“ಶರಣ ಸಂಗಮ” ೧೨...

“ಶರಣ ಸಂಗಮ” ೧೨ನೆ ಶತಮಾನದ ಶರಣರ ಜೀವನ-ಸಾಧನೆ ಕುರಿತಾದ ಸಮಗ್ರ ಸಾಕ್ಷ್ಯಚಿತ್ರಗಳ ಸರಣಿ ಯೋಜನೆ

472
0
SHARE

ಯೋಜನೆಯ ಆಶಯ:
೧೨ನೇ ಶತಮಾನ ಕರ್ನಾಟಕದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚರಿತ್ರೆಯಲ್ಲಿಯೇ ಅತ್ಯಂತ ಮುಖ್ಯವಾದ ಘಟ್ಟ. ಆ ಶತಮಾನದಲ್ಲಿ ಕನ್ನಡಿಗರೇ ಕಟ್ಟಿದಂತಹ ಕನ್ನಡದ ಮೊಟ್ಟಮೊದಲ ಧರ್ಮ ಕರ್ನಾಟಕದಲ್ಲಿ ಉದಯಿಸಿತು. ಹೀಗೆ ಕನ್ನಡಿಗರೇ ಕಟ್ಟಿದಂತಹ ಕನ್ನಡದ ಮೊಟ್ಟಮೊದಲ ಆ ಧರ್ಮವೇ ವಿಶ್ವಗುರು ಬಸವೇಶ್ವರರ ನೇತೃತ್ವದ “ಶರಣ ಧರ್ಮ”. ಶರಣ ಧರ್ಮ ಉದಯಿಸುವ ಪೂರ್ವದಲ್ಲಿ ಕನ್ನಡ ನಾಡು ರಾಜ್ಯಕ್ರಾಂತಿ, ರಾಜಕೀಯ ಕ್ಷೋಭೆ, ಅಶಾಂತಿ, ಅನಿಶ್ಚಿತತೆ, ಜಾತಿಮತ ಮೊದಲಾದ ತುಮುಲಗಳ ವಿತಂಡ ತಾಂಡವಕ್ಕೆ ರಂಗವಾಗಿದ್ದಿತು. ಹೀಗೆ ದುರ್ಗತಿಗೀಡಾಗಿದ್ದ ಜನತೆಯ ಶೋಕವು ನಿಟ್ಟುಸಿರಾಗಿ ದೇವಮಾನವರ ಬರುವಿಕೆಗಾಗಿ ಕಗ್ಗತಲೆಯಲ್ಲಿ ದಾರಿ ಕಾಯುತ್ತಾ ಕುಳಿತಿದ್ದಿತು.

ಆ ಕಗ್ಗತ್ತಲನ್ನು ಸೀಳಿ ಬೆಳಕ ಹರಿಸ ಬಂದರು ಶಿವಶರಣರು, ಬಸವನ ನೇತೃತ್ವದಲ್ಲಿ. “ಕತ್ತಲೆಸತ್ತು ಬೆಳಕು ಬೀದಿವರೆಯಿತ್ತು; ಈ ಬೆಳಗಿನ ಬಳಗದ ಬರುವಿಕೆಯಿಂದ. ಈ ಜನ್ಮದ ದುಃಖವೆಲ್ಲಾ ಪೂರ್ವಜನ್ಮದ ಪಾಪದ ಫಲವೆಂದು ನಂಬಿ ನಿಷ್ಕ್ರಿಯರಾಗಿ ಹೋಗಿದ್ದ ಜನತೆಗೆ ಶರಣ ಧರ್ಮದ ಉದಯ ಅಪೂರ್ವ ಚೈತನ್ಯದಾಯಿನಿಯಾಗಿ ಕೇಳಿಸಿತು. ಜಾತಿ, ಮತ, ಮೇಲುಕೀಳು, ಗಂಡು ಹೆಣ್ಣು, ಬಡವ ಬಲ್ಲಿದ ಎಂಬ ಎಲ್ಲಾ ಭೇಧಗಳನ್ನೂ ಒಂದೇ ಏಟಿಗೆ ತೊಡೆದು ಹಾಕಿ ಸಮಾನತೆ, ಸಮದೃಷ್ಟಿಯ ಉನ್ನತಾದರ್ಶಗಳನ್ನು ಗುರಿಯಾಗಿಟ್ಟುಕೊಂಡು ಕಾಯಕ, ದಾಸೋಹ ಎಂಬ ಪ್ರಮುಖ ತತ್ವಗಳಾಧಾರದ ಮೇಲೆ ಸ್ಥಾಪನೆಯಾದದ್ದೇ “ಶರಣ ಧರ್ಮ”

