿಗ ಸಂಘಟನೆಗೆ ದೈತ್ಯ ಶಕ್ತಿ ತುಂಬಿದ್ದಕ್ಕಾಗಿ ಮೆಚ್ಚುಗೆಯ ಜೊತೆಗೆ “ನಡೆಮುಂದೆ ನಡೆಮುಂದೆ ನುಗ್ಗಿ ನಡೆ ಮುಂದೆ” ಎಂದು ಹುರಿದುಂಬಿಸುವಿಕೆ.

  ಒಕ್ಕಲಿಗರ “ಹಿತರಕ್ಷಕ” ಎಂದೇ ಗುರುತಿಸಲ್ಪಡುವ ಎಂ.ಆರ್ ವೆಂಕಟೇಶ್‌ರ ವ್ಯಕ್ತಿತ್ವದ ಮತ್ತೊಂದು ಮುಖ ನಿಸ್ವಾರ್ಥ ಜನಸೇವೆ. ಬಡವರು-ಧೀನರ ಪಾಲಿಗೆ ಕಲ್ಪತರು. ನೊಂದವರ ಕಣ್ಣೀರು ಒರೆಸುವ ಆಪ್ತರಕ್ಷಕರೆಂದರೇ ಉತ್ಪ್ರೇಕ್ಷೆಯಾಗಲಾರದು. ಎಂ.ಆರ್.ವಿ ಫೌಂಡೇಷನ್ ಎಂಬ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸೇವಾ ಸಂಸ್ಥೆ ಮೂಲಕ ಕೈಗೊಂಡ ಸೇವಾ ಕಾರ್ಯಗಳು ನೂರಾರು. ಬಡ ಮಕ್ಕಳ ಶಿಕ್ಷಣಕ್ಕಾಗಿ ವ್ಯಯಿಸಿದ ಹಣ ಅಪಾರ. ಧಾರ್ಮಿಕ-ಸಾಂಸ್ಕೃತಿಕ ಕಾರ್ಯಗಳಿಗೆ ಯಥೇಚ್ಚ ನೆರವು. ಕೊಳಗೇರಿ ನಿವಾಸಿಗಳ ಜೀವನ ಸುಧಾರಣೆಗೆ ಹಮ್ಮಿಕೊಂಡ ಯೋಜನೆಗಳು ಹಲವು. ಸಾಕ್ಷರತಾ ಆಂದೋ017-001ಲನದಲ್ಲಿ ತೊಡಗಿಸಿಕೊಂಡು ಅಕ್ಷರದ ಹಣತೆ ಹಚ್ಚಿದ್ದು ಪ್ರಮುಖ. ಬೆಂಗಳೂರು ಜಿಲ್ಲಾ ಪಧವೀಧರರ ಒಕ್ಕೂಟದ ಅಧ್ಯಕ್ಷರಾಗಿ ಪದವೀಧರರ ಸಂಘಟನೆಗೂ ಮಹತ್ವದ ಕಾಣಿಕೆ ನೀಡಿದ ಎಂ.ಆರ್ ವೆಂಕಟೇಶ್ ಅವರ ಶುದ್ದತೆ, ಬದ್ದತೆ, ಪಾರದರ್ಶಕತೆ ಮತ್ತು ಸೇವಾನಿಷ್ಟೆ ಇಂದಿಗೂ ಕಿಂಚಿತ್ತೂ ಮಾಸಿಲ್ಲ. ಅದು ಎಂದಿಗೂ ಪುಟಕ್ಕಿಟ್ಟ ಚಿನ್ನವೇ!