ಎಂಥಹ ವಿಸ್ಮಯಕಾರಿ ಕ್ರಾಂತಿಯಿದು. ‘ಚಂದನದ ಸನ್ನಿಧಿಯಲ್ಲಿ ಬೇವು ಬೊಬ್ಬುಲಿ ಮರ<ಗಳು ಪರಿಮಳಿತವಾಗುವಂತೆ ಶರಣರ ಸಂಗಮದಿಂದ ಪಾಮರರು ಕ್ಷುಲ್ಲಕತೆಯ ಅಭಿಶಾಪದಿಂದ ಬಿಡುಗಡೆ ಪಡೆದು ದಿವ್ಯಜೀವನ ಪಥದ ಪಯಣಿಗರಾದರು. ಆದಿಜನರು, ಅಂಬಿಗರು, ಗೋವಳರು, ತುರುಗಾಹಿಗಳು, ಚರ್ಮಕಾರರು, ಬೇಸಾಯಗಾರರು, ಸ್ತ್ರೀಯರು, ಪುರುಷರು, ಬಡವರು, ಲ್ಲಿದರು, ಎಲ್ಲರೂ ತಮ್ಮ ತಾವರಿದು ತಮ್ಮಿಂದ ತಮ್ಮ ಉದ್ಧಾರವನ್ನು ಮಾಡಿಕೊಂಡು ತಾವು ತಾವಾಗಿ ತೊಳಗಿ ಬೆಳಗಿದರು.tdhwsjtrjryj

“ಜ್ಯೋತಿಯ ಬೆಳಕಿನಲ್ಲಿ ಜ್ಯೋತಿಯ ಕಾಂಬಂತೆ,
ಕಣ್ಣಿಂದ ಕನ್ನಡಿಯ ನೋಡಿ ಕಣ್ಣಕಲೆಯ ಕಾಂಬಂತೆ,
ತನ್ನಿಂದ ತಾ ನೋಡಿ ತನ್ನನರಿಯಬೇಕು!
ತನ್ನನರಿಯದವ ನಿಮ್ಮನೆ
ತ್ತ ಬಲ್ಲನೋ?”

ಎಂದು ಹಾಡಿದ ಈ ಶರಣರು ಆತ್ಮೋದ್ಧಾರ ಮಾಡಿಕೊಂಡು ಬಸವಣ್ಣನ ಸಂಗಡ ಹೆಜ್ಜೆ ಹಾಕಿದರು.

ಶರಣ ಕ್ರಾಂತಿ ಜನವಾಣಿಯನ್ನೇ ದೇವವಾಣಿಯನ್ನಾಗಿಸಿದ ಕ್ರಾಂತಿ. ಕೀಳು ಕಸುಬನ್ನು ಕಾಯಕವನ್ನಾಗಿಸಿ, ಕಾಯಕವನ್ನು ಕೈಲಾಸವನ್ನಾಗಿ ಮಾರ್ಪಡಿಸಿದ ಕ್ರಾಂತಿ; ಹಾಳು ಹೆಣ್ನನ್ನು ಮಹದೇವಿಯನ್ನಾಗಿ ಪರಿವರ್ತಿಸಿದ ಕ್ರಾಂತಿ. ತೀರ್ಥ, ಶಕುನ, ಸೂತಕ, ತಿಥಿ, ವಾರ, ನಕ್ಷತ್ರ, ಜ್ಯೋತಿಷ್ಯ, ಬಹುದೇವತಾ ಪೂಜೆ, ಪಶುಬಲಿ, ಅಂಧಶ್ರದ್ಧೆ, ಅವಿಚಾರಪರತೆ, ದಾಂಭಿಕತೆ, ಅಸಹಿಷ್ಣುತೆ ಇತ್ಯಾದಿಗಳ ಕಪಿಮುಷ್ಟಿಯಿಂದ ಮಾನವನನ್ನು ಮುಕ್ತಮಾಡಿ ಮಾನವತೆಯ ನಾಂದಿಯನ್ನು ಹಾಡಿದ ಕ್ರಾಂತಿ. ಕಲ್ಲಿಗೆರೆಯುವ ಹಾಲನ್ನು ಜೀವಿಗೆರೆಯೆಂದು ಸಾರಿ, ಕಲ್ಲುದೇವರುಗಳ ಗೀಳು ಬಿಡಿಸಿ ಜೀವಿಗಳ ಹೃದಯದಲ್ಲಿದೇವನನ್ನು ಕಾಣಹಚ್ಚಿದ ಕ್ರಾಂತಿ. ಹೀಗೆ ಆಲೋಚಿಸಿದಂತೆಲ್ಲಾ ಅದ್ಭುತವಾಗಿ ತೋರುವುದು ಈ “ಶರಣ ಕ್ರಾಂತಿ”.