  ಸಮುದಾಯ ಅಭಿವೃದ್ದಿ ಕಾರ್ಯಗಳ ಕಿರುನೋಟ:
  ರಾಜ್ಯ ಒಕ್ಕಲಿಗರ ಒಕ್ಕೂಟ:
  ೨೦೧೧-೧೨ ನೇ ಸಾಲಿನಿಂದ ಈವರೆವಿಗೂ ಸತತ ೪ ವರ್ಷಗಳಿಂದಲೂ ಒಕ್ಕಲಿಗ ಜನಾಂಗದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ.
  ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಗ್ರಾಮೀಣ ಭಾಗದ ಇಬ್ಬರು ವಿದ್ಯಾರ್ಥಿಗಳಿಗೆ ರೂ.೧,೦೦೦,೦೦/-(ಒಂದು ಲಕ್ಷ) ನಗದು ಹಾಗೂ ಬಹುಮಾನ ವಿತರಣೆ.
  ಸುಮಾರು ೬೦-೭೦ ವಿಧ್ಯಾರ್ಥಿಗಳಿಗೆ ರೂ.೨೫೦೦/-(ಎರಡು ಸಾವಿರದ ಐನೂರು) ಗಳ ಪ್ರೋತ್ಸಾಹ ಧನ ವಿತರಣೆ.
  ಸುಮಾರು ೭೦೦-೮೦೦ ವಿಧ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್, ನೋಟ್‌ಪುಸ್ತಕಗಳು, ಲೇಖನಿ ಸಾಮಾಗ್ರಿಗಳು ಮತ್ತು ಪ್ರಮಾಣ ಪತ್ರ ವಿತರಣೆ.
  ಕಾರ್ಯಕ್ರಮಕ್ಕೆ ಆಗಮಿಸುವ ಸಾವಿರಾರು ಮಕ್ಕಳು, ಪೋಷಕರು ಹಾಗೂ ಶಿಕ್ಷಕರಿಗೆ ಗೌರವಿಸಿ, ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ.
  ಒಟ್ಟು ಈವರೆಗೆ ರಾಜ್ಯ ಒಕ್ಕಲಿಗರ ಒಕ್ಕೂಟದಡಿಯಲ್ಲಿ ರಾಜ್ಯದ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಮತ್ತು ಸಹಾಯಧನವನ್ನು ನೀಡಿ ಪುರಸ್ಕರಿಸಲಾಗಿದೆ.
  ೨೦೧೩ ರಲ್ಲಿ ವಿಶಿಷ್ಟವಾದ ರೀತಿಯಲ್ಲಿ “ಒಕ್ಕಲಿಗರ ಸಂ019-001_2ಸ್ಕೃತಿ ಮಹಾ ಸಮ್ಮೇಳನ”ದ ಆಯೋಜನೆ.
  ರೈತರ ಜೀವನಕ್ಕೆ ಬೆಳಕು ಚೆಲ್ಲುವಂತಹ ಅನೇಕ ರಾಜ್ಯ ಮಟ್ಟದ ವಿಚಾರಗೋಷ್ಟಿಗಳು ಮತ್ತು ಸಂಕಿರಣಗಳ ಆಯೋಜನೆ.
  ರೈತರ ಹಿತ ಕಾಪಾಡುವ ದೃಷ್ಠಿಯಲ್ಲಿ “ಉಳುಮೆಯಿಂದ-ಉನ್ನತಿಯೆಡೆಗೆ” ರಾಜ್ಯಮಟ್ಟದ ಯಶಸ್ವಿ ವಿಚಾರ ಸಂಕಿರಣದ ಆಯೋಜನೆ.
  ಒಕ್ಕಲಿಗರ ಜಾಗೃತಿಯ ದೃಷ್ಠಿಯಲ್ಲಿ “ಒಕ್ಕಲಿಗರು-ಒಳ ಪಂಗಡಗಳು ಮತ್ತು ಒಕ್ಕಲಿಗರ ಮೂಲ” ರಾಜ್ಯ ಮಟ್ಟದ ಯಶಸ್ವಿ ವಿಚಾರ ಸಂಕಿರಣದ ಆಯೋಜನೆ.
  ಸಮುದಾಯದಲ್ಲೇ ಮೊದಲು ಎನ್ನಬಹುದಾದ “ಒಕ್ಕಲಿಗರ ಮಾಹಿತಿ ಕೋಶ-೨೦೧೨” ಮುದ್ರಣ ಮತ್ತು ವಿತರಣೆ.
  ಒಕ್ಕಲಿಗ ಪರಂಪರೆಯ ಧರ್ಮಗುರುಗಳಾದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿಗಳವರ ಕುರಿತ “ಬಿಜಿಎಸ್-ನೆನಪು” ಎಂಬ ಯಶಸ್ವಿ ಕಾರ್ಯಕ್ರಮದ ಆಯೋಜನೆ ಮತ್ತು ಶ್ರೀಗಳವರ ಕುರಿತ ಪುಸ್ತಕ ಬಿಡುಗಡೆ.
  ರಾಜ್ಯದ ಬಜೆಟ್ ಕುರಿತಾದ ಚಿಂತನ-ಮಂಥನ ಎಂಬ ಯಶಸ್ವಿ ಕಾರ್ಯಕ್ರಮದ ಆಯೋಜನೆ.
  ಹಸಿರು ಪ್ರತಿಷ್ಠಾನದ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಕಗಳನ್ನೂ ಸೇರಿ ಹತ್ತು ಹಲವು ಬಗೆಯ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
  ಪ್ರತಿ ವರ್ಷ ವಿಜೃಂಭಣೆಯಿಂದ “ಶಿಕ್ಷಕರ ದಿನಾಚರಣೆ”ಯ ಆಯೋಜನೆ ಮತ್ತು ಉತ್ತಮ ಶಿಕ್ಷರನ್ನು ಗುರುತಿಸಿ ಗೌರವಿಸುವ ಯಶಸ್ವಿ ಕಾರ್ಯಕ್ರಮಗಳು.
  ಜಾನಪದ ಕಲೆಯನ್ನು ಪ್ರೋತ್ಸಾಹಿಸು ದೃಷ್ಠಿಯಲ್ಲಿ “ಭಾವ ಚೈತ್ರೋತ್ಸವ” ಎಂಬ ವಿನೂತನ ಕಾರ್ಯಕ್ರದ ಯಶಸ್ವಿ ಆಯೋಜನೆ ಮತ್ತು ಜಾನಪದ ಕಲಾವಿದರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ.
  ಸತತ ಮೂರು ವರ್ಷಗಳಿಂದ “ಯುಗಾದಿ ಸಂಭ್ರಮ” ಎಂಬ ಹೊಸ ವರುಷರ ಸ್ವಾಗತವನ್ನು ನಾಡಿಗೆ ಸಾರುವ ವಿಶಿಷ್ಟತೆಯಿಂದ ಕೂಡಿದ ಯಶಸ್ವಿ ಕಾರ್ಯಕ್ರಮಗಳ ಆಯೋಜನೆ.
  ದೂರದರ್ಶನದ ನಿರ್ದೇಶಕರಾದ ನಾಡೋಜ ಡಾ|| ಮಹೇಶ ಜೋಷಿ, ರಾಜ್ಯ ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ ಆರ್. ಅಶೋಕ್ ಮತ್ತು ಖ್ಯಾತ ಗಾಯಕರಾದ ಶ್ರೀ ಶಶಿಧರ ಕೋಟೆ ರವರನ್ನು ಒಳಗೊಂಡಂತೆ ನೂರಾರು ಶಾಲಾ ಮಕ್ಕಳ ಜೊತೆಗೂಡಿ “ಬೃಹತ್ ಪರಿಸರ ಜಾಥ” ಕಾರ್ಯಕ್ರಮದ ಯಶಸ್ವಿ ಆಯೋಜನೆ.
  ಜಾತಿಗಣತಿ ಪ್ರಕ್ರಿಯೆಯಲ್ಲಿ ಸಮುದಾಯದ ಪರವಾಗಿ ಕಾರ್ಯ ನಿರ್ವಹಣೆ.
  ಇಡೀ ಹಳೇ ಮೈಸೂರು ಭಾಗದು004-001ದ್ದಕ್ಕೂ “ಒಕ್ಕಲಿಗ ಸಮುದಾಯದ ಸಂಘಟನೆಗೆ” ಯಶಸ್ವಿ ಪ್ರವಾಸವನ್ನು ಮಾಡಿರುವುದು.
  ಹೀಗೆ ಇನ್ನೂ ಅನೇಕ ಬಗೆ-ಬಗೆಯ ಸಮುದಾಯ ಸಂಭಂಧಿತ ಅಭಿವೃಧ್ದಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.


  ಸಾಮಾಜಿಕ ಚಟುವಟಿಕೆಗಳು:
  ೧. ಗೌರವ ಅಧ್ಯಕ್ಷರು
  ಹಸಿರು ಪ್ರತಿಷ್ಠಾನ(ರಿ)
  ಬೆಂಗಳೂರು
  ೨. ರಾಜ್ಯ ಅಧ್ಯಕ್ಷರು
  ಬೆಂಗಳೂರು ಜಿಲ್ಲಾ ಪಧವೀಧರರ ಒಕ್ಕೂಟ(ರಿ)
  ಬೆಂಗಳೂರು
  ೩. ರಾಜ್ಯ ಅಧ್ಯಕ್ಷರು
  ರಾಜ್ಯ ಒಕ್ಕಲಿಗರ ಒಕ್ಕೂಟ(ರಿ)
  ಬೆಂಗಳೂರು


  ಸಾಮಾಜಿಕ ಗೌರವಗಳು:
  1 ಸ್ವಾಗತ ಸಮಿತಿ ಸದಸ್ಯರು
  ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
  2 ಕಾರ್ಯಾಧ್ಯಕ್ಷರು
  ೫ನೇ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ
  3 ಗೌರವ ಸ್ವೀಕಾರ
  ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ
  4 ಅಧ್ಯಕ್ಷರು (೨೦೦೯ ರಿಂದ ೨೦೧೫ರ ವರೆಗೂ ಸತತ ಎರಡು ಬಾರಿ)
  ಪದ್ಮನಾಭನಗರ ವಿಧಾನಸಭಾ ಕ್ಷೇತ್ರ
  ಕನ್ನಡ ಸಾಹಿತ್ಯ ಪರಿಷತ್ತು