ಆ ಕ್ರಾಂತಿಯ ಪರಿಣಾಮವಾಗಿ ಮಾತು ಜ್ಯೋತಿರ್ಲಿಂಗವಾಯಿತು, ಮರ್ತ್ಯವು ಕರ್ತಾರನ ಕಮ್ಮಟವಾಯಿತು, ಅಲ್ಲಿ ಸಲ್ಲುವುದಕ್ಕೆ ಇಲ್ಲಿ ಸಲ್ಲುವುದೇ ಆಧಾರವಾಯಿತು, ಅರಿವೇ ಗುರುವಾಯಿತು, ಆಚಾರವೇ ಸ್ವರ್ಗ ಅನಾಚಾರವೇ ನರಕವಾಯಿತು, ಶಿವನೇ ದೈವ, ಕೊಲ್ಲದಿರ್ಪುದೇ ಧರ್ಮ, ಅಧರ್ಮದಿಂದ ಬಂದುದ ನೊಲ್ಲನಿರ್ಪುದೇ ನೇಮ, ಆಸೆಯಿಲ್ಲದಿರ್ಪುದೇ ತಪ, ರೋಷವಿಲ್ಲದಿರ್ಪುದೇ ಜಪ, ವಂಚನೆಯಿಲ್ಲದಿರ್ಪುದೇ ಭಕ್ತಿಯಾಯಿತು. ಸತ್ಯ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕವಾಯಿತು, ಆಚಾರವೇ ಕುಲ, ಅನಾಚಾರವೇ ಹೊಲೆಯೆನಿಸಿತು, ಮೃದುವಚನಗಳೇ ಜಪತಪಗಳಾದವು, ಸದುವಿನಯವೇ ಶಿವನೊಲಿಮೆಯಾಯಿತು, ದಯವೇ ಧರ್ಮದ ಮೂಲವಾಯಿತು, ಕಾಯಕವೇ ಕೈಲಾಸವಾಯಿತು, ಭಕ್ತನ ಅಂಗಳವೇ ವಾರಣಾಸಿಯಾಯಿತು, ಕಾಯವೇ ಕಾಶಿ, ಒಡಲೇ ಕೇದಾರ, ಮಾಡಿ ನಿಢುವ ಹಸ್ತವೇ ಸೇತುಬಂಧ ರಾಮೇಶ್ವರ, ದೇಹವೇ ದೇಗುಲವಾದವು, ಪರದನವನೊಲ್ಲದಿಪ್ಪುದೇ ವ್ರತವಾಯಿತು, ಪರಸ್ತ್ರೀಯರ ಕೂಡದಿಪ್ಪುದೇ ಶೀಲವಾಯಿತು, ಬಂದುದ ಕೈಕೊಂಡು ಇದ್ದುದ ವಂಚನೆಯ ಮಾಡದೇ, ನಡೆಯ ತಪ್ಪದೆ, ನುಡಿದು ಹುಸಿಯದೆ, ಸಕಲ ಜೀವಾತ್ಮರಿಗೆ ಲೇಸ ಬಯಸುವುದೇ ನೇಮವಾಯಿತು, ಆಶೆಯೇ ದಾಸತ್ವ, ನಿರಾಶೆಯೇ ಏಶತ್ವವಾಯಿತು, ಬಂದುದೇ ಪರಿಣಾಮ, ನಿಂದುದೇ ನಿವಾಸವಾಯಿತು, ಕಾಮವೇ ಪೀಠ, ಪ್ರಾಣವೇ ಲಿಂಗವಾಯಿತು. ನಿದ್ರೆಗೈದಡೆ ಜಪ, ಎದ್ದರೆ ಶಿವರಾತ್ರಿ, ನಡೆದುದೇ ಪಾವನ, ನುಡಿದುದೇ ಶಿವತತ್ವವಾಯಿತು.
ಸಮಾಜದಲ್ಲಿ ಸಮಾನತೆ, ಸ್ವಯಂಪೂರ್ಣತೆ, ಶ್ರಮಗೌರವ-ಗುಣಗೌರವಗಳನ್ನು ಸ್ಥಾಪಿಸಿದಂತೆ ಸಿದ್ದಾಂತದಲ್ಲಿ ಸಮನ್ವಯವನ್ನು ಸಾಧಿಸಿದರು ನಮ್ಮ ಶರಣರು. ಪುಣ್ಯಪಾಪಗಳು ಅವರಿಷ್ಟವಾದವು. ದೇಹ ಧರಿಸಿಯೂ ನಿರ್ದೇಹಿಗಳಾಗಿ, ಈ ಜಗತ್ತಿರುವಾಗಲೇ ಜೀವನ್ಮುಕ್ತರಾಗಿ, ಸಂಸಾರದಲ್ಲಿದ್ದೂ ನಿಜವನರಿದ ನಿಶ್ಚಿಂತರಾಗಿ, ಮಹವನರಿದ ಮಹಾಂತರಾಗಿ ಬಾಳಿ ಬೆಳಕಾದವರು ನಮ್ಮ ಶರಣ ಬಂಧುಗಳು.
ಸತ್ಯಶುದ್ಧ ಕಾಯಕದಲ್ಲಿ ನಿತ್ಯನಿರತರಾಗಿ, ಗಳಿಸಿದುದರಲ್ಲಿ ಅಗತ್ಯವಿರುವಷ್ಟನ್ನು ಮಾತ್ರ ಪರಿಗ್ರಹಿಸಿ, ಅಸಂಗ್ರಹ ಬುದ್ಧಿಯಿಂದ ಉಳಿದುದನ್ನು ಗುರು-ಲಿಂಗ-ಜಂಗಮ ಸೇವೆಗೆ ಸಲ್ಲಿಸ ಬಯಸಿ, ಸವ್ರಿಗೆ ಲೇಸನೇ ಬಯಸುತ್ತಾ ಬದುಕುವುದೇ ಇವರ ಬಾಳ ಮೌಲ್ಯವಾಯಿತು. ಬಹಳ ದಿನ ಬದುಕುವಿದೇ ಭಾಗ್ಯವಲ್ಲ; ಅಲ್ಪದಿನ ಬದುಕುದರೂ “ಸೈ” ಎನಿಸಿಕೊಂಡು ಬದುಕಬೇಕೆಂದು ಧೃಢವಾಗಿ ನಂಬಿ ಅದರಂತೆ ಬದುಕಿ ನಾವೂ ಅದರಂತೆ ಬದುಕಲು ದಾರಿ ತೋರಿ ಹೋಗಿದ್ದಾರೆ ಶರಣರು.