  ಪ್ರಶಸ್ತಿ ಸ್ವೀಕಾರ:
  ಈ ಅಗಣಿತ ಸೇವೆಗೆ ಸಂದ ಪ್ರಶಸ್ತಿಗಳು ಹಲವಾರು. “ಬೆಂಗಳೂರುಶ್ರೀ”, ಒಕ್ಕಲಿಗ ಕೇಂದ್ರ ಕ್ರಿಯಾ ಸಮಿತಿ ಕೊಡುವ “ಕೆಂಪೇಗೌಡ ಶ್ರೀ”, ಒಕ್ಕಲಿಗ ಮಿತ್ರಕೂಟದ “ಒಕ್ಕಲಿಗ ರತ್ನ”, ಮತ್ತು ಅಂಕ ಸೇವಾ ಸಂಸ್ಥೆಯ “ಅಂಕ” ಪ್ರಶಸ್ತಿ ಇತ್ಯಾದಿ. ಸಾಮಾಜಿಕ ಮನ್ನಣೆಯ ಪ್ರತಿರೂಪವಾಗಿರುವ ಈ img-20150522-wa0017ಪ್ರಶಸ್ತಿಗಿಂತಲೂ, ಧೀನ-ದಲಿತರು, ಬಡವರು ಮತ್ತು ಜನಾಂಗೀಯರ ಮನದಲ್ಲಿ ಎಂ.ಆರ್ ವೆಂಕಟೇಶ್‌ರ ಸೇವೆ ವ್ಯಕ್ತಿತ್ವ ಎಂದಿಗೂ ಜೀವಂತ. ಜನಪ್ರತಿನಿಧಿಗಳ ಬಗೆಗೆ ಅಪನಂಬಿಕೆ ಮತ್ತು ಅಸಹ್ಯಕರ ಭಾವಗಳು ಬಲಿಯುತ್ತಿರುವ ಈ ದಿನಗಳಲ್ಲಿ ಜನಸೇವೆ ಕತೃ ಬಗೆಗಿನ ಈ ಜನಪ್ರೇಮ ನಿಜಕ್ಕೂ ದೊಡ್ಡದು. ಹಾಗಾಗಿ, “ಇವನ್ಯಾರವ, ಇವನ್ಯಾರವ ಎನ್ನದೆ ಎಲ್ಲರೂ ಇವ ನಮ್ಮವ ಇವ ನಮ್ಮವ ಎನ್ನುವುದು ವಾಡಿಕೆ. ಸಾರ್ವಜನಿಕ ಬಧುಕಿನಲ್ಲಿ ಇದಕ್ಕಿಂತ ಅನ್ಯ ಸಾರ್ಥಕತೆ ನಿಜಕ್ಕೂ ಅನಾವಶ್ಯಕ.
  ಬೆಂಗಳೂರುಶ್ರೀ-೨೦೦೭
  ಕರ್ನಾಟಕ ಸಮಾಜಸೇವಾ ರತ್ನ-೨೦೦೮
  ಅಂಕ ಪ್ರಶಸಿ-೨೦೦೯
  ಬೆಂಗಳೂರು ರತ್ನ-೨೦೧೧
  ಕರುನಾಡ ರತ್ನ-೨೦೧೧
  ಒಕ್ಕಲಿಗ ರತ್ನ-೨೦೧೨
  ಇನ್ನೂ ಅನೇಕ ಸಂಘ-ಸಂಸ್ಥೆಗಳ ಗೌರವಗಳು ಸಂದಿವೆ.


  ಸಮಾಜದ ಹಿರಿಯರು ಮತ್ತು ಸಾಧಕರುಗಳಿಗೆ ಪುರಸ್ಕಾರಗಳು:
  ೨೦೧೫-೧೬ ನೇ ಸಾಲಿನ ನಾಡೋಜ ಡಾ|| ನಾರಾಯಣ ಪ್ರಶಸ್ತಿ ಪ್ರಧಾನ
  ಶ್ರೀ ವಿಶ್ವೇಶ್ವರ ಭಟ್ ರವರಿಗೆ, ನಾಡಿನ ಹಿರಿಯ ಪತ್ರಕರ್ತರು
  ೨೦೧೬-೧೭ ನೇ ಸಾಲಿನ ಶ್ರೀ ವೈ.ಕೆ ರಾಮಯ್ಯ ಪ್ರಶಸ್ತಿ ಪ್ರಧಾನ
  ಶ್ರೀ ಕೆ.ಬಿ ಸಿದ್ದಯ್ಯ ರವರಿಗೆ, ನಾಡಿನ ಶ್ರೇಷ್ಠ ಸಾಹಿತಿಗಳು ಮತ್ತು ಕವಿಗಳು
  11018650_426065187579934_7066878828965972086_oವರ್ಷದ ವ್ಯಕ್ತಿ ಪ್ರಶಸ್ತಿ ಪ್ರಧಾನ
  ಖ್ಯಾತ ಸಮಾಜ ಸೇವಕರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ ರವರು
  ಖ್ಯಾತ ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣ್ಣಯ್ಯ ನವರು
  ರಾಜ್ಯದ ಹಲವು ಉತ್ತಮ ಶಿಕ್ಷಕರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿದೆ.
  ಪದ್ಮನಾಭ ನಗರ ವಿಧಾನ ಸಭಾ ಕ್ಷೇತ್ರದ ಹಲವಾರು ಹಿರಿಯ ನಾಗರೀಕರನ್ನು ಗೌರವಿಸಿ ಸನ್ಮಾನಿಸಲಾಗಿದೆ.


  ರಾಜಕೀಯ ಪ್ರವೇಶ
  ಓದಿನ ದಿನಗಳಲ್ಲಿ ಎಂ.ಆರ್ ವೆಂಕಟೇಶರದ್ದು ಏಕಧ್ಯಾನದ ಕುದುರೆ ನಡಿಗೆಯಲ್ಲ. ವಿಧ್ಯಾರ್ಥಿ ದೆಸೆಯಲ್ಲಿ ಮನಸ್ಸು-ಕಣ್ಣು ಸದಾ ಮುಕ್ತ-ಮುಕ್ತ. ಪರಿಣಾಮ ಬಹುರೂಪಿ ಚಡುವಟಿಕೆಗಳಲ್ಲಿ ಸಕ್ರಿಯ. ಸಾಮಾಜಿಕ ವಿಧ್ಯಾಮಾನಗಳmrv1 ಪೂರ್ಣ ಜ್ಞಾನ, ನ್ಯಾಯ-ಅನ್ಯಾಯಗಳ ಸ್ಪಷ್ಟ ತಿಳಿವು. ಹಾಗಾಗಿ ಸುತ್ತಲ ಜಗದ ಬೆಳವಣಿಗೆಗೆಲ್ಲಾ ಸ್ಪಂದನಶೀಲ. ಮನದಾಳದ ಸಂವೇದನೆ ಮೀಟಿದ ನಾದ ತರಂಗಗಳಿಗೆ ಲೆಕ್ಕವಿಲ್ಲ.

 2. “ಎಲ್ಲರೊಳಗೊಂದಾದ” ಗುಣದಿಂದ ಕಲಿತ ಪಾಠ ಸಗಬಾಳ್ವೆ. ಅರಿತದ್ದು ಕೂಡಿ ಬಾಳಿದರೆ ಸ್ವರ್ಗ ಸುಖವೆಂಬ ಲೋಕಸತ್ಯ. ವಿಧ್ಯಾರ್ಥಿ ಮಿತ್ರ ಸ್ನೇಹದ ಸವಿಯೊಂದಿಗೆ ಸಮಸ್ಯೆಗಳೂ ತಿಳಿದಾಗ “ಕಣ್ತೆರೆದು” ನೋಡಲದು ಸಕಾಲ, ಹದಿ-ಹರೆಯದ ಕುದಿರಕ್ತ “ಅನ್ಯಾಯ”ದ ವಿರುದ್ದ ಸೆಟೆದು ನಿಂತಾಗ ತೆರೆದುಕೊಂಡದ್ದು ಹೋರಾಟದ ಹಾದಿ. ವಿಧ್ಯಾರ್ಥಿ ಮುಖಂಡನೆಂಬ ಪಟ್ಟ. ಸಾರ್ವಜನಿಕ ಬದುಕಿಗೆ ಮುಂದಡಿಯಿಟ್ಟ ಮೇಲೆ ಬದುಕಿಗೆ ಹೊಸ ಹುರುಪು-ಹೊಳಪು. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳೆಂಬ ಕವಿವಾಣಿಯಂತೆ ದಿನಕ್ಕೊಂದು ರೂಪ-ಸ್ವರೂಪ, ವಸ್ತು-ವಿಷಯಾಧಾರಿತ ಪ್ರತಿಭಟನೆ. ಆ ಹಂತದಲ್ಲಿ “ಕನ್ನಡವೆಂದರೆ ಕುಣಿದಾಡುವುದೆನ್ನೆದೆ” ಎಂಬಂತೆ ಕನ್ನಡಕ್ಕಾಗುವ ಅನ್ಯಾಯದ ವಿರುದ್ದ ಸೊಲ್ಲೆತ್ತಿದ ಮೇಲೆ ಹೋರಾಟವೇ ಕರ್ಮಭೂಮಿ. ಕನ್ನಡಪರ ಹೋರಾಟಗಳಲ್ಲಿ ಕಾಯಾವಾಚಾ ಮನಸಾ ಅರ್ಪಣೆ. ಹೋರಾಟದ ಬಿಸಿ ಅಬ್ಬರದ ಹುಡುಗನ ಕಂಡು ಡಾ.ಎಂ ಚಿದಾನಂದ ಮೂರ್ತಿಗಳು ಬೆರಗಾಗಿದ್ದು ಸುಳ್ಳಲ್ಲ. ಪರಭಾಷಾ ವ್ಯಾಮೋಹಗಳಿಗೆ “ಈ ಹುಡುಗ ಸಿಡಿಗುಂಡಾಗಬಲ್ಲನೆಂಬ ಉದ್ಗಾರ! ಮೆಚ್ಚುಗೆ ಬರೀ ಬಾಯಿಮಾತಿಗೆ ಮಾತ್ರ ಸೀಮಿತವಾಗದೆ ಕನ್ನಡ ಶಕ್ತಿ ಕೇಂದ್ರದ ಉತ್ತರಹಳ್ಳಿ ಹೋಬಳಿಯ ಸಂಚಾಲಕನಾಗಿ ನೇಮಕ. ಕನ್ನಡ mrv3ಪ್ರೇಮಕ್ಕೆ “ಕಲಿತ್ವ” ಪ್ರಾಪ್ತವಾದದ್ದು ಆವಾಗಲೇ. ಕನ್ನಡ ಭಾಷೆ-ಸಂಸ್ಕೃತಿಯ ಮೇಲೆ ನಡೆದ ಹಲವು ದೌಜನ್ಯಗಳ ವಿರುದ್ದ ರಣಕಹಳೆ ಊದಿದ ಖುಷಿ. ಬೆಂಗಳೂರು ಜಿಲ್ಲಾ ಕನ್ನಡ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಹೋರಾಟದ ಸಾಂಗತ್ಯದಿಂದ ಹುರಿಗಟ್ಟಿದ ಸಂಘಟನಾ ಚಾತುರ‍್ಯ. ಕನ್ನಡ ಸೇವೆಗೆ ಹತ್ತಾರು ದಿಕ್ಕು ದೆಸೆ. ಜನಪ್ರೀತಿ ಗಳಿಸಲು ಕೂಡಿ ಬಂದ ಶುಕ್ರದೆಸೆ, ಜನಸೇವೆಗೆ ಮುನ್ನುಡಿ….