ನಮ್ಮ ಶರಣ ಬಂಧು ತಮ್ಮ ಈ ಎಲ್ಲಾ ಆಲೋಚನೆಗಳನ್ನು “ವಚನ”ಗಳ ಮೂಲಕ ಸಾಮಾನ್ಯರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ದಾಖಲಿಸಿಟ್ಟು ಹೋಗಿದ್ದಾರೆ. ಹಿರಿಯ ಸಂಶೋಧಕರ, ವಿದ್ವಾಂಸರ ಇದುವರೆಗಿನ ಸಂಶೋಧನೆಗಳ ಪ್ರಕಾರ ಸುಮಾರು ೨೬೦ ಜನ ವಚನಕಾರರು (ಶರಣ ಬಂಧುಗಳು) ಸುಮಾರು ೨೧,೦೦೦ ವಚನಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಇಡೀ ಮನುಕುಲದ ಬದುಕನ್ನು ಸಹನೀಯವಾಗಿಸುವುದು ಹೇಗೆ? ಬದುಕಿಗೊಂದು ಅರ್ಥ ಬರುವಂತೆ ಬದುಕಿ ಬಾಳುವುದು ಹೇಗೆ ಎಂಬ ಬಾಳ ಸಾರವೇ ಇದೆ. ಇಷ್ಟೂ ವಚನಗಳಲ್ಲಿ ಒಂದೇ ಒಂದು ವಚನ ಸಹ ವ್ಯರ್ಥ ಎಂಬುವಂತಿಲ್ಲ. ಎಲ್ಲಾ ವಚನಗಳು ವಚನಕಾರರ ಅನುಭವ ಮೂಸೆಯಿಂದ ಹೊರಬಂದ ಅಣಿಮುತ್ತುಗಳಾಗಿವೆ.