  ಕನ್ನಡಕ್ಕಾಗಿ ಕೈಯೆತ್ತಿದರೆ ಕಲ್ಪವೃಕ್ಷವಾಗುತ್ತದೆಯೆಂಬ ಕುವೆಂಪುರವರ ಮಾತು ಎಂ.ಆರ್ ವೆಂಕಟೇಶ್ ಬದುಕಿನಲ್ಲಿ ಅಕ್ಷರಸಹ ನಿಜವಾಗಿದ್ದು ವಿಶೇಷ. ಕನ್ನಡ ಸೇವಾ ನಿಷ್ಠೆಯಿಂದ ವ್ಯಕ್ತಿತ್ವದ ಮೆರಗು, ಕ್ರಿಯಾಶೀಲತೆಯ ಸೊಬಗು. ಸಾರ್ವಜನಿಕ ಬದುಕು ಆಪ್ಯಾಯಮಾನವೆನೆಸಿದಾಗ ಕವಲೊಡೆದ ಆಸಕ್ತಿ. ಯುವಶಕ್ತಿ-ಯುಕ್ತಿಗೆ ಬಾಯ್ತೆರೆದಿಕೊಂಡ ಅವಕಾಶಗಳು. ಆಪೈಕಿ ರಾಜಕಾರಣವೂ ಒಂದು. ಎಂ.ಆರ್ ವೆಂಕಟೇಶ್ ಅವರ ಸಂಘಟನಾ ಶಕ್ತಿ ಗ್ರಹಿಸಿದ್ದು ಅಂತಿಥವರಲ್ಲ ಭಾರತ ದೇಶದ ಮಾಜಿ ಪ್ರಧಾನಿ, ರಾಜಕೀಯದ ಹಿರಿಯ ಮುತ್ಸದ್ದಿ, ಶ್ರೀ ಹೆಚ್.ಡಿ ದೇವೇಗೌಡರು. ಸಕ್ರೀಯ ರಾಜಕಾರಣಕ್ಕೆ ಧುಮುಕಲು ಆಹ್ವಾನ ನೀಡಿದವರೂ ಅವರೇ. ಮಾರ್ಗ ಯಾವುದೇ ಇರಲಿ ಜನಸೇವೆಯ ಗುರಿಮುಟ್ಟುವುದೇ ಮುಖ್ಯವೆಂಬ ಮನವರಿಕೆ.