ಆದುದರಿಂದ ೧೨ನೇಯ ಶತಮಾನದಲ್ಲಿ ಜನಸಾಮಾನ್ಯರ ಬದುಕಿಗೊಂದು ಅರ್ಥವಂತಿಕೆ ತಂದುಕೊಟ್ಟ ಕನ್ನಡಿಗರ ಹೆಮ್ಮೆಯ ಮೊಟ್ಟಮೊದಲ ಧರ್ಮವಾದ “ಶರಣ ಧರ್ಮ” ಹಾಗೂ ಅಂದಿನ “ಶರಣ ಬಂಧುಗಳ” ಜೀವನ ವಿಧಾನವನ್ನುಒಳಹೊಕ್ಕು ನೋಡಿ ತಿಳಿದು, ಅರ್ಥೈಸಿ, ಅರಿತುಕೊಂಡು ನಮ್ಮಗಳ ಜೀವನದಲ್ಲಿಯೂ ಅಳವಡಿಸಿಕೊಳ್ಳುವುದು ಅಶಾಂತಿ, ಅಸಹಿಷ್ಣುತೆ, ಕೋಮು ಕ್ಲೇಷಗಳೇ ತಾಂಡವವಾಡುತ್ತಿರುವ ಇಂದಿನ ಯುಗದಲ್ಲಿ ಬಹಳ ಅವಶ್ಯಕ. ಅವರು ನಡೆದ ದಾರಿಯಲ್ಲಿ, ಅವರ ನುಡಿ ಬೆಳಕಿನಲ್ಲಿ ನಾವು ಸಾಗಿದರೆ ಮಾತ್ರ ಅವರನ್ನು ನೆನೆವ ಅರ್ಹತೆ ನಮಗೆ ಬರುತ್ತದೆ. ಇದಿಲ್ಲದೆ ಸುಮ್ಮನೆ ಚರಿತ್ರೆ ಓದಿ, ಅವರನ್ನು ಬರಿದೇ ಸ್ಮರಿಸಿ ಪ್ರಯೋಜನವಿಲ್ಲ.
ಸರಳತೆ, ಸಮಾನತೆ, ಸಹಿಷ್ಣುತೆ, ಶಾಂತಿ ನೆಮ್ಮದಿಗಳ ನಿಜ ಪಾಠ ನಮಗೆ ಅಂದಿನ ಶರಣರ ಜೀವನ ವಿಧಾನದಿಂದ ನಮಗೆ ತಿಳಿದು ಬರುತ್ತದೆ.

ಈ ಮಹತ್ವದ ಅವಶ್ಯಕತೆಯನ್ನು ಮನಗಂಡು ನಾವು ಈಗ ರೂಪಿಸಲು ಹೊರಟಿರುವುದೇ “ಶರಣ ಸಂಗಮ” ಎಂಬ ಶರಣರ ಜೀವನ-ಸಾಧನೆಗಳyy7elo68oe68oe68ನ್ನು ದರ್ಶನ ಮಾಡಿಸುವ ಸಾಕ್ಷ್ಯಚಿತ್ರಗಳ ಸರಣಿ ಯೋಜನೆ.ಈ “ಶರಣ ಸಂಗಮ” ಸಾಕ್ಷ್ಯಚಿತ್ರ ಸರಣಿಯಲ್ಲಿ ಪ್ರತಿಯೊಬ್ಬ ಶರಣರ ಬದುಕು-ಬರಹ-ಸಾಧನೆ-ಅವರ ಪ್ರಮುಖ ತತ್ವ ಸಿದ್ದಾಂತಗಳು-ಪ್ರಮುಖ ಪ್ರತಿಪಾದನೆಗಳು-ಪ್ರಮುಖ ವಚನಗಳು-ಶರಣ ಚಳುವಳಿಗೆ ನೀಡಿದ ಕಾಣಿಕೆ ಮೊದಲಾದ ಸಮಗ್ರ ವಿಚಾರಗಳು ದಾಖಲಿಸಲು ನಾವು ಹೊರಟಿದ್ದೇವೆ.ಈ ರೀತಿಯಾಗಿ ಇದುವರೆಗೂ ಗುರುತಿಸಲಾಗಿರುವ ಒಟ್ಟು ೨೬೦ ಶರಣರ ಬದುಕನ್ನು ವಿವರವಾಗಿ ದೃಶ್ಯಮಾಧ್ಯಮದಲ್ಲಿ ದಾಖಲಿಸಿ ಅದನ್ನು ಜಗತ್ತಿನಾದ್ಯಂತ ಎಲ್ಲರಿಗೂದೊರೆಯುವಂತೆ ಮಾಡುವ ಬೃಹತ್ ಯೋಜನೆ ಇದಾಗಿದೆ.