  ಏಷ್ಯಾದಲ್ಲೆ ಅತಿದೊಡ್ಡ ವಿಧಾನಸಭಾ ಕ್ಷೇತ್ರವೆನಿಸಿದ್ದ ಉತ್ತರಹಳ್ಳಿಯ ನಾಗರೀಕ ಹಿರರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಜನಮುಖಿ ಕಾರ್ಯಗಳಲ್ಲಿ ತೊಡಗಿದ್ದವರು ಸೀದಾ ರಾಜಕೀಯಕ್ಕೆ. ಸmrv2ಮಾಜವಾದಿ ಜನತಾ ಪಕ್ಷದ ಕಾರ್ಯಕರ್ತನಾಗಿ ಕಾರ್ಯಾರಂಭ. ಕೆಲ ತಿಂಗಳುಗಳಲ್ಲೇ ರಾಜಕಾರಣದ ಆಯಾಮಗಳು ಅಂತರಂಗಕ್ಕೆ. ಆನಂತರದ್ದು ಪ್ರತಿಯೊಂದು ಹೆಜ್ಜೆ ಗುರುತುಗಳೇ. ಗೆಳೆಯರ ಬಳಗ, ರಾಜಕಾರಣಿಗಳ ಸಂಪರ್ಕ ಎಲ್ಲವೂ ಏರು ಮುಖವೇ., ಸಂಘಟನೆಗಳಿಗೆ ಕಾವು, ಮಾತಿನ ಮೊನುಚು, ಆಂತರ್ಯದ ಶಕ್ತಿ ಅನಾವರಣ. ಕ್ರಿಯಾತ್ಮಕ-ಯೋಗ್ಯತೆ ತಕ್ಕಂತೆ ಬಡ್ತಿ. ರಾಜ್ಯ ಯುವ ಜನತಾದಳದ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಜನತಾದಳದ ಉತ್ತರಹಳ್ಳಿ ಹೋಬಳಿ ಅಧ್ಯಕ್ಷ, ಬೆಂಗಳೂರು ನಗರ ಜಿಲ್ಲಾ ಜಾತ್ಯಾತೀತ ಜನತಾದಳದ ಮಹಾಪ್ರಧಾನ ಕಾರ್ಯದರ್ಶಿ……. ಹೀಗೆ ಹತ್ತಾರು ಸ್ಥಾನಗಳಲ್ಲಿ ಹುದ್ದೇ ಮೀರಿ ಕಾರ್ಯ ನಿರ್ವಹಣೆ. ೧೯೯೬ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಚುನಾವಣಾ ಸಂಧರ್ಭದಲ್ಲಿ ಆಗಷ್ಟೆ ರಾಜಕೀಯಕ್ಕೆ ಪ್ರವೇಶಿಸಿದ್ದ ಹೆಚ್.ಡಿ ಕುಮಾರಸ್ವಾಮಿ ಅವರೊಡನೆ ಬೆಳೆದ ಆತ್ಮೀಯತೆ, ಬೆಸೆದುಕೊಂಡ ಬಂಧನ. ಹೆಚ್,ಡಿ,ಕೆ ಯ ಪ್ರಥಮ ಗೆಲುವಿಗೆ ಕೊಟ್ಟು ಶ್ರಮಿಸುವಿಕೆ. ಅದೇ ವರ್ಷ ಬೆಂಗಳೂರು ಮಹಾನಗರ ಪಾಲಿಕೆಯ ಸಮುದಾಯದ ಒಕ್ಕೊರಲ ಆಗ್ರಹಕ್ಕೆ ಮಣಿದು ಸ್ಫರ್ಧೆ. ಅತ್ಯಲ್ಪ ಮತಗಳಿಂದ ಪರಾಭವ. ಸೋಲು ಚುನಾವಣೆಗೆ ಹೊರತು ಸಂಘಟನೆಗಲ್ಲ. ಜನಸೇವಾ ಕಾರ್ಯದ ಮುಂದುವರಿಕೆಗೆ ಉತ್ತರಹಳ್ಳಿಯಿಂದ ಆಚೆಗೆ ವಿಸ್ತಾರಗೊಂಡು ರಾಜ್ಯಾಧ್ಯಂತ “ಗುರುತು” ದಕ್ಕಿಸಿಕೊಳ್ಳುವಿಕೆ. ರಾಜಕಾರಣದಲ್ಲಿದ್ದರೂ ಮಾಮೂಲಿ ರಾಜಕಾರಣಿಯ ಜಾಡು ಹಿಡಿಯದಿ002-001ದ್ದದು ಬಹುಮುಖ್ಯ ಸಂಗತಿ. ತಾನು “ಜನಸೇವಾಕರ್ತ”ನೇ ಹೊರತು “ರಾಜಕಾರಣಿ” ಅಲ್ಲವೆಂಬ ಖಚಿತ ನಿಲುವು. ಕಾಲ ನಿರ್ಣಯ ೨೦೦೪ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ, ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾಗಿ ಎರಡು ಅವಧಿಯಲ್ಲಿ ಪಕ್ಷ ಸಂಘಟನೆಗೆ ಶ್ರಮದಾನ. ೨೦೦೮ರಲ್ಲಿ ಪಾಲಿಕೆ ಚುನಾವಣೆಗೆ ಪತ್ನಿ ಸ್ಪರ್ಧೆ. ಕೇವಲ ೯ ಮತಗಳಿಂದ ಸೋಲಿನ ಕಹಿ ಅನುಭವ. ಆದರೂ ಬತ್ತದ ಉತ್ಸಾಹ. ನಿಲ್ಲದ ಜನಸೇವೆ ಕನ್ನಡ ಪರಿಚಾರಿಕೆ…..

  ರಾಜಕಾರಣ ಎಂ.ಆರ್ ವೆಂಕಟೇಶ್ ಅವರ ವ್ಯಕ್ತಿತ್ವದ ಒಂದು ಮಗ್ಗುಲಷ್ಟೆ. ಕನ್ನಡ ಪರಿಚಾರಿಕೆ, ಸಂಸ್ಕೃತಿ ಸಂವರ್ಧನೆ, ಭಾಷಾ ಸೌಹಾರ್ಧತೆಯ ರಕ್ಷಣೆಗೆ ಸದಾ ಕಟೀಬದ್ದ, ಸಾರ್ವಜನಿಕ ಜೀವನಕ್ಕೆ ಬಂದ ಸಂಪರ್ಕಗಳೆಲ್ಲವನ್ನೂ ಒಪ್ಪಕೊಳ್ಳುವ ಜಾಯಮಾನ ಎಂ.ಆರ್ ವೆಂಕಟೇಶರದ್ದಲ್ಲ.

  ಹೀಗಾಗಿ, ಇವರ ನಿರಂತರ ಸಂಘಟನಾ ಚಾತುರ‍್ಯತೆ ಮತ್ತು ಸೇವಾ ಮನೋಭಾವವನ್ನು ಗುರುತಿಸಿ, ಸಮುದಾಯ ಸಂಭಂಧಿತ ಯಶಸ್ವಿ ಚಟುವಟಿಕೆಗಳನ್ನು ಗಮನದಲ್ಲಿಸಿಕೊಂಡು, ಕರ್ನಾಟಕ ರಾಜ್ಯ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಂಡ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪನವರು, ಶ್ರೀ ಎಂ.ಆimg-20160809-wa0123ರ್ ವೆಂಕಟೇಶ ರವರಿಗೆ, ಪಕ್ಷದ ಅತಿ ಮುಖ್ಯವಾದ “ಹಾಲು ಉತ್ಪಾದಕರ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ” ಆಯ್ಕೆ ಮಾಡುವುದರ ಜೊತೆಗೆ ರಾಜ್ಯದ ಹೈನುಗಾರಿಕೆಯಲ್ಲಿ ತೊಡಗಿರುವ ಸುಮಾರು ೨೮ ಲಕ್ಷ ಕುಟುಂಬಗಳನ್ನು ಮತ್ತು ಅಂದಾಜು ಸುಮಾರು ೧ ಕೋಟಿ ಮತದಾರರನ್ನು ಬಿಜೆಪಿಯ ಸಂಪರ್ಕಕ್ಕೆ ತರುವ ಅಥವಾ ಅವರನ್ನು ಬಿಜೆಪಿಯತ್ತ ಸೆಳೆಯುವ ಮಹತ್ಕಾರ್ಯದ ಜವಾಬ್ದಾರಿಯನ್ನು ನೀಡಿದ್ದಾರೆ.


  ಕಾಲನಿರ್ಣಯ:
  ಜನಸೇವೆಗೆ ಬದುಕಿನ ಬಹುಪಾಲು ಕ್ಷಣಗಳಳನ್ನು ಮೀಸಲಿಟ್ಟಿರುವ ಶ್ರೀ ಎಂ.ಆರ್ ವೆಂಕಟೇಶ ರವರು, ಆರ್ಥಿಕವಾಗಿ ಸಂಪನ್ನರು, ಜೀವನ ನಿರ್ವಹಣೆಗೆ ಹಣಬಲವುಂಟು. ಜನಬಲವೂ ಎಂಆರ್‌ವಿ ಅವರದ್ದು. ಶುದ್ದ ನಡೆ, ಪಾರದರ್ಶಕ ಚಟುವಟಿಕೆ, ಕ್ರಿಯಾಶೀಲ ವ್ಯಕ್ತಿತ್ವಕ್ಕೆ “ಏನಾimg-20160816-wa0018ದರೂ ಮಾಡುತಿರು ತಮ್ಮ” ಎಂಬ ಉಮೇದು. ಪರಿಣಾಮ ಜನಸೇವೆಗೆ ಅವಕಾಶವಿರುವ ಯಾವುದೇ ಕ್ಷೇತ್ರವಿರಲಿ ಅಲ್ಲೆಲ್ಲಾ ಹೆಜ್ಜೆಗುರುತು ಮೂಡಿಸುವ ಹಂಬಲ. ಪಕ್ಷದ ಹಿರಿಯರ ಒತ್ತಾಸೆ ಮತ್ತು ಅಭಿಮಾನಿಗಳ ಒತ್ತಡದಿಂದ ಶ್ರೀ ಎಂ.ಆರ್ ವೆಂಕಟೇಶ್‌ರವರ ಹೆಜ್ಜೆ ಈಗ ಕರ್ನಾಟಕ ರಾಜ್ಯ “ಹಾಲು ಉತ್ಪಾದಕರ ಪ್ರಕೋಷ್ಠ” ಭಾರತೀಯ ಜನತಾ ಪಕ್ಷದ ಸಂಘಟನೆಗೆ. ರಾಜ್ಯದ ಹೈನುಗಾರಿಕೆಯಲ್ಲಿ ತೊಡಗಿರುವ ಸುಮಾರು ೨೮ ಲಕ್ಷ ರೈತ ಕುಟುಂಬಗಳ ಸುಮಾರು ೧ ಕೋಟಿಗೂ ಮೀರಿದ ಜನತೆಯನ್ನು ಭಾರತೀಯ ಜನತಾ ಪಕ್ಷದತ್ತ ಸೆಳೆದು, ಮುಂದಿನ ದಿನಗಳಲ್ಲಿ ಎದುರಾಗಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಭಾರತೀಯ ಜನತಾ ಪಕ್ಷವನ್ನು ಬಹುಮತಗಳಿಂದ ಗೆಲ್ಲಿಸಿ ರಾಜ್ಯದಲ್ಲಿ ಮತ್ತೊಮ್ಮೆ ಸುವರ್ಣಯುಗವನ್ನು ನಿರ್ಮಿಸ ಹೊರಟಿದ್ದಾರೆ. ರಾಜ್ಯದ ಪ್ರತಿಯೊಬ್ಬ ಶ್ರೀಸಾಮಾನ್ಯರೂ ಸಹ ನಮ್ಮೊಟ್ಟಿಗೆ ಕೈಜೋಡಿಸಿ ನಡೆಯಬೇಕೆನ್ನುವುದೇ ಶ್ರೀ ಎಂ.ಆರ್ ವೆಂಕಟೇಶ್‌ರವರ ವಿನಂತಿ. ಮತ್ತು ಇದುವೇ ಕಾಲನಿರ್ಣಯ!


  b4321-2ಡಾ|| ಶ್ರೀ ಎಂ.ಆರ್ ವೆಂಕಟೇಶ್
  +91 96 20 23 39 30

 3. Dr.M.R VENKATESH

 4. www.mrvenkatesh.com

1 COMMENT

Comments are closed.