“ಶರಣ ಸಂಗಮ” ಸಾಕ್ಷ್ಯಚಿತ್ರ ಸರಣಿಯ ಕಾರ್ಯವಿಧಾನ ಈ ಕೆಳಗಿನಂತಿದೆ:

ಒಟ್ಟು ೨೬೦ ಶರಣರನ್ನು ಹತ್ತತ್ತು ಶರಣರ ಗುಂಪುಗಳನ್ನಾಗಿ ಮಾಡಿ ಆ ಹತ್ತು ಶರಣರ ಕುರಿತ ಸಾಕ್ಷ್ಯಚಿತ್ರಗಳನ್ನು ಒಂದೊಂದು ಸಂಪುಟವನ್ನಾಗಿ ಹೊರತರುವುದು ನಮ್ಮ ಕಾರ್ಯವಿಧಾನವಾಗಿದೆ. ಪ್ರತಿಯೊಬ್ಬ ಶರಣರ ಬಗ್ಗೆ ೧೫ ನಿಮಿಷಗಳ ಸಾಕ್ಷ್ಯಚಿತ್ರ ಮಾಡಲಾಗುವುದು. ಅದರಂತೆ ಹತ್ತು ಜನರ ಸಾಕ್ಷ್ಯಚಿತ್ರವೆಂದರೆ ಒಟ್ಟು ೨.೩೦ (ಎರಡೂವರೆ)ಗಂಟೆಗಳ ಸಾಕ್ಷ್ಯಚಿತ್ರದ ಒಂದು ಸಂಪುಟ ಸಿದ್ಧವಾಗುತ್ತದೆ. ಒಂದೊಂದು ಸಂಪುಟವು ಒಂದೊಂದು ಡಿವಿಡಿಯಾಗಿ ಹೊರತರಲಾಗುವುದು. ಹೀಗೆ ೨೬೦ ಶರಣರನ್ನು ೨೬ ಗುಂಪುಗಳನ್ನಾಗಿ ಮಾಡಿ ಒಟ್ಟು ೨೬ “ಶರಣ ಸಂಗಮ” ಸಂಪುಟಗಳಲ್ಲಿ ೧೨ನೇ ಶತಮಾನದ ಶರಣರ ಬದುಕನ್ನು ಸಮಗ್ರವಾಗಿ ದಾಖಲಿಸಿ ಅದನ್ನು ಎಲ್ಲೆಡೆಯೂ, ಎಲ್ಲರಿಗೂ ದೊರೆಯುವಂತೆ ಮಾಡುವ ಬೃಹತ್ ಯೋಜನೆ ಇದಾಗಲಿದೆ. ಅಂದರೆ ಒಟ್ಟು ೬೫ ಗಂಟೆಗಳ, ಶರಣರ ಕುರಿತ ದೃಶ್ಯ ದಾಖಲೆ೨೬ ಡಿವಿಡಿಗಳಲ್ಲಿ!! ಇಡೀ ಭಾರತೀಯ ದೃಶ್ಯ ಮಾಧ್ಯಮ ಇತಿಹಾಸದಲ್ಲಿ ಮತ್ತು ಧಾರ್ಮಿಕ, ಸಾಂಸ್ಕೃತಿಕ ಇತಿಹಾಸದಲ್ಲಿ ಇಷ್ಟು ಅಗಾಧವಾದ, ಅಷ್ಟೇ ಸಮಗ್ರವೂ, ಪರಿಣಾಮಕಾರಿಯೂ ಆದ ಯೋಜನೆ ಇದೂವರೆಗೂ ಬಂದಿರುವ ಉದಾಹರಣೆ ಇಲ್ಲ. ಅಂತಹ ಒಂದು ಸಮಗ್ರವಾದ, ಬೃಹತ್
ಸಾಕ್ಷ್ಯಚಿತ್ರ ಸರಣಿಯ ಯೋಜನೆ ಈ “ಶರಣ ಸಂಗಮ”ವಾಗಿದೆ.

ಕೆ.ಎಸ್ ಪರಮೇಶ್ವರ
ನಿರ್ದೇಶಕರು | 9008099686

ಜರಗನಹಳ್ಳಿ ಕಾಂತರಾಜು
ನಿರ್ಮಾಪಕರು | 9902666492
10646620_1399879923600764_927958826007156795_n12310434_763770863734648_2382811089663833342_